ಪೋಷಕರು ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು: ಡಿ.ಪಿ.ಸ್ವಾಮಿ

| Published : Sep 06 2024, 01:11 AM IST

ಪೋಷಕರು ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು: ಡಿ.ಪಿ.ಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಪಾಶ್ಚಾತ್ಯ ಸಂಸ್ಕೃತಿಯು ಭಾರತೀಯ ಸಂಸ್ಕೃತಿಗೆ ಧಕ್ಕೆ ಉಂಟು ಮಾಡುತ್ತಿದೆ. ಇಂದಿನ ಯುವ ಪೀಳಿಗೆ ಭಾರತೀಯ ಸಂಸ್ಕೃತಿ ಮರೆದು ವಿದೇಶಿ ಸಂಸ್ಕೃತಿಗೆ ಮಾರು ಹೋಗಿದ್ದಾರೆ. ಮಕ್ಕಳು ಚಂಚಲ ಮನಸ್ಸನ್ನು ಬದಿಗಿಟ್ಟು ತಮ್ಮಲ್ಲಿರುವ ಪ್ರತಿಭೆ ಹೊರಹಾಕಲು ಇಂತಹ ವೇದಿಕೆಗಳು ಸಹಕಾರಿಯಾಗಲಿದೆ. ಪೋಷಕರು ಮತ್ತು ಶಿಕ್ಷಕರು ಸಹ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು.

ಕನ್ನಡಪ್ರಭ ವಾರ್ತೆ ಭಾರತೀನಗರ

ಮಕ್ಕಳಲ್ಲಿನ ಪ್ರತಿಭೆಗೆ ಪೋಷಕರು ಪ್ರೋತ್ಸಾಹ ನೀಡಿ ಸಾಧಕರಾಗಲು ಪ್ರೇರೇಪಿಸಬೇಕು ಎಂದು ಭಾರತ ವಿಕಾಸ ಪರಿಷದ್ ಕರ್ನಾಟಕದ ದಕ್ಷಿಣ-ಪ್ರಾಂತ ನಿಕಟ ಪೂರ್ವ ಅಧ್ಯಕ್ಷ ಡಿ.ಪಿ ಸ್ವಾಮಿ ತಿಳಿಸಿದರು.

ಚಿಕ್ಕರಸಿನಕೆರೆ ಕಾಲಭೈರವೇಶ್ವರ ಸಮುದಾಯ ಭವನದಲ್ಲಿ ಭಾರತ ವಿಕಾಸ ಪರಿಷದ್ ಭಾರತೀನಗರ ಬೌದ್ಧಾಯನ ಶಾಖೆ ವತಿಯಿಂದ ನಡೆದ ರಾಷ್ಟ್ರೀಯ ಸಮೂಹ ಗೀತ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಚಂಚಲ ಮನಸ್ಸನ್ನು ಬದಿಗಿಟ್ಟು ತಮ್ಮಲ್ಲಿರುವ ಪ್ರತಿಭೆ ಹೊರಹಾಕಲು ಇಂತಹ ವೇದಿಕೆಗಳು ಸಹಕಾರಿಯಾಗಲಿದೆ. ಪೋಷಕರು ಮತ್ತು ಶಿಕ್ಷಕರು ಸಹ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಪಾಶ್ಚಾತ್ಯ ಸಂಸ್ಕೃತಿಯು ಭಾರತೀಯ ಸಂಸ್ಕೃತಿಗೆ ಧಕ್ಕೆ ಉಂಟು ಮಾಡುತ್ತಿದೆ. ಇಂದಿನ ಯುವ ಪೀಳಿಗೆ ಭಾರತೀಯ ಸಂಸ್ಕೃತಿ ಮರೆದು ವಿದೇಶಿ ಸಂಸ್ಕೃತಿಗೆ ಮಾರು ಹೋಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಶಾಖೆ ನಿಕಟಪೂರ್ವ ಅಧ್ಯಕ್ಷ ಎಂ.ಮಾಯಪ್ಪ ಅಮಾತನಾಡಿ, ಮಕ್ಕಳಲ್ಲಿ ರಾಷ್ಟ್ರಾಭಿಮಾನ ಬೆಳೆಯಬೇಕೆಂಬ ಉದ್ದೇಶದಿಂದ ಭಾರತ ವಿಕಾಸ ಪರಿಷದ್ ಅಡಿಯಲ್ಲಿ ಹಲವು ವರ್ಷಗಳಿಂದ ಗೀತಗಾಯನ ಸ್ಪರ್ಧೆಯನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ ಎಂದರು.

ನಂತರ ಸಮೂಹಗಾಯನ ಸ್ಪರ್ಧೆಯಲ್ಲಿ ಪ್ರಥಮ - ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್, ದ್ವಿತೀಯ - ಪ್ರಶಾಂತ್ ಸ್ಕೂಲ್ ಆಫ್ ಬ್ರಿಲಿಯನ್ಸ್ , ತೃತೀಯ ಬಹುಮಾನ ಸರ್ಕಾರಿ ಪ್ರೌಢಶಾಲೆ ಸಿ.ಎ.ಕೆರೆ ಪಡೆದುಕೊಂಡಿತು.

ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಡಿ.ಕೆ.ಗೌಡ ಪ್ರೌಢಶಾಲೆ ಚಂದೂಪುರ, ದ್ವಿತೀಯ - ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್, ತೃತೀಯ ಜನನಿ ಪ್ರೌಢಶಾಲೆ, 4ನೇ ಬಹುಮಾನ ಸರ್ಕಾರಿ ಪದವಿ ಪೂರ್ವ ಶಾಲೆ ಚಂದೂಪುರ ಪಡೆದುಕೊಂಡಿದೆ.

ಪರಿಷದ್ ಭಾರತೀನಗರ ಬೌದ್ಧಾಯನ ಶಾಖೆ ಅಧ್ಯಕ್ಷ ಶಿವಮಾದೇಗೌಡ ಅಧ್ಯಕ್ಷತೆ ವಹಿಸಿದ್ದರು. ಚಿಕ್ಕರಸಿಕೆರೆ ಪ್ರೌಢಶಾಲೆ ಹಿರಿಯ ಶಿಕ್ಷಕ ದೇವರಾಜು, ಖಜಾಂಚಿ ಗಾಯಿತ್ರಿ, ಸದಸ್ಯರಾದ ಮಂಜುಳ, ಕವಿತಾ, ತೀರ್ಪುಗಾರರಾದ ಅಂಬರಹಳ್ಳಿ ಸ್ವಾಮಿ, ಕೀಲಾರ ರಮೇಶ, ನಾಗಮಂಗಲ ಪಾವನಿ ಉಪಸ್ಥಿತರಿದ್ದರು.