ಬಾಂಗ್ಲ ಹಿಂದೂಗಳ ಮೇಲಿನ ಹಲ್ಲೆ ಖಂಡಿಸಿ ಪಂಜಿನ ಮೆರವಣಿಗೆ

| Published : Aug 14 2024, 12:55 AM IST

ಸಾರಾಂಶ

ಬಾಂಗ್ಲಾದೇಶದಲ್ಲಿ ಹಿಂದೂ ದೇವಸ್ಥಾನ ಹಾಗೂ ಹಿಂದೂಗಳನ್ನು ಗುರಿಯಾಗಿಸಿಕೊಂಡು ಅಪಾರ ಪ್ರಮಾಣದ ಆಸ್ತಿ, ಮಾನ, ಪ್ರಾಣಗಳನ್ನು ಹಾನಿ ಮಾಡಿದ ಮತೀಯ ಶಕ್ತಿಗಳ ದಂಗೆ ಖಂಡಿಸಿ ಹಿಂದೂ ಜಾಗರಣ ವೇದಿಕೆಯಿಂದ ನೆಹರೂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರತಿಭಟಿಸಲಾಯಿತು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಬಾಂಗ್ಲಾದೇಶದಲ್ಲಿ ಹಿಂದೂ ದೇವಸ್ಥಾನ ಹಾಗೂ ಹಿಂದೂಗಳನ್ನು ಗುರಿಯಾಗಿಸಿಕೊಂಡು ಅಪಾರ ಪ್ರಮಾಣದ ಆಸ್ತಿ, ಮಾನ, ಪ್ರಾಣಗಳನ್ನು ಹಾನಿ ಮಾಡಿದ ಮತೀಯ ಶಕ್ತಿಗಳ ದಂಗೆ ಖಂಡಿಸಿ ಹಿಂದೂ ಜಾಗರಣ ವೇದಿಕೆಯಿಂದ ನೆಹರೂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರತಿಭಟಿಸಲಾಯಿತು.

ಭಜರಂಗದಳದ ಶಿವಮೊಗ್ಗ ವಿಭಾಗೀಯ ಸಂಚಾಲಕ ರಾಜೇಶ್‌ಗೌಡ ಮಾತನಾಡಿ, ಕಳೆದ ಸಾವಿರಾರು ವರ್ಷಗಳಿಂದ ಭಾರತ ಮಾತೆಯ ಸೇವಕರಾಗಿ ನಾವೆಲ್ಲರೂ ಕಾರ್ಯನಿರ್ವಹಿಸುತ್ತಿದ್ದೇವೆ. ಭಾರತ ಮಾತೆ ನಮ್ಮೆಲ್ಲರಿಗೂ ಆದರ್ಶಪ್ರಾಯ. ಭಾರತ ಮಾತೆಯ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವುದೇ ವಿಷಯವಿದ್ದರೂ ಅದನ್ನು ನಾವು ಖಂಡಿಸಲೇಬೇಕು. ಅಖಂಡ ಭಾರತದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಸಂಕಲ್ಪ ಮಾಡಬೇಕು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಘನಘೋರ ಹತ್ಯೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಸೇನೆಯನ್ನು ನಿಯೋಜಿಸಬೇಕು. ಬಾಂಗ್ಲದೇಶದಲ್ಲಿ ವಾಸಿಸುವ ಹಿಂದೂಗಳಿಗೆ ಪೂರ್ಣಪ್ರಮಾಣದ ರಕ್ಷಣೆ ನೀಡುವುದರೊಂದಿಗೆ ಅವರಿಗೆ ಆಗಿರುವ ಆಸ್ತಿಪಾಸ್ತಿ ಹಾನಿಯನ್ನು ಸಹ ಕೇಂದ್ರ ಸರ್ಕಾರ ನೀಡಿ ಶಾಂತಿ ನೆಲೆಸುವಂತೆ ಮಾಡಬೇಕೆಂದರು.

ವಿಶ್ವ ಹಿಂದೂಪರಿಷತ್ ತಾಲ್ಲೂಕು ಅಧ್ಯಕ್ಷ ಡಾ.ಡಿ.ಎನ್.ಮಂಜುನಾಥ, ನಗರ ಘಟಕದ ಅಧ್ಯಕ್ಷ ಕೆ.ಎಂ.ಯತೀಶ್, ಭಜರಂಗದಳದ ಜಿಲ್ಲಾ ಸಹ ಸಂಯೋಜಕ ಬಾಲಕೃಷ್ಣ, ಉಮೇಶ್, ಮಹಂತೇಶ್, ಸಿದ್ದೇಶ್, ಈಶ್ವರನಾಯಕ, ದುಗ್ಗಾವರರಂಗಣ್ಣ, ನಗರಂಗೆರೆ ಮಹಂತೇಶ್, ಎಂ.ಎಸ್.ವಿಶ್ವನಾಥ, ಮಧುಮತಿ, ಮಾರುತಿ, ಈರಣ್ಣ ಮುಂತಾದವರು ಭಾಗವಹಿಸಿದ್ದರು.