ಸಾರಾಂಶ
ರಾಮನಗರ: ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಭಾವಸಾರ ಕ್ಷತ್ರಿಯ ಸಮಾಜದಿಂದ ಶ್ರೀ ಪಾಂಡುರಂಗಸ್ವಾಮಿ ಹಾಗೂ ರುಕ್ಮಿಣಿ ಅವರ ದಿಂಡಿ ಮಹೋತ್ಸವ ಆಚರಿಸಲಾಯಿತು.
ರಾಮನಗರ: ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಭಾವಸಾರ ಕ್ಷತ್ರಿಯ ಸಮಾಜದಿಂದ ಶ್ರೀ ಪಾಂಡುರಂಗಸ್ವಾಮಿ ಹಾಗೂ ರುಕ್ಮಿಣಿ ಅವರ ದಿಂಡಿ ಮಹೋತ್ಸವ ಆಚರಿಸಲಾಯಿತು.
ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಶ್ರೀ ಪಾಂಡುರಂಗ ಹಾಗೂ ರುಕ್ಮಿಣಿ ಅವರ ಉತ್ಸವ ಮೂರ್ತಿ ಸ್ಥಾಪಿಸಿ ಧಾರ್ಮಿಕ ಕೈಂಕರ್ಯಗಳೊಂದಿಗೆ ದಿಂಡಿ ಮಹೋತ್ಸವ ಆಚರಿಸಲಾಯಿತು. ಉತ್ಸವದ ಪ್ರಯುಕ್ತ ಶನಿವಾರ ಸಂಜೆ ಪೋತಿ ಸ್ಥಾಪನೆ ಮಾಡಲಾಗಿತ್ತು. ಭಾನುವಾರ ಬೆಳಗ್ಗೆ ೬ ಗಂಟೆಗೆ ಧಾರ್ಮಿಕ ಕೈಂಕರ್ಯಗಳು ಆರಂಭವಾಯಿತು. ಮೊದಲಿಗೆ ವಾರ್ಕರೆಗಳು ಕಾಕಡಾರತಿ, ಅಭಿಷೇಕ, ವಿಶೇಷ ಅಲಂಕಾರದ ಬಳಿಕ ವೀಣಾಕರಿ ಸೇರಿದಂತೆ ೨೦ ಮಂದಿ ವಾರ್ಕರೆಗಳು ಪಾಂಡುರಂಗ ಸ್ವಾಮಿ ಭಜನೆ ನಡೆಸಿಕೊಟ್ಟರು. ಮಧ್ಯಾಹ್ನ ಮಹಾಮಂಗಳಾರತಿ ನಡೆಯಿತು. ಮೆರವಣಿಗೆ: ದೇವರ ಮೂರ್ತಿಗಳನ್ನು ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಶ್ರೀರಾಮ ದೇವಾಲಯದ ಆವರಣದಿಂದ ಆರಂಭವಾದ ಮೆರವಣಿಗೆಯು ಆಗ್ರಹಾರ ಎಂ.ಜಿ.ರಸ್ತೆ ಹಾಗೂ ಮುಖ್ಯ ರಸ್ತೆ ಬಳಸಿ, ಛತ್ರದ ಬೀದಿ ಮುಖಾಂತರ ದೇವಾಲಯ ತಲುಪಿತು. ಮೆರವಣಿಗೆ ವೇಳೆ ಸಿಗುವ ದೇವಾಲಯಗಳ ಮುಂಭಾಗ ವೀಣಾಕರಿ ಹಾಗೂ ವಾರ್ಕರೆಗಳು ದೇವರಿಗೆ ಅಭಂಗ ಸಮರ್ಪಿಸಿ ಆರತಿ ಭಜನೆ ನಡೆಸಿಕೊಟ್ಟರು.ಯಶವಂತಪುರ ಸಮಾಜ:
ವೀಣಾಕರಿಯಾಗಿ ಬೆಂಗಳೂರಿನ ಯಶವಂತಪುರ ಭಾವಸಾರ ಕ್ಷತ್ರಿಯ ಸಮಾಜದ ದೇವೇಂದ್ರಕುಮಾರ್ ನಡೆಸಿಕೊಟ್ಟರು. ಇವರ ನೇತೃತ್ವದಲ್ಲಿ ೨೦ ಮಂದಿ ವಾರ್ಕರೆಗಳು ಭಜನೆ ನಡೆಸಿದರು. ಕಾರ್ಯಕ್ರಮದಲ್ಲಿ ಕನಕಪುರ ಸಮಾಜದ ಮಹಿಳೆಯರು ಹಾಗೂ ರಾಮನಗರದ ಶ್ರೀಲಕ್ಷ್ಮೀ ತಂಡದ ಸದಸ್ಯೆಯರು ಭಜನೆ ಮಾಡಿದರು. ಚನ್ನಪಟ್ಟಣ ಹಾಗೂ ಮಾಗಡಿ ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರು ಆಗಮಿಸಿದ್ದರು.ಕಾರ್ಯಕ್ರಮದಲ್ಲಿ ರಾಮನಗರ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಗಣೇಶ್ ರಾವ್, ಉಪಾಧ್ಯಕ್ಷ ಕಿರಣ್ ರಾವ್ ಬಾಂಬೊರೆ, ಕಾರ್‍ಯದರ್ಶಿ ಮಂಜುನಾಥ್ ಬಾಂಬೊರೆ, ಖಜಾಂಚಿ ಮಧುಸೂಧನ್ ರಾವ್ ಬಾಂಬೊರೆ, ಸಮಾಜದ ಹಿರಿಯ ಮುಖಂಡರಾದ ನಾಗರಾಜ್ ರಾವ್ ಬಾಂಬೊರೆ, ನಂಜುಂಡ ರಾವ್ ಪಿಸ್ಸೆ, ಉಮೇಶ್ ರಾವ್ ಜಿಂಗಾಡೆ, ಮಹಿಳಾ ಮುಖಂಡರಾದ ಲತಾ ಜಿಂಗಾಡೆ, ರೇಖಾ ಕುಮಾರ್ ಪತಂಗೆ, ರಾಜೇಶ್ವರಿ ಬಾಯಿ, ಸುಪ್ರಿಯಾ, ರೇಖಾ ಇತರರಿದ್ದರು.
ಪೊಟೋ೨೯ಸಿಪಿಟಿ೧:ರಾಮನಗರದಲ್ಲಿ ಭಾವಸಾರ ಕ್ಷತ್ರಿಯ ಸಮಾಜದಿಂದ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಶ್ರೀಪಾಂಡುರಂಗ ಸ್ವಾಮಿ ದಿಂಡಿ ಉತ್ಸವ ನಡೆಸಲಾಯಿತು.