ಸಾರಾಂಶ
ಶುಚಿತ್ವಕ್ಕೆ ಆದ್ಯತೆ, ಸೊಳ್ಳೆಗಳಿಂದ ರಕ್ಷಣೆ, ಹಗಲು ವೇಳೆ ಕಚ್ಚುವ ಸೊಳ್ಳೆಗಳಿಂದ ಡೆಂಘೀ ಬರುತ್ತದೆ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಮಕ್ಕಳು ರಸ್ತೆಯ ಬದಿಯಲ್ಲಿ ಮಾರಾಟ ಮಾಡುವ ತಿಂಡಿ ತಿನಿಸುಗಳನ್ನು ತಿನ್ನಬಾರದು. ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು.
ಕೆ.ಆರ್.ಪೇಟೆ: ಮಕ್ಕಳ ಆರೋಗ್ಯ ದ ಕಡೆ ಪೋಷಕರು ಹೆಚ್ಚಿನ ಗಮನ ಹರಿಸಿ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಪಟ್ಟಣದ ದುಂಡಶೆಟ್ಟಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಮಕ್ಕಳ ತಜ್ಞ ಡಾ.ಶಶಿಧರ್ ಹೇಳಿದರು.
ಪಟ್ಟಣದ ಪ್ರಗತಿ ಇಂಗ್ಲಿಷ್ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ವೈದ್ಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಆರೋಗ್ಯ ಎಲ್ಲಕ್ಕೂ ಮಿಗಿಲಾದುದ್ದು. ಪ್ರತಿಯೊಬ್ಬರು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು ಎಂದರು.ಶುಚಿತ್ವಕ್ಕೆ ಆದ್ಯತೆ, ಸೊಳ್ಳೆಗಳಿಂದ ರಕ್ಷಣೆ, ಹಗಲು ವೇಳೆ ಕಚ್ಚುವ ಸೊಳ್ಳೆಗಳಿಂದ ಡೆಂಘೀ ಬರುತ್ತದೆ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಮಕ್ಕಳು ರಸ್ತೆಯ ಬದಿಯಲ್ಲಿ ಮಾರಾಟ ಮಾಡುವ ತಿಂಡಿ ತಿನಿಸುಗಳನ್ನು ತಿನ್ನಬಾರದು. ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು ಎಂದರು.
ನಿವೃತ್ತ ಪ್ರಾಂಶುಪಾಲ ಕೆ. ಕಾಳೇಗೌಡ ಮಾತನಾಡಿ, ಎಲ್ಲರೂ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಬೇಕು. ಆರೋಗ್ಯವಿದ್ದರೆ ಎಲ್ಲವನ್ನು ಸಾಧಿಸಲು ಸಾಧ್ಯ ಎಂದರು.ಪ್ರಗತಿ ಶಾಲೆ ಸಿಇಒ ಎಂ.ಕೆ.ಮೋನಿಕಾ ಮಾತನಾಡಿ, ಮಕ್ಕಳು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುವುದರಿಂದ ಹೆಚ್ಚು ಚಟುವಟಿಕೆಯಿಂದ ಇರಲು ಸಾಧ್ಯ. ಪೌಷ್ಟಿಕ ಆಹಾರದಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದರು.
ಮಕ್ಕಳು ವಿವಿಧ ಆರೋಗ್ಯ ಸಂಬಂಧಿಸಿದ ಭಾಷಣ, ಚಿತ್ರಕಲೆ, ನೃತ್ಯ ಹಾಗೂ ಕಿರು ನಾಟಕಗಳನ್ನು ಪ್ರದರ್ಶನ ಮಾಡಿದರು. ಶಿಕ್ಷಕರಾದ ಶಶಿಕಲಾ, ಮಾನಸ, ಗೌತಮಿ, ದೀಪ್ತಿ, ಭೂಮಿಕಾ, ಅಂಬಿಕಾ, ಉಷ, ಸುಕನ್ಯಾ ಹಾಗೂ ಸುಮಿತ್ರ ಇದ್ದರು. ವಿದ್ಯಾರ್ಥಿಗಳಾದ ಗೋವರ್ಧನ್ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ರೇಹಾನ್ ಸ್ವಾಗತಿಸಿದರು. ಗೌರೀಶ್ ವಂದಿಸಿದರು.