ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ವಿಶ್ವದಲ್ಲಿ ಅತೀ ಹೆಚ್ಚು ಸದಸ್ಯತ್ವ ಹೊಂದಿದ ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.ನಗರದ ತಮ್ಮ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸಂಬಂಧಿಸಿದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ನಡೆದ ನೋಂದಣಿ ಅಭಿಯಾನಕ್ಕಿಂತಲೂ ಈ ಬಾರಿ ಅತಿ ಹೆಚ್ಚಿನ ಸಾಮಾನ್ಯ ಸದಸ್ಯರನ್ನು ಸೇರ್ಪಡೆಗೊಳಿಸುವ ಜವಾಬ್ದಾರಿ ಬೂತ್ ಮಟ್ಟದ ಅಧ್ಯಕ್ಷರು ಮತ್ತು ಕಾರ್ಯಕರ್ತರ ಜವಾಬ್ದಾರಿಯಾಗಿದ್ದು, ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ನಿರ್ವಹಿಸಬೇಕು. ಗೋಕಾಕ ವಿಧಾನಸಭಾ ಕ್ಷೇತ್ರದ ಎಲ್ಲ ಬೂತ್‌ಗಳಲ್ಲಿ ಕನಿಷ್ಠ 300ಕ್ಕೂ ಅಧಿಕ ಜನರ ಸದಸ್ಯತ್ವ ಮಾಡುವ ಮೂಲಕ ದಾಖಲೆ ನಿರ್ಮಿಸುವಂತೆ ತಿಳಿಸಿದರು.ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಸುಭಾಸ ಪಾಟೀಲ ಮಾತನಾಡಿ, ಕಳೆದ ಬಾರಿ 11ಕೋಟಿಗೂ ಹೆಚ್ಚು ಸದಸ್ಯರನ್ನು ಬಿಜೆಪಿ ಹೊಂದಿದ್ದು, ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಸದಸ್ಯತ್ವವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.ಬಿಜೆಪಿ ಸದಸ್ಯತ್ವ ಅಭಿಯಾನ ಪ್ರಮುಖ ಡಾ.ಕೆ.ವಿ. ಪಾಟೀಲ ಮಾತನಾಡಿ, ಸದಸ್ಯತ್ವವನ್ನು ನಮೋ ಆ್ಯಪ್, ಕ್ಯೂ ಆರ್ ಕೋಡ್ ಬಳಸಿ ಹಾಗೂ 8800002024ಗೆ ಮಿಸ್ ಕಾಲ್ ಮಾಡುವ ಮೂಲಕ ನೋಂದಾಯಿಸಬಹುದಾಗಿದೆ ಎಂದರು. ಬಿಜೆಪಿ ರಾಷ್ಟ್ರೀಯ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ ಸದಸ್ಯತ್ವ ಅಭಿಯಾನ ಕುರಿತು ಮಾತನಾಡಿದರು.ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಕೊಣ್ಣೂರ ಪುರಸಭೆ ಅಧ್ಯಕ್ಷ ವಿನೋದ ಕರನಿಂಗ, ಪದಾಧಿಕಾರಿಗಳಾದ ಎಸ್ ವಿ. ದೇಮಶೆಟ್ಟಿ, ಶಾಮಾನಂದ ಪೂಜಾರಿ, ಬಸವರಾಜ ಹಿರೇಮಠ, ಗುರುಪಾದ ಕಳ್ಳಿ, ಶಿವಾನಂದ ಪಾಟೀಲ, ದಯಾನಂದ ಇತರರು ವೇದಿಕೆಯ ಮೇಲಿದ್ದರು. ಕಿರಣ ಡಮಾಮಗರ ಸ್ವಾಗತಿಸಿದರು. ರಾಜೇಶ್ವರಿ ಒಡೆಯರ ನಿರೂಪಿಸಿದರು, ಪುಂಡಲೀಕ ವಣ್ಣೂರ ವಂದಿಸಿದರು.