ನೆಲಮಂಗಲ: ನಗರದಲ್ಲಿ ಖಾಸಗಿ ಬಡಾವಣೆಯಲ್ಲಿ ಸಾರ್ವಜನಿಕರಿಗೆ ಮೀಸಲಿಟ್ಟಿರುವ ಉದ್ಯಾನವನವನ್ನು ಅಕ್ರಮವಾಗಿ ಖಾತೆ ಮಾಡಿ ನಿವೇಶನಗಳ ವಿಂಗಡಿಸಿ ಮಾರಾಟ ಮಾಡಿರುವುದನ್ನು ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ಹನುಮಂತರಾಜು ಖಂಡಿಸಿದ್ದಾರೆ
ನೆಲಮಂಗಲ: ನಗರದಲ್ಲಿ ಖಾಸಗಿ ಬಡಾವಣೆಯಲ್ಲಿ ಸಾರ್ವಜನಿಕರಿಗೆ ಮೀಸಲಿಟ್ಟಿರುವ ಉದ್ಯಾನವನವನ್ನು ಅಕ್ರಮವಾಗಿ ಖಾತೆ ಮಾಡಿ ನಿವೇಶನಗಳ ವಿಂಗಡಿಸಿ ಮಾರಾಟ ಮಾಡಿರುವುದನ್ನು ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ಹನುಮಂತರಾಜು ಖಂಡಿಸಿದ್ದಾರೆ. ನಗರಸಭಾ ವ್ಯಾಪ್ತಿಯ ಜಕ್ಕಸಂದ್ರ ಗ್ರಾಮದ ಸರ್ವೆ ನಂ. 8 ಮತ್ತು 9 ರಲ್ಲಿ ಖಾತಾ ನಂಬರ್ 966/ 54/1ರ ಖಾತೆಯನ್ನು ಅಕ್ರಮ ಇ ಖಾತೆ ಮಾಡಿ 2026 ಜ. 21ರಂದು ನೆಲಮಂಗಲ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಎನ್.ಕೆ.ರಂಗನಾಥ್ ಅವರಿಂದ ವೇದಾವತಿಗೆ ಅಕ್ರಮವಾಗಿ ಕ್ರಯಪತ್ರ ನೋಂದಣಿ ಮಾಡಿರುತ್ತಾರೆ. ಕೂಡಲೇ ಸದರಿ ಅಕ್ರಮ ನಿವೇಶನದ ಖಾತೆಯನ್ನು ವಜಾಗೊಳಿಸಿ ಸಾರ್ವಜನಿಕ ಉದ್ಯಾನವನವನ್ನು ರಕ್ಷಿಸಿ ತಂತಿಬೇಲಿ ಹಾಕಿ ಸಾರ್ವಜನಿಕರ ಉಪಯೋಗಕ್ಕೆ ಬಿಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.