ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ಬೀದರ್ ಲೋಕಸಭಾ ಮತಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲು ಮತಕ್ಷೇತ್ರದಲ್ಲಿ ಪಕ್ಷದ ಸಂಘಟನೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಎನ್ಸೆಸ್‌ಯುಐ ಪ್ರಧಾನ ಕಾರ್ಯದರ್ಶಿ ಸಾಗರ ಈಶ್ವರ ಖಂಡ್ರೆ ಹೇಳಿದರು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಬೀದರ್ ಲೋಕಸಭೆ ಮತಕ್ಷೇತ್ರಕ್ಕೆ ಸಾರ್ವತ್ರಿಕ ಚುನಾವಣೆ ದಿನಗಳು ಸಮೀಪಿಸುತ್ತಿರುವುದರಿಂದ ಪಕ್ಷದ ಸಂಘಟನೆಗಾಗಿ ಬೀದರ್ ಲೋಕಸಭಾ ಮತಕ್ಷೇತ್ರದ ಆಳಂದ, ಚಿಂಚೋಳಿ, ಹುಮನಾಬಾದ, ಭಾಲ್ಕಿ, ಔರಾದ, ಹುಲಸೂರ, ಕಮಲನಗರ, ಬಸವಕಲ್ಯಾಣ, ಬೀದರ್ ದಕ್ಷಿಣ ಮತಕ್ಷೇತ್ರಗಳಲ್ಲಿ ಪ್ರವಾಸ ಕೈಕೊಂಡು ಕಾಂಗ್ರೆಸ್ ಯುವ ಕಾರ್ಯಕರ್ತರನ್ನು ಸಂಘಟಿಸಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಿಗೆ ಸಾಕಷ್ಟು ಪ್ರಯೋಜನವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಗಾಳಿ ಬೀಸುತ್ತಿರುವುದರಿಂದ ಬರುವ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಭಗವಂತ ಖೂಬಾ ಅವರು ಬೀದರ್ ಕ್ಷೇತ್ರದಿಂದ ಸ್ಪರ್ಧಿಸಿ ಎರಡು ಸಲ ಗೆಲುವು ಸಾಧಿಸಿದ್ದರು. ೧೦ ವರ್ಷಗಳಲ್ಲಿ ಜನರು ನಿರೀಕ್ಷಿಸಿದಷ್ಟು ಅಭಿವೃದ್ಧಿ ಕೆಲಸಗಳು ಆಗಿಲ್ಲ. ಹಾಗಾಗಿ ಮತದಾರರು ಅವರನ್ನು ಸೋಲಿಸುವುದು ಖಚಿತವಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಬಸವರಾಜ ಮಲಿ, ಲಕ್ಷ್ಮಣ ಆವಂಟಿ, ಚಿಂತನ ರಾಠೋಡ, ಮಧಸೂಧನರೆಡ್ಡಿ, ಶರಣು ಮೋತಕಪಳ್ಳಿ, ಆನಂದ ಟೈಗರ್, ಸುರೇಶ ಬಂಟಾ, ನಾಗೇಶ ಗುಣಾಜಿ, ಡಾ. ತುಕಾರಾಮ ಪವಾರ, ಅಂಕಿತಾ, ನಾಗರಾಜ ಕಟ್ಟಿ, ಉಮೇಶ ಪಾಟೀಲ, ಮಂಜುನಾಥ ಲೇವಡಿ, ವಿಶ್ವನಾಥ ಬೀರನಳ್ಳಿ, ವಿಲಾಶ ದೇಗಲಮಡಿ, ಶಿವರಾಜ ಪಾಟೀಲ, ಅಣವೀರಪ್ಪ, ರಾಮಶೆಟ್ಟಿ ಪವಾರ, ರಾಮಶೆಟ್ಟಿ ಪಾಟೀಲ ಇನ್ನಿತರರಿದ್ದರು.