ಸಾರಾಂಶ
ಸೋಲು-ಗೆಲುವು ಸಾಮಾನ್ಯ. ಆದರೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ.
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ತಾಲೂಕಿನ ಅರಸೀಕೆರೆ ಗ್ರಾಮದ ಜ್ಞಾನ ಜ್ಯೋತಿ ಶಾಲೆಯಲ್ಲಿ 2025-26ನೇ ಸಾಲಿನ ಪ್ರಾಥಮಿಕ ಶಾಲೆಯ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮ ಜರುಗಿತು.ಪ್ರಶಸ್ತಿ ವಿತರಿಸಿ ಮಾತನಾಡಿದ ಸೌಹಾರ್ದ ಬ್ಯಾಂಕಿನ ಅಧ್ಯಕ್ಷೆ ವೈ.ಡಿ. ಲಕ್ಷ್ಮೀದೇವಿ ಅಣ್ಣಪ್ಪ, ಸೋಲು-ಗೆಲುವು ಸಾಮಾನ್ಯ. ಆದರೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದು ಹೇಳಿದರು.
ಅರಸೀಕೆರೆ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಬಾಲಕರು ಥ್ರೋಬಾಲ್‌ನಲ್ಲಿ ಪ್ರಥಮ, ಬಾಲಕಿಯರು ಕಬ್ಬಡಿಯಲ್ಲಿ ಪ್ರಥಮ, ಶಾಂತಪ್ರಕಾಶ್ ನಗರ ಶಾಲೆಯ ಬಾಲಕರು ಖೋ ಖೋ, ಬಾಲಕಿಯರು ಖೋ ಖೋದಲ್ಲಿ ಪ್ರಥಮ ಸ್ಥಾನ ಗಳಿಸಿದರು.ಜ್ಞಾನ ಜ್ಯೋತಿ ಶಾಲೆಯ ಬಾಲಕರು-ಬಾಲಕಿಯರ ವಾಲಿಬಾಲ್‌ನಲ್ಲಿ ಪ್ರಥಮ, ಕಮ್ಮತ್ತಹಳ್ಳಿಯ ವೇದಿಕ್ ವಿದ್ಯಾಲಯದ ಬಾಲಕರು ಕಬ್ಬಡಿಯಲ್ಲಿ ಪ್ರಥಮ ಸ್ಥಾನ ಪಡೆದರು. ಗುಂಡು ಎಸೆತದಲ್ಲಿ ಅರಸೀಕೆರೆ ಹಿರಿಯ ಪ್ರಾಥಮಿಕ ಶಾಲೆಯ ಬಾಲಕ ಉವೇಸ್ ಪ್ರಥಮ ಸ್ಥಾನ ಗಳಿಸಿದ್ದಾನೆ.
100 ಮೀ ಓಟ ವಿಭಾಗದಲ್ಲಿ ಬಾಲಕರಲ್ಲಿ ಜ್ಞಾನ ಜ್ಯೋತಿ ಶಾಲೆಯ ಎ.ಎನ್. ಆರ್ಯ ಹಾಗೂ ಬಾಲಕಿಯರಲ್ಲಿ ಕೃಷ್ಣವೇಣಿ ಪ್ರಥಮ, 200 ಮೀ ಓಟದಲ್ಲಿ ಜ್ಞಾನ ಜ್ಯೋತಿ ಶಾಲೆಯ ಎ.ಎನ್. ಆರ್ಯ ಹಾಗೂ ಬಾಲಕಿಯರಲ್ಲಿ ಕಮ್ಮತ್ತಹಳ್ಳಿ ವೇದಿಕ್ ವಿದ್ಯಾಲಯದ ನಾಗವೇಣಿ ಡಿ. ಪ್ರಥಮ,400 ಮೀ ಓಟದಲ್ಲಿ ಜ್ಞಾನ ಜ್ಯೋತಿ ಶಾಲೆಯ ಬಾಲಕ ಅಜ್ಜಯ್ಯ ಎಂ. ಪ್ರಥಮ, ಬಾಲಕಿಯರಲ್ಲಿ
ಎ.ಆರ್. ದಿವ್ಯಾ ಪ್ರಥಮ ಸ್ಥಾನ ಗಳಿಸಿದ್ದಾರೆ.600ಮೀ ಓಟದಲ್ಲಿ ಶಾಂತ ಪ್ರಕಾಶ್ ನಗರ ಶಾಲೆಯ ಬಾಲಕ ಚೇತನ್ ಪ್ರಥಮ, ಬಾಲಕಿಯರಲ್ಲಿ ಕಮ್ಮತ್ತಹಳ್ಳಿ ವೇದಿಕ್ ವಿದ್ಯಾಲಯದ ಬಾಲಕಿ ಯಶಸ್ವಿನಿ ಯು. ಪ್ರಥಮ, ಚಕ್ರ ಎಸೆತದಲ್ಲಿ ತೌಡೂರು ತಾಂಡಾ ಶಾಲೆಯ ತರುಣ್ ಪ್ರಥಮ, ಬಾಲಕಿಯರಲ್ಲಿ ಯರಬಳ್ಳಿ ಶಾಲೆಯ ಬಾಲಕಿ ಲಿಖಿತಾ ಪ್ರಥಮ, ಉದ್ದ ಜಿಗಿತದಲ್ಲಿ ಜ್ಞಾನ ಜ್ಯೋತಿ ಶಾಲೆಯ ಬಾಲಕ ಹೇಮಂತ್ ಎಂ. ಪ್ರಥಮ, ಬಾಲಕಿಯರಲ್ಲಿ ದಿವ್ಯಾ ಪ್ರಥಮ, ರಿಲೇಯಲ್ಲಿ ಶಾಂತ ಪ್ರಕಾಶ್ ನಗರ ಶಾಲೆಯ ಬಾಲಕರ ವಿಭಾಗ ಪ್ರಥಮ, ಜ್ಞಾನ ಜ್ಯೋತಿ ಶಾಲೆಯ ಬಾಲಕಿಯರ ವಿಭಾಗ ಪ್ರಥಮ ಸ್ಥಾನ ಪಡೆಯಿತು.ಈ ಸಂದರ್ಭ ಎಸ್‌ಡಿಎಂಸಿ ಅಧ್ಯಕ್ಷ ಖಾಜಾ ಹುಸೇನ್, ಮುಖಂಡರಾದ ಐ.ಸಲಾಂ ಸಾಹೇಬ್, ಪಿ. ಹಾಲೇಶ್, ವಿ. ವೆಂಕಟೇಶ್, ಸದಸ್ಯರಾದ ನಿಂಗಪ್ಪ, ಮುಖ್ಯ ಗುರುಗಳಾದ ಎಂ. ಮಾಲತೇಶ್ ಪಾಟೀಲ್, ಉ. ಜಗದೀಶಯ್ಯ, ಸುಜಾತಾ, ಉಪನ್ಯಾಸಕರಾದ ಹಾದಿಮನಿ ರಮೇಶ್, ಪ್ರದೀಪ್, ಶಿಕ್ಷಕರಾದ ಪರಶುರಾಮ್, ಬಸವರಾಜ್, ಎಲ್. ಮರ‍್ತಿ ನಾಯ್ಕ್, ಬಂದಮ್ಮ, ರೇಣುಕಮ್ಮ, ಪರ‍್ಣಿಮಾ, ಸುನಂದ, ಗಿರಿಜಾ, ರೇಖಾ ದೇವಿ, ಅಜ್ಜಯ್ಯ, ಪವನಕುಮಾರಿ, ಅನುಷಾ, ತರಬೇತುದಾರರಾದ ಬಸವರಾಜ್, ಸಂತೋಷ್, ಸಹ ಶಿಕ್ಷಕರು ಹಾಜರಿದ್ದರು.