ಸ್ಮಶಾನದಲ್ಲಿ ಜನ್ಮದಿನ ಆಚರಿಸಿಕೊಂಡ ಪಪಂ ಸದಸ್ಯ

| Published : Jun 03 2024, 12:30 AM IST

ಸಾರಾಂಶ

ಸ್ಮಶಾಸದಲ್ಲಿ ಜನ್ಮದಿನ ಆಚರಣೆ ಮಾಡಿಕೊಳ್ಳುವ ಮೂಲಕ ಸಮಾಜಕ್ಕೊಂದು ಸಂದೇಶ ನೀಡಿದ್ದು, ವೈಜ್ಞಾನಿಕ ಜಾಗೃತಿ ಮೂಡಿಸುವುದು ನನ್ನ ಬಯಕೆಯಾಗಿದೆ

ಶಿರಹಟ್ಟಿ: ಇಲ್ಲಿಯ ಪಪಂ ಸದಸ್ಯ ಮಂಜುನಾಥ ಘಂಟಿ ಅವರು ತಮ್ಮ ಜನ್ಮದಿನವನ್ನು ಪಟ್ಟಣದ ಹೊರವಲಯದ ಸ್ಮಶಾನದಲ್ಲಿ ಆಚರಿಸಿಕೊಳ್ಳುವ ಮೂಲಕ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದಾರೆ.

ರಾತ್ರಿ ೯ರ ವೇಳೆಗೆ ಕಾಂಗ್ರೆಸ್ ಹಿರಿಯ ಮುಖಂಡರು, ತಮ್ಮ ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳು, ಬಂಧು-ಬಳಗದವರೊಂದಿಗೆ ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಆಚರಿಸಿಕೊಂಡರು. ಹಾಡು, ಹರಟೆಯ ಬಳಿಕ ಸಾಮೂಹಿಕವಾಗಿ ಭೋಜನ ಸವಿದವರು. ಬಳಿಕ ಅಲ್ಲಿಯೇ ನಿದ್ರೆ ಮಾಡಿ ಬೆಳಗ್ಗೆ ಮನೆಗೆ ಮರಳಿದರು.

ಸ್ಮಶಾನ ಎಂದರೆ ಜನಮಾನಸದಲ್ಲಿ ಭಯದ ವಾತಾವರಣವಿದೆ. ಅದು ಮೌಢ್ಯದಿಂದ ಕೂಡಿದೆ. ಈ ಸ್ಮಶಾಸದಲ್ಲಿ ಜನ್ಮದಿನ ಆಚರಣೆ ಮಾಡಿಕೊಳ್ಳುವ ಮೂಲಕ ಸಮಾಜಕ್ಕೊಂದು ಸಂದೇಶ ನೀಡಿದ್ದು, ವೈಜ್ಞಾನಿಕ ಜಾಗೃತಿ ಮೂಡಿಸುವುದು ನನ್ನ ಬಯಕೆಯಾಗಿದೆ ಎಂದು ಮಂಜುನಾಥ ಘಂಟಿ ಹೇಳಿದರು.

ಸ್ಮಶಾನದಲ್ಲಿ ಸಂಭ್ರಮವಿತ್ತು. ಶಾಮಿಯಾನ, ಕುರ್ಚಿ ಹಾಕಿ ವೇದಿಕೆ ನಿರ್ಮಿಸಲಾಗಿತ್ತು. ಕಾಂಗ್ರೆಸ್ ಗಣ್ಯರು, ಮುಖಂಡರು ಆಗಮಿಸಿದ್ದರು. ಕೇಕ್ ಕತ್ತರಿಸುವ ಮೊದಲು ಸಭೆ ನಡೆಸಿ ಮಂಜುನಾಥ ಘಂಟಿ ಅವರಿಗೆ ಹೂ ಮಾಲೆ ಹಾಕಿ ಕೇಕ್ ತಿನ್ನಿಸಿ ಶುಭ ಹಾರೈಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ ಮಾಗಡಿ, ಪಪಂ ಮಾಜಿ ಅಧ್ಯಕ್ಷ ಪರಮೇಶ ಪರಬ, ಬಸವರಾಜ ಸಂಶಿ, ಮಹೇಶ ಹಾರೋಗೇರಿ, ಇಶಾಕಅಮ್ಮದ ಆದ್ರಳಿ, ಬೊಂಬಾಟ ಬಸಣ್ಣ, ಹೊನ್ನಪ್ಪ ಪೋಟಿ, ಆನಂದ ಮಾಳೆಕೊಪ್ಪ, ತಿಪ್ಪಣ್ಣ ಸಂಶಿ, ಮೈಲಾರಪ್ಪ ಹಾದಿಮನಿ, ಯಲ್ಲಪ್ಪ ಸೂರಣಗಿ, ಫಕ್ಕಿರೇಶ ಮ್ಯಾಟಣ್ಣವರ, ನೀಲಪ್ಪ ಪಡಗೇರಿ, ಮುತ್ತಣ್ಣ ಬಾವಿಮನಿ, ಕರಿಯಪ್ಪ ಕುಳಗೇರಿ, ಮಂಜಣ್ಣ ಹಮಗಿ, ದೇವಪ್ಪ ಬಟ್ಟೂರ, ರಾಜು ಮಡಿವಾಳ ಸೇರಿ ಅನೇಕರು ಇದ್ದರು.