ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರೆ ಮನಸ್ಸಿಗೆ ತೃಪ್ತಿ: ಕಾಶಿ ಜಗದ್ಗುರು

| Published : May 14 2025, 02:20 AM IST

ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರೆ ಮನಸ್ಸಿಗೆ ತೃಪ್ತಿ: ಕಾಶಿ ಜಗದ್ಗುರು
Share this Article
  • FB
  • TW
  • Linkdin
  • Email

ಸಾರಾಂಶ

ನಾವು ನಮ್ಮ ಜೀವನದಲ್ಲಿ ಧರ್ಮ ಕಾರ್ಯಗಳನ್ನು ಮಾಡುತ್ತಿದ್ದೇವೆ. ಅಂತಹ ಕಾರ್ಯಗಳಲ್ಲಿ ಸರ್ವರೂ ಭಾಗವಹಿಸುವುದರಿಂದ ಮನಸ್ಸಿಗೆ ತೃಪ್ತಿ ಸಿಗುತ್ತದೆ. ಆದ್ದರಿಂದ ಧರ್ಮ ಕಾರ್ಯಗಳಲ್ಲಿ ತಪ್ಪದೇ ಎಲ್ಲರೂ ಭಾಗವಹಿಸಿ ಭಕ್ತಿ ಮೆರೆಯಬೇಕು ಎಂದು ಕಾಶಿ ಪೀಠದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.

ಹೊಳೆಆಲೂರ: ನಾವು ನಮ್ಮ ಜೀವನದಲ್ಲಿ ಧರ್ಮ ಕಾರ್ಯಗಳನ್ನು ಮಾಡುತ್ತಿದ್ದೇವೆ. ಅಂತಹ ಕಾರ್ಯಗಳಲ್ಲಿ ಸರ್ವರೂ ಭಾಗವಹಿಸುವುದರಿಂದ ಮನಸ್ಸಿಗೆ ತೃಪ್ತಿ ಸಿಗುತ್ತದೆ. ಆದ್ದರಿಂದ ಧರ್ಮ ಕಾರ್ಯಗಳಲ್ಲಿ ತಪ್ಪದೇ ಎಲ್ಲರೂ ಭಾಗವಹಿಸಿ ಭಕ್ತಿ ಮೆರೆಯಬೇಕು ಎಂದು ಕಾಶಿ ಪೀಠದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.ಅವರು ಸಮೀಪದ ಅಸೂಟಿ ಹಿರೇಮಠದ ವತಿಯಿಂದ ನಡೆದ ರೇಣುಕಾಚಾರ್ಯರ ಜಯಂತಿ ಹಾಗೂ ಯುಗಮನೋತ್ಸವ, ತುಲಾಭಾರ, ಗೌರವ ಸಮರ್ಪಣೆ, ದಾಸೋಹ ಮಂದಿರದ ಭೂಮಿ ಪೂಜೆ, ಜಂಗಮ ವಟುಗಳಿಗೆ ಅಯ್ಯಾಚಾರ, ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮಗಳ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಜೀವನದಲ್ಲಿ ಧಾರ್ಮಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ನಿರಂತರವಾಗಿ ಸಾಮೂಹಿಕ ವಿವಾಹ, ಅಯ್ಯಾಚಾರ, ಈ ಭಾಗದಲ್ಲಿ ಶಿಕ್ಷಣ ಕೇಂದ್ರ, ದಾಸೋಹ ಕೇಂದ್ರ ಮಾಡಿದ್ದು, ಅಲ್ಲದೆ ವಿವಿಧ ಧಾರ್ಮಿಕ ಕಾರ್ಯಗಳನ್ನು ಯಾವುದೇ ಪ್ರತಿಫಲ ಬಯಸದೆ, ಭಕ್ತರ ಅನುಕೂಲಕ್ಕಾಗಿ ಮಾಡಿಕೊಂಡು ಬರುತ್ತಿರುವ ಹಿರೇಮಠದ ರೇವಣಸಿದ್ದೇಶ್ವರ ಸ್ವಾಮಿಗಳು ಹಾಗು ಹಿರೇಮಠದ ಭಕ್ತ ಸಮೂಹಕ್ಕೆ ಆರೋಗ್ಯ ಕೊಟ್ಟು, ಧಾರ್ಮಿಕ ಕೆಲಸಕ್ಕೆ ಸದಾ ಮುಂದೆ ಇರಲಿ ಎಂದು ಹೇಳಿದರು.ಯಲಬುರ್ಗಾ ಶ್ರೀಧರಮುರಡಿ ಹೀರೇಮಠದ ಬಸವಲಿಂಗ ಸ್ವಾಮಿಗಳು, ಜಿಗೇರಿಯ ಗುರುಸಿದ್ಧ ಶಿವಾಚಾರ್ಯ ಸ್ವಾಮಿಗಳು, ಬೆನಹಾಳ ಹಿರೇಮಠದ ಸದಾಶಿವ ಮಹಾಂತ ಶಿವಾಚಾರ್ಯ ಸ್ವಾಮಿಗಳು, ಬದಾಮಿ ನವಗ್ರಹ ಹಿರೇಮಠದ ಶಿವಪೂಜಾ ಶಿವಾಚಾರ್ಯ ಸ್ವಾಮಿಗಳು, ನರಗುಂದ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ಕೋತಬಾಳ ಅಡವಿಸಿದ್ದೇಶ್ವರ ಮಠದ ಗಂಗಾಧರ ಸ್ವಾಮಿಗಳು, ಹಿರೇಬೆಂಡಿಗೇರಿಯ ವಿಶ್ವನಾಥ ಶಿವಾಚಾರ್ಯ ಸ್ವಾಮಿಗಳು, ರೇವೆಣಸಿದ್ದೇಶ್ವರ ಸ್ವಾಮಿಗಳು, ಗುರುಸಿದ್ದಲಿಂಗಯ್ಯ ಸ್ವಾಮಿಗಳು, ಹೊಸಮಠ ಮಹಾಂತಯ್ಯ ಸ್ವಾಮಿಗಳು, ನಂದಿಕೇಶ್ವರದ ಶಂಕರಯ್ಯ ಶಾಸ್ತ್ರಿಗಳು, ಕರಮುಡಿ ವೀರಯ್ಯಸ್ವಾಮಿಗಳು, ವಿರಕ್ತಮಠ ಪ್ರಭಯ್ಯಸ್ವಾಮಿಗಳು, ಬೆಳವಣಿಕಿಯ ಆನಂದಸ್ವಾಮಿಗಳು, ಅರಳಿಕಟ್ಟಿಮಠದ ಅಡಿವಯ್ಯಸ್ವಾಮಿಗಳು, ಅಂದಾನಯ್ಯ ವಿರಕ್ತಮಠ, ವಿವೇಕ ಯಾವಗಲ್ಲ, ರವಿ ಹಿರೇಮಠ, ಶಿವಣ್ಣ ಯಾವಗಲ್ಲ ಇದ್ದರು.