ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಎಲ್ಲ ಸರ್ಕಾರಿ ಶಿಕ್ಷಕರು ಮತ್ತು ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುವ ಹಾಗಾದರೇ ಸರ್ಕಾರಿ ಶಾಲೆಗಳು ಅಭಿವೃದ್ಧಿ ಆಗುತ್ತವೆ ಮತ್ತು ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯುತ್ತದೆ ಎಂದು ಸಿದ್ದಲಿಂಗ ಶಿವಾಚಾರ್ಯ ವೇದ ಆಗಮ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯ ಶ್ರೀಶೈಲ ಶಾಸ್ತ್ರೀಗಳು ನುಡಿದರು.ಉಗಾರ ಜೈನ ಸಮಾಜದ ಕಾರ್ಯಾಲಯದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ತಾಲೂಕು ಆಡಳಿತ ಸಂಯುಕ್ತಾಶ್ರಯದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಲಾಗಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅತ್ಯುತ್ತಮವಾದ ಅಧ್ಯಯನ ಮಾಡಿರುವ ಉತ್ತಮ ವಿದ್ಯಾವಂತರಾಗಿರುವ ಸರ್ಕಾರಿ ಶಾಲೆಯನ್ನು ಬಿಟ್ಟು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತಿರುವುದು ವಿಷಾದನೀಯ ಸಂಗತಿ ಎಂದರು. ತಹಸೀಲ್ದಾರ್ ರವೀಂದ್ರ ಹಾದಿಮನಿ ಮಾತನಾಡಿ, ಓರ್ವ ಉತ್ತಮ ಗುರು ತನ್ನ ವ್ಯಕ್ತಿತ್ವ, ಪ್ರಥಿಭೆ, ಪಾಂಡಿತ್ಯ ಹಾಗೂ ಆದರ್ಶ ಗುಣಗಳಿಂದ ಸಾಮಾನ್ಯ ವಿದ್ಯಾರ್ಥಿಯ ಬದುಕಿನ ಗತಿಯನ್ನು ಬದಲಿಸುವ ಶಕ್ತಿ ಹೊಂದಿದ್ದಾನೆ. ಅಂಥ ಶಕ್ತಿ ಶಿಕ್ಷಕರಲ್ಲಿದೆ. ವೃತ್ತಿಯಿಂದ ನಿವೃತ್ತಿಯಾದರೂ ಪ್ರವೃತ್ತಿಯಿಂದ ಎಂದಿಗೂ ನಿವೃತ್ತಿಯಾಗದ ಹುದ್ದೆ ಎಂದರೇ ಶಿಕ್ಷಕ ಹುದ್ದೆ ಎಂದು ತಿಳಿಸಿದರು. ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಭಿಯಂತರ ವೀರಣ್ಣ ವಾಲಿ ಮಾತನಾಡಿ, ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದ ಹುದ್ದೆ ಶಿಕ್ಷಕ ವೃತ್ತಿ. ತಾಯಿಯ ತಾಳ್ಮೆ, ತಂದೆಯ ಹೊಣೆಗಾರಿಕೆ ನೈತಿಕ ಬಲದೊಂದಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸಿದಾಗ ಶಿಲೆ ಶಿಲ್ಪವಾಗಲು ಸಾಧ್ಯ. ನಾನು ಒಬ್ಬ ಶಿಕ್ಷಕನ ಮಗನಾಗಿದ್ದು ಶಿಕ್ಷಕರು ತಮ್ಮ ಮಕ್ಕಳಂತೆಯೇ ಶಾಲಾ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಅವರಿಗಿರುವ ಸಹನೆ ಮತ್ತಾರಿಗೂ ಬಾರದು ಎಂದರು.ಮೂಡಲಗಿಯ ಮಕ್ಕಳ ಸಾಹಿತಿ ಸಂಗಮೇಶ, ಗುಜಗೊಂಡ, ಪುರಸಭೆ ಅಧ್ಯಕ್ಷೆ ಫಾತಿಮಾ ನದಾಫ, ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ, ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ ಮದಭಾವಿ, ಸಿಡಿಪಿಓ ರವೀಂದ್ರ ಗುದಗೆನ್ನವರ, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ಸಂಕಪಾಳ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎಸ್.ಭಾವಿ, ಅಣ್ಣಾಸಾಹೇಬ ದೇವಮೋರೆ, ದೈಹಿಕ ಶಿಕ್ಷಾಧಿಕಾರಿ ಎರ್ಮ.ವೈ.ಪೂಜಾರಿ, ಬಿಸಿಯೂಟ ಅಧಿಕಾರಿ ಮಲ್ಲಿಕಾರ್ಜುನ ನಾಮದಾರ ಸೇರಿದಂತೆ ವಿವಿಧ ಪದಾಧಿಕಾರಿಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಈ ವೇಳೆ ವಿವೃತ್ ಶಿಕ್ಷಕರನ್ನು ಸನ್ಮಾನಿಸಿದರು.ತನ್ನ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಲಿಲ್ಲ ಎಂಬುವುದಕ್ಕೆ ಜೀವಮಾನವಿಡಿ ಮಾತು ಬಿಡುವ ಇಂದಿನ ದಿನಮಾನಗಳಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದೇ ಅದನ್ನು ಶಿಕ್ಷಕರ ದಿನ ಆಚರಿಸುವಂತೆ ಹೇಳಿ ವಿಶ್ವ ವಿಶ್ವವಿಖ್ಯಾತರಾದರು.
-ಶ್ರೀಶೈಲ ಶಾಸ್ತ್ರಿಗಳು ಸಿದ್ದಲಿಂಗ ಶಿವಾಚಾರ್ಯ ವೇದ ಆಗಮ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯರು.