ಸಾರಾಂಶ
ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ವಿದ್ಯಾರ್ಥಿಗಳು ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಿ, ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆಯಿಂದ ಕ್ರೀಡೆಯಲ್ಲಿ ಭಾಗವಹಿಸಬೇಕೆಂದು ದೈಹಿಕ ಶಿಕ್ಷಣಾಧಿಕಾರಿ ಪಂಚಾಕ್ಷರಿ ನಂದೇಶ ಹೇಳಿದರು.
ರಬಕವಿ-ಬನಹಟ್ಟಿ: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ವಿದ್ಯಾರ್ಥಿಗಳು ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಿ, ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆಯಿಂದ ಕ್ರೀಡೆಯಲ್ಲಿ ಭಾಗವಹಿಸಬೇಕೆಂದು ದೈಹಿಕ ಶಿಕ್ಷಣಾಧಿಕಾರಿ ಪಂಚಾಕ್ಷರಿ ನಂದೇಶ ಹೇಳಿದರು.
ನಾವಲಗಿ ಗ್ರಾಮದಲ್ಲಿ ಜರುಗಿದ ೨೦೨೪-೨೫ನೇ ಸಾಲಿನ ಬನಹಟ್ಟಿ ಪೂರ್ವ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಸೋಲು-ಗೆಲುವಿನ ಮೆಟ್ಟಿಲುವಾಗಬೇಕು, ಸದೃಢವಾದ ಶರೀರದಲ್ಲಿ ಶುದ್ಧವಾದ ಮನಸ್ಸು ಅಡಗಿರುತ್ತದೆ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚುಟುವಟಿಕೆಗಳಲ್ಲಿಯೂ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಹೊರಹಾಕುವ ಕೆಲಸ ಮಾಡಬೇಕೆಂದರು.ಕ್ರೀಡೆಯಲ್ಲಿ ದ್ವೇಷ, ಅಸೂಯೆ ಹೊಟ್ಟೆ ಕಿಚ್ಚು ಎಲ್ಲವನ್ನು ಮರೆತು ಯಾರೇ ಗೆದ್ದರು ಎಲ್ಲರೂ ನಮ್ಮವರು ಎಂಬ ಮನೋಭಾವನೆಯೊಂದಿಗೆ ಆಟವಾಡಬೇಕು ಹಾಗೂ ಅಷ್ಟೇ ಜವಾಬ್ದಾರಿ ಕೂಡಾ ತೀಪುರ್ಗಾರರ ಮೇಲಿದ್ದು ಯಾವೊಬ್ಬ ವಿದ್ಯಾರ್ಥಿಗಳಿಗೂ ಅನ್ಯಾಯವಾಗದಂತೆ ನ್ಯಾಯ ಸಮ್ಮತವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಸರ್ಕಾರಿ ಕಾಲೇಜು ಪ್ರಾಚಾರ್ಯ ಶರತ್ ಜಂಬಗಿ ಹೇಳಿದರು.
ಈ ವೇಳೆ ರೇಖಾ ಕದಂ, ಗ್ರಾಪಂ ಅಧ್ಯಕ್ಷ ಸದಾಶಿವ ಸವದಿ, ಸದಸ್ಯ ದಾನಪ್ಪ ಅಸಂಗಿ, ಎಸ್‌ಡಿಎಂಸಿ ಅಧ್ಯಕ್ಷ ಹಣಮಂತ ಬರಗಾಲ, ಕೆಪಿಎಸ್ ಶಾಲೆಯ ಉಪಾಧ್ಯಕ್ಷ, ಬಸವರಾಜ ಗಣಿ, ಹಣಮಂತ ನಾವಿ, ಕೆ.ಪಿ.ಯಡಪ್ಪನವರ, ಮಲ್ಲಪ್ಪ ಗಣಿ, ಬಾಲಚಂದ್ರ ಪಟ್ಟಣಶೆಟ್ಟಿ, ಈರಪ್ಪ ವಾಲಿ, ಮಲ್ಲು ಕಂಪು, ಗಂಗಪ್ಪ ವಾಲಿ, ಶಿಕ್ಷಕರಾದ ಎನ್.ಎಸ್.ತುಪ್ಪದ, ಶೋಭಾ ವಾರದ, ಶಿಲ್ಪಾ ಮಾದರ, ಎಸ್.ಬಿ. ಎಂಟೇತ್ತಿನವರ, ಹಾಲಪ್ಪ ಅಡವಿಹಳ್ಳಿ, ಎನ್.ಎಸ್.ಬಜೆನ್ನವರ, ಶ್ರೀಶೈಲ ಗಣಿ ಸೇರಿದಂತೆ ಅನೇಕರಿದ್ದರು.