ಮಕ್ಕಳ ಕಾರ್ಯಚಟುವಟಿಕೆಗಳ ಬಗ್ಗೆ ಪೋಷಕರು ಗಮನಹರಿಸಿ: ಡಾ.ಚನ್ನಮಲ್ಲಿಕಾರ್ಜುನ ಸ್ವಾಮೀಜಿ

| Published : Feb 13 2024, 12:46 AM IST

ಮಕ್ಕಳ ಕಾರ್ಯಚಟುವಟಿಕೆಗಳ ಬಗ್ಗೆ ಪೋಷಕರು ಗಮನಹರಿಸಿ: ಡಾ.ಚನ್ನಮಲ್ಲಿಕಾರ್ಜುನ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳಿಸುವ ಜೊತೆಗೆ ಮಕ್ಕಳ ಸಚ್ಚಾರಿತ್ರ್ಯ ನಡವಳಿಕೆಗೆ ಬುನಾದಿ ಹಾಕಲು ಹಲವು ಕಾರ್ಯಕ್ರಮಗಳ ಉಚಿತವಾಗಿ ಹಮ್ಮಿಕೊಳ್ಳುತ್ತಿದ್ದು, ಇದರಲ್ಲಿ ಪೋಷಕರು ತಮ್ಮ ಮಕ್ಕಳ ಜೊತೆ ಪಾಲ್ಗೊಳ್ಳಬೇಕೆಂದು ಸಲಹೆ ನೀಡಿದರು. ಭಕ್ತರ ಉದಾರತೆಯಿಂದ ಶ್ರೀಮಠದ ಎಲ್ಲಾ ಕಾರ್ಯಕ್ರಮಗಳು ನಿರ್ವಿಘ್ನವಾಗಿ ನಡೆಯುತ್ತಿವೆ. ಸಮಯವು ಹೇಗಾದರೂ ಕಳೆದು ಹೋಗುತ್ತದೆ ಒಳ್ಳೆಯ ಉದ್ದೇಶಗಳಿಗಾಗಿ ಎಲ್ಲರೂ ಸಮಯದ ಸದ್ಭಳಕೆ ಮಾಡಿಕೊಳ್ಳಿ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪೋಷಕರು ತಮ್ಮ ದೈನಂದಿನ ಒತ್ತಡದ ಬದುಕಿನಲ್ಲಿ ಮಕ್ಕಳ ಕಾರ್ಯಚಟುವಟಿಕೆಗಳ ಬಗ್ಗೆ ಗಮನಹರಿಸದಿರುವುದು ಉತ್ತಮ ಬೆಳವಣಿಗೆಯಲ್ಲ, ಮುಂದೆ ಇದು ಭಾರಿ ಅನಾಹುತಕ್ಕೂ ನಾಂದಿಯಾಗಬಹುದು ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಹಿರೇಕಲ್ಮಠದಲ್ಲಿ ಅಮಾವಾಸ್ಯೆ ಪ್ರಯುಕ್ತ ಹಮ್ಮಿಕೊಂಡಿದ್ದ ಶ್ರೀ ಚನ್ನಪ್ಪಸ್ವಾಮಿ ಬೆಳ್ಳಿ ರಥೋತ್ಸವ, ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಇತ್ತೀಚೆಗೆ ಪೋಷಕರು ಮತ್ತು ಮಕ್ಕಳ ನಡುವೆ ಸಾಮರಸ್ಯ ಕೊರತೆಯಿಂದ ಹಲವು ಸಮಸ್ಯೆಗಳು ಉಂಟಾಗುತ್ತಿರುವುದು ನಾವೆಲ್ಲರೂ ಕಾಣುತ್ತಿದ್ದೇವೆ. ಇದಕ್ಕೆ ಪರಿಹಾರದ ನಿಟ್ಟಿನಲ್ಲಿ ಶ್ರೀಮಠದ ವತಿಯಿಂದ ಪ್ರತಿ ಅಮಾವಾಸ್ಯೆಯಂದು ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮ ಆಯೋಜಿಸಿ ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳಿಸುವ ಜೊತೆಗೆ ಮಕ್ಕಳ ಸಚ್ಚಾರಿತ್ರ್ಯ ನಡವಳಿಕೆಗೆ ಬುನಾದಿ ಹಾಕಲು ಹಲವು ಕಾರ್ಯಕ್ರಮಗಳ ಉಚಿತವಾಗಿ ಹಮ್ಮಿಕೊಳ್ಳುತ್ತಿದ್ದು, ಇದರಲ್ಲಿ ಪೋಷಕರು ತಮ್ಮ ಮಕ್ಕಳ ಜೊತೆ ಪಾಲ್ಗೊಳ್ಳಬೇಕೆಂದು ಸಲಹೆ ನೀಡಿದರು. ಭಕ್ತರ ಉದಾರತೆಯಿಂದ ಶ್ರೀಮಠದ ಎಲ್ಲಾ ಕಾರ್ಯಕ್ರಮಗಳು ನಿರ್ವಿಘ್ನವಾಗಿ ನಡೆಯುತ್ತಿವೆ. ಸಮಯವು ಹೇಗಾದರೂ ಕಳೆದು ಹೋಗುತ್ತದೆ ಒಳ್ಳೆಯ ಉದ್ದೇಶಗಳಿಗಾಗಿ ಎಲ್ಲರೂ ಸಮಯದ ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಸನ್ಮಾನ ಸ್ವೀಕರಿಸಿ ಬಗರ್ ಹುಕುಂ ಸಮಿತಿ ಸದಸ್ಯ ರುದ್ರೇಶ್ ಕೊಡತಾಳ್ ಮಾತನಾಡಿ ಹಿರೇಕಲ್ಮಠವು ಬಡವ-ಬಲ್ಲಿದ, ಮೇಲ್ಜಾತಿ-ಕೀಳ್ಜಾತಿ ಎಂಬ ಬೇಧ- ಭಾವ ಮಾಡದೇ ಸರ್ವರನ್ನೂ ಸಮನಾಗಿ ಕಾಣುವರಣವಾಗಿದ್ದು ತುಳಿತಕ್ಕೊಳಗಾದವರಿಗೂ ನ್ಯಾಯ ನೀಡುವ ನ್ಯಾಯಪೀಠವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು. ಅಪರೂಪದ ಮಠಗಳಲ್ಲೊಂದು ಎಂದು ಬಣ್ಣಿಸಿದರು. ಈ ಭಾಗದಲ್ಲಿ ಜನರು ಶಾಂತಿ-ನೆಮ್ಮದಿಯಿಂದಿರಲು ಶ್ರೀಮಠವೂ ಕಾ

ಕಸಬಾ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಸಂಸ್ಕತಿ-ಸಂಸ್ಕಾರ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ವೇದಿಕೆಯನ್ನು ಒದಗಿಸುತ್ತಿದ್ದು ಪೋಷಕರು ಮತ್ತು ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.

ಶ್ರೀಮಠಕ್ಕೆ ನಿವೇಶನ ದಾನ ಮಾಡಿದ ಹೊಸಕಟ್ಟೆ ಗ್ರಾಮದ ಚಂದ್ರಪ್ಪಗೌಡ ದಂಪತಿ ಹಾಗೂ ಇತ್ತೀಚೆಗೆ ರಟ್ಟೇಹಳ್ಳಿ ತಾಲೂಕಿನ ಎಂ.ಡಿ. ಶಂಕರನಹಳ್ಳಿ ಗ್ರಾಮದಲ್ಲಿ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ 14ನೇ ವರ್ಷದ 3 ದಿನಗಳ ಕಾಲದ ಮೌನ ಇಷ್ಟಲಿಂಗ ಪೂಜಾನುಷ್ಠಾನ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಗ್ರಾಮದ ಭಕ್ತರ ಸನ್ಮಾನಿಸಲಾಯಿತು. ಕುರುವ ಗ್ರಾಮದ ಮಂಜುನಾಥ ಭಜಂತ್ರಿ ಪಿಟೀಲು ವಾದನ ಕಾರ್ಯಕ್ರಮ ನಡೆಸಿಕೊಟ್ಟರು. ಚನ್ನೇಶ್ವರ ಗಾನಕಲಾ ಬಳಗದ ತಂಡದವರು, ಮಂಜಾಚಾರ್, ಕವನ, ಶಿಕ್ಷಕ ಹಾಲಸ್ವಾಮಿ, ಪ್ರತಿಮಾ ನಿಜಗುಣಸ್ವಾಮಿ ಸಾಂಸ್ಕತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಬಗರ್ ಹುಕುಂ ಸಮಿತಿ ಸದಸ್ಯೆ ಪುಷ್ಪ ರವೀಶ್, ಹಿರೇಕಲ್ಮಠದ ವ್ಯವಸ್ಥಾಪಕ ಎಂ.ಪಿ.ಎಂ.ಚನ್ನಬಸಯ್ಯ, ಪೂಜಾಮರಿ ಹಾಲಸ್ವಾಮಿ, ಎಂ.ಡಿ.ಶಂಕರನಹಳ್ಳಿಯ ಹನುಮಂತರಾಯ ಸ್ವಾಮಿ ಅಯ್ಯಂಗಾರ್, ಪ್ರಕಾಶ್ ಶಾಸ್ತ್ರಿ, ತಿಮ್ಮಯ್ಯ ಸ್ವಾಮಿ ಅಯ್ಯರ್, ಹನುಮಂತಪ್ಪ ಚೌಡಕ್ಳನವರ್,ರವಿ ಸ್ವಾಮಿ ಅಯ್ಯರ್, ಜಗದೀಶ್ ಪುಟ್ಟಯ್ಯ ಸ್ವಾಮಿ ಮತ್ತಿತರರಿದ್ದರು.