ಸಾರಾಂಶ
ಬೇಲೂರು ತಾಲೂಕಿನ ಗಬ್ಬಲಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತು ಹಾಗೂ ವಿದ್ಯಾರ್ಥಿ ಸಂಘದ ರಚನೆಗಾಗಿ ಚುನಾವಣೆ ನಡೆಸಲಾಯಿತು.ಮತದಾರರ ಪಟ್ಟಿ , ಅಳಿಸಲಾಗದ ಶಾಹಿ ಇತ್ಯಾದಿ ವಿಧಾನಗಳನ್ನು ಯಥಾವತ್ತಾಗಿ ಬಳಸಲಾಗಿತ್ತು. ವಿದ್ಯಾರ್ಥಿಗಳು ಗುರುತಿನ ಪತ್ರ ಹಿಡಿದು ಅತ್ಯಂತ ಸಂಭ್ರಮದಿಂದ ಚುನಾವಣೆಯಲ್ಲಿ ಪಾಲ್ಗೊಂಡರು.
ಕನ್ನಡಪ್ರಭ ವಾರ್ತೆ ಬೇಲೂರು
ಇತ್ತೀಚೆಗೆ ತಾಲೂಕಿನ ಗಬ್ಬಲಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತು ಹಾಗೂ ವಿದ್ಯಾರ್ಥಿ ಸಂಘದ ರಚನೆಗಾಗಿ ಚುನಾವಣೆ ನಡೆಸಲಾಯಿತು.ಚುನಾವಣಾ ಆಯೋಗದಿಂದ ಚುನಾವಣೆಗಳನ್ನು ನಡೆಸುವ ರೀತಿಯಲ್ಲೇ ಚುನಾವಣೆಯನ್ನು ಮಾಡಿದ್ದು ಮಕ್ಕಳು ನೈಜ ಚುನಾವಣೆಯ ಅನುಭವ ಪಡೆದರು. ಚುನಾವಣೆಯಲ್ಲಿ ಬಳಸಲಾಗುವ ರಿಜಿಸ್ಟ್ರಾರ್, ಮತದಾರರ ಪಟ್ಟಿ , ಅಳಿಸಲಾಗದ ಶಾಹಿ ಇತ್ಯಾದಿ ವಿಧಾನಗಳನ್ನು ಯಥಾವತ್ತಾಗಿ ಬಳಸಲಾಗಿತ್ತು. ವಿದ್ಯಾರ್ಥಿಗಳು ಗುರುತಿನ ಪತ್ರ ಹಿಡಿದು ಅತ್ಯಂತ ಸಂಭ್ರಮದಿಂದ ಚುನಾವಣೆಯಲ್ಲಿ ಪಾಲ್ಗೊಂಡರು.
ಚುನಾವಣೆಯ ನೇತೃತ್ವ ವಹಿಸಿದ್ದ ಶಾಲಾ ಶಿಕ್ಷಕರಾದ ಗಿರೀಶ್ ಎಚ್.ಪಿ ಹಾಗೂ ಯೋಗಾನಂದ್ ಬಿ.ಸಿ ಇವರ ಜೊತೆಗೆ ಶಿಕ್ಷಕರಾದ ಜಾಹ್ನವಿ, ಸತೀಶ್, ಗೀತಾ, ಶಾಂತಿ ಪಿಂಟೋ, ನಟರಾಜ್, ನವೀನ ಫಿರ್ದೋಸ ಇವರು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಚುನಾಯಿತ ವಿದ್ಯಾರ್ಥಿಗಳಾದ ಯೋಗೇಶ್, ಅರುಣ, ಮಿಥುನ್, ಧನುಶ್ರೀ, ಇಂಚನ, ಲಾವಣ್ಯ, ಹಬೀಬಾ, ಲಾವಣ್ಯರನ್ನು ಮುಖ್ಯೋಪಾಧ್ಯಾಯಿನಿ ಸವಿತಾ ಅಭಿನಂದಿಸಿದರು.