ಮಕ್ಕಳ ಕನಸು ಸಾಕಾರಗೊಳ್ಳಲು ಪಾಲಕರು ಜವಾಬ್ದಾರಿ ಹೊರಬೇಕು-ಸುಣಗಾರ

| Published : May 21 2024, 12:38 AM IST

ಮಕ್ಕಳ ಕನಸು ಸಾಕಾರಗೊಳ್ಳಲು ಪಾಲಕರು ಜವಾಬ್ದಾರಿ ಹೊರಬೇಕು-ಸುಣಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ತಮ್ಮ ಕನಸುಗಳನ್ನು ನನಸಾಗಿಸಿಕೊಂಡು ಬಾಳಿನ ವಿಜಯೋತ್ಸವದಲ್ಲಿ ಸಂಭ್ರಮಿಸುವಂತೆ ಮಾಡಲು ಪಾಲಕರು ಅವರ ಜವಾಬ್ದಾರಿ ಹೊರಬೇಕು ಎಂದು ಶಿಗ್ಗಾಂವಿಯ ಎಂಪಿಎಂ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ದೇವರಾಜ ಸುಣಗಾರ ಹೇಳಿದರು.

ಶಿಗ್ಗಾಂವಿ: ಮಕ್ಕಳು ತಮ್ಮ ಕನಸುಗಳನ್ನು ನನಸಾಗಿಸಿಕೊಂಡು ಬಾಳಿನ ವಿಜಯೋತ್ಸವದಲ್ಲಿ ಸಂಭ್ರಮಿಸುವಂತೆ ಮಾಡಲು ಪಾಲಕರು ಅವರ ಜವಾಬ್ದಾರಿ ಹೊರಬೇಕು ಎಂದು ಶಿಗ್ಗಾಂವಿಯ ಎಂಪಿಎಂ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ದೇವರಾಜ ಸುಣಗಾರ ಹೇಳಿದರು.

ಪಟ್ಟಣದ ಅಂಬೇಡ್ಕರ್ ಸಭಾ ಭವನದಲ್ಲಿ ರಾಜ್ ಆರ್ಟ್ಸ ಅಕಾಡೆಮಿ ಏರ್ಪಡಿಸಿದ್ದ ಬೇಸಿಗೆ ಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಅಕಾಡೆಮಿಯ ಅಧ್ಯಕ್ಷ ಬಸವರಾಜ ಕುಲಕರ್ಣಿ ಅವರು ಪಟ್ಟಣದ ಮಕ್ಕಳಲ್ಲಿ ಅಡಗಿರುವ ರಚನಾತ್ಮಕ ಕೌಶಲ್ಯಗಳನ್ನು ಹೊರ ತೆಗೆಯಲು ಈ ಬೇಸಿಗೆ ಕಲಾ ಶಿಬಿರದ ಮೂಲಕ ಪ್ರಯತ್ನಿಸುತ್ತಿದ್ದು, ಇಲ್ಲಿ ಕಲಿತ ವಿಷಯಗಳು ಮಕ್ಕಳ ಭವಿಷ್ಯದಲ್ಲಿ ಉಪಯುಕ್ತವಾಗಲಿವೆ ಎಂದರು.

ನವೀನ ಸಾಸನೂರ ಮಾತನಾಡಿ, ಮಕ್ಕಳಲ್ಲಿ ಕನಸುಗಳನ್ನು ತುಂಬುವ ಮಹತ್ತರ ಜವಾಬ್ದಾರಿ ಪಾಲಕರಾದ್ದಾಗಿದ್ದು , ಧನಾತ್ಮಕ ವಿಚಾರಗಳನ್ನು ಅವರಲ್ಲಿ ಬಿತ್ತುವುದರಿಂದ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ. ರಾಜ ಆಕಾಡೆಮಿ ಕಲಾತ್ಮಕ ವಿಷಯಗಳನ್ನು ಸತತ ೬೦ ದಿನ ಮಕ್ಕಳಲ್ಲಿ ಬಿತ್ತಿರುವುದರಿಂದ ಮುಂದೊಂದು ದಿನ ಹೆಮ್ಮರವಾಗಿ ಬೆಳೆದು, ಕಲೆಯನ್ನು ಅಜರಾಮರವಾಗಿಸಿ ದೇಶ, ವಿದೇಶಗಳಲ್ಲಿ ಶಿಗ್ಗಾವಿಯ ಕೀರ್ತಿಯನ್ನು ಹೆಚ್ಚಿಸುತ್ತಾರೆ. ಪಾಲಕರು ಮಕ್ಕಳಿಗೆ ಶಿಕ್ಷಣದ ಜತೆಗೆ ಇಂತಹ ವಿವಿಧ ಕಲೆಗಳನ್ನು ಕಲಿಸಲು ಮುಂದೆ ಬರಬೇಕು ಎಂದು ಹೇಳಿದರು.

ಬಸವರಾಜ ಕುಲಕರ್ಣಿ ಮಾತನಾಡಿ, ರಾಜ್ ಅಕಾಡೆಮಿ ಕೇವಲ ಎರಡು ವರ್ಷಗಳಲ್ಲಿ ತನ್ನ ವಿದ್ಯಾರ್ಥಿಗಳನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುವಂತೆ ಮಾಡಿ ಅನೇಕ ಬಹುಮಾನಗಳನ್ನು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ವಿಷಯಗಳನ್ನು ಈ ತರಬೇತಿ ಕೇಂದ್ರದಲ್ಲಿ ಕಲಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಗೌಸಖಾನ ಮುನಸಿ, ವೀರಣ್ಣಾ ಕುಲಕರ್ಣಿ, ವಿಶ್ವನಾಥ ಗಾಣಿಗೇರ, ಬಸವನಗೌಡಾ ಮಲ್ಲಮಗೌಡ, ವಿಶ್ವನಾಥ, ಶಿವರಾಜ ಮಾಳಗಿ ಸೇರಿದಂತೆ ಇತರರಿದ್ದರು.