ಸಾರಾಂಶ
ಮುಳಗುಂದ: ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಬೌದ್ಧಿಕ ಹಾಗೂ ಶಾರೀರಕ ಬೆಳವಣಿಗೆಯಾಗುತ್ತದೆ. ಮಕ್ಕಳಿಗೆ ಪಾಲಕರು ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಶಿಕ್ಷಕ ಎಸ್.ಬಿ. ದೊಡ್ಡಣ್ಣವರ ಹೇಳಿದರು.
ಪಟ್ಟಣದ ಕುರಬಗೇರಿ ಓಣಿಯಲ್ಲಿ ಶ್ರೀಬೀರಲಿಂಗೇಶ್ವರ ಸೇವಾ ಸಮಿತಿಯಿಂದ ನಡೆದ ಹಾಲುಮತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.ಬದುಕಲು ಅನ್ನ,ನೀರು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಶಿಕ್ಷಣವು ಬೇಕು. ಉತ್ತಮ ಶಿಕ್ಷಣ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಅದನ್ನು ಬಚ್ಚಿಡದೆ ನಿಮ್ಮ ಜ್ಞಾನವನ್ನು ಇನ್ನೊಬ್ಬರಿಗೆ ಹೇಳುವ ಮೂಲಕ ಹಂಚಬೇಕು. ಪಾಲಕರು ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸಿ, ಅವರಿಗೆ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಿ ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನಾಗಿ ಮಾಡುತ್ತಾರೆ. ಮಕ್ಕಳ ಕೈಗೆ ಮೊಬೈಲ್ ನೀಡ ಬೇಡಿ, ಬದಲಿಗೆ ಓದಲು ಹಚ್ಚಬೇಕು, ಮನೆಯಲ್ಲಿ ಓದುವ ವಾತಾವರಣ ನಿರ್ಮಾಣ ಮಾಡಬೇಕು. ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದರೆ ಶಾಲೆಗೆ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ಬರುತ್ತದೆ ಎಂದರು.
ನಿವೃತ್ತ ಆರ್‌ಟಿಓ ಅಧಿಕಾರಿ ಬಿ.ಡಿ. ಹರ್ತಿ ಮಾತನಾಡಿ, ಸಾಧನೆ ಎನ್ನುವುದು ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವುದಲ್ಲ, ಬದಲಾಗಿ ನಾವು ಮಾಡವು ಸಣ್ಣ,ಸಣ್ಣ ಸಾಧನೆ ಏನೂ ನಮಗೆ ಆತ್ಮತೃಪ್ತಿ ನೀಡುತ್ತದೆಯೋ ಅದೇ ನಿಜವಾದ ಸಾಧನೆ. ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಪಡೆಯುವುದು ಅತ್ಯವಶಕವಾಗಿದೆ. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ ಇರಬೇಕು. ಸೋತೆ ಎಂಬ ಭಯದಿಂದ ಕುಗ್ಗದೇ ಮರಳಿ ಯತ್ನವ ಮಾಡು ಎಂಬ ಮಾತಿನಂತೆ ನಿರಂತರ ಪ್ರಯತ್ನ, ಪರಿಶ್ರಮದಿಂದ ಮಾತ್ರ ಯಶಸ್ಸು ಸಿಗಬಲ್ಲದು ಎಂದರು.ಸಾನ್ನಿಧ್ಯ ವಹಿಸಿದ ನೀಲಗುಂದ ಪ್ರಭುಲಿಂಗ ದೇವರು ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ನೀಡಬೇಕು. ಬರಿ ವಿದ್ಯ ಇದ್ದರೆ ಸಾಲದು ಸನ್ನಢತೆ, ಸಂಸ್ಕಾರ ವಿವೇಕವು ಸಹ ಇರಬೇಕು ಎಂದರು.
ಶಿಕ್ಷಕ ಆರ್.ಸಿ. ಗುಂಜಳ ಪ್ರಾಸ್ತಾವಿಕಾಗಿ ಮಾತನಾಡಿ, ಬೀರಲಿಂಗೇಶ್ವರ ಸೇವಾ ಸಮಿತಿಯಿಂದ ಹಾಗೂ ಹಾಲುಮತದ ಸಮಾಜ ಬಾಂಧವರ ಸಹಕಾರದಲ್ಲಿ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಸತತ ೧೪ವರ್ಷಗಳಿಂದ ನಡೆಯುತ್ತಿದ್ದು, ಪ್ರತಿ ವರ್ಷ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ಮಕ್ಕಳಿಗೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿದೆ ಎಂದರು.ಈ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಡಿ. ಬಟ್ಟೂರ, ಆರ್.ಸಿ. ಕಮಾಜಿ, ಬಸವರಾಜ ಸುಂಕಾಪುರ, ಡಾ. ಎಸ್.ಸಿ. ಚವಡಿ, ಫಕ್ಕೀರಯ್ಯ ಅಮೋಘಿಮಠ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ನೀಲಗುಂದ, ಸದಸ್ಯರಾದ ಷಣ್ಮುಖಪ್ಪ ಬಡ್ನಿ, ಮಹಾದೇವಪ್ಪ ಗಡಾದ, ಸುರೇಶ ಯಡ್ರಾವಿ ಹಾಗೂ ಸೇವಾ ಸಮಿತಿ ಸರ್ವ ಪದಾಧಿಕಾರಿಗಳು, ಸಮಾಜದ ಹಿರಿಯರು, ಯುವಕರು, ಮಹಿಳೆಯರು ಇದ್ದರು. ಶಿಕ್ಷಕ ಬಸವರಾಜ ನಿಮ್ಮನಾಯ್ಕರ ನಿರೂಪಿಸಿ, ವಂದಿಸಿದರು.