ಸಾರಾಂಶ
ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನಾಗಿ ಸ್ವೀಕರಿಸಬೇಕು, ಶಾಲಾ ಹಂತದಿಂದಲೇ ಸಕ್ರೀಯವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗೆಲ್ಲುವಂತಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದಲ್ಲಿ ಓದಿನ ಜತೆಗೆ ಕ್ರೀಡೆಯಲ್ಲಿ ಭಾಗವಹಿಸಿ ಸಾಧನೆಯತ್ತ ಗಮನ ಹರಿಸಬೇಕು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದಲ್ಲಿ ಓದಿನ ಜತೆಗೆ ಕ್ರೀಡೆಯಲ್ಲಿ ಭಾಗವಹಿಸಿ ಸಾಧನೆಯತ್ತ ಗಮನ ಹರಿಸಬೇಕು ಎಂದು ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ತಿಳಿಸಿದರು.ಪಟ್ಟಣದ ಮೈಸೂರು ರಸ್ತೆಯ ನ್ಯೂ ಲೈಫ್ ಇಂಟರ್ ನ್ಯಾಷನಲ್ ಬೋರ್ಡಿಂಗ್ ಸ್ಕೂಲ್ ನಲ್ಲಿ ಶನಿವಾರ ನಡೆದ ಏಕಲವ್ಯ ವಾರ್ಷಿಕ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿ, ಮಕ್ಕಳು ಬಾಲ್ಯದಿಂದಲೇ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಮಾನಸಿಕ ಆರೋಗ್ಯದ ಜತೆಗೆ ದೈಹಿಕ ಸದೃಢತೆಯನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನಾಗಿ ಸ್ವೀಕರಿಸಬೇಕು, ಶಾಲಾ ಹಂತದಿಂದಲೇ ಸಕ್ರೀಯವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗೆಲ್ಲುವಂತಾಗಬೇಕೆಂದು ಹೇಳಿದರು.ಚನ್ನಪಟ್ಟಣದ ಶಿಕ್ಷಣ ಇಲಾಖೆ ಕ್ಷೇತ್ರ ಸಮನಯ್ವಾಧಿಕಾರಿ ಕುಸುಮ ಲತಾ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆ ಗುರುತಿಸುವಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಮಕ್ಕಳಲ್ಲಿ ಓದಿನ ಜತೆಗೆ ಕ್ರೀಡೆಗಳಲ್ಲಿ ಆಸಕ್ತಿಯ ಮೂಡಿಸಬೇಕು ಎಂದರು.
ಶಾಲೆಯಲ್ಲಿ ಮಕ್ಕಳಿಗೆ ಮಾನಸಿಕ ವಿಕಸನದ ಜತೆಗೆ ದೈಹಿಕ ವಿಕಸವು ಸಹ ಅವಶ್ಯಕವಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾರತ ಸಾಧನೆಗೆ ಕೊಡುಗೆ ನೀಡುವಂಥ ಕ್ರೀಡಾಪಟಗಳನ್ನು ಶಾಲೆಗಳು ರೂಪಿಸಬೇಕೆಂದು ಕರೆ ನೀಡಿದರು.ವಿವಿಧ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಸಂಭ್ರಮಿಸಿದರು. ಇದೇ ವೇಳೆ ಪ್ರಾಂಶುಪಾಲರಾದ ಕರುಣಾ ಕವಿತಾ, ಆಡಳಿತಾಧಿಕಾರಿ ಮಹದೇವಸ್ವಾಮಿ, ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು.ನಗರಸಭೆ ಆಯುಕ್ತೆ ಪಂಪಶ್ರೀ ಅಭಿನಂದನೆ
ಮಂಡ್ಯ:ನಗರಸಭೆಗೆ ನೂತನ ಆಯುಕ್ತರಾಗಿ ನೇಮಕಗೊಂಡ ಪಂಪಶ್ರೀ ಅವರನ್ನು ನಗರಸಭೆ ಸಿಬ್ಬಂದಿ ಹೂಗುಚ್ಚವನ್ನು ನೀಡಿ ಅಭಿನಂದಿಸಿದರು. ಈ ವೇಳೆ ಸಹಾಯಕ ಅಭಿಯಂತರ ರಾಜೇಗೌಡ, ಕಿರಿಯ ಅಭಿಯಂತರ ಮಹೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ರವಿಕುಮಾರ್, ಪರಿಸರ ವಿಭಾಗದ ರುದ್ರೇಗೌಡ, ವ್ಯವಸ್ಥಾಪಕಿ ಕಲ್ಪನಾ, ಲೆಕ್ಕಾಧಿಕಾರಿ ಮಂಜುನಾಥ್ ಇದ್ದರು.