ಪೊಲೀಸ್‌ ಸರ್ಪಗಾವಲಿನಲ್ಲಿ ಪಾರ್ವತಮ್ಮನ ಕೊಂಡೋತ್ಸವ ಅದ್ಧೂರಿ

| Published : Jul 16 2025, 12:45 AM IST

ಸಾರಾಂಶ

ತಾಲೂಕಿನ ಆಲತ್ತೂರು ಗ್ರಾಮದಲ್ಲಿ ಕಸಕಲಪುರದ ಶ್ರೀ ಮಹಾ ಪಾರ್ವತಮ್ಮನ ಕೊಂಡೋತ್ಸವದ ಬಳಿಕ ಪೊಲೀಸರ ಸರ್ಪಗಾವಲಿನಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಆಲತ್ತೂರು ಗ್ರಾಮದಲ್ಲಿ ಕಸಕಲಪುರದ ಶ್ರೀ ಮಹಾ ಪಾರ್ವತಮ್ಮನ ಕೊಂಡೋತ್ಸವದ ಬಳಿಕ ಪೊಲೀಸರ ಸರ್ಪಗಾವಲಿನಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.

ಆಲತ್ತೂರು ಗ್ರಾಮದಿಂದ ಛತ್ರಿ, ಚಾಮರ ಮುಂತಾದ ಸಕಲ ಗೌರವಗಳೊಡನೆ ಕನ್ನಾ ಕನ್ನಡಿಯೊಂದಿಗೆ ನಂದಿ ಧ್ವಜ,ಮಂಗಳ ವಾದ್ಯಗಳ ಸಮೇತ ಶ್ರೀ ಅಮ್ಮನ ಉತ್ಸವ ಮೂರ್ತಿ ಮತ್ತು ಅಭರಣಗಳೊಡನೆ ದೇವಸ್ಥಾನಕ್ಕೆ ತೆರಳಲಾಯಿತು. ಮದ್ದೂರು ವಲಯದಲ್ಲಿರುವ ಮೂಲಕ ಪಾರ್ವತಾಂಬ ದೇವಸ್ಥಾನಕ್ಕೆ ತೆರಳಿ ಪಾರ್ವತಾಂಭಕ್ಕೆ ಅಭರಣ,ನವರತ್ನ ಪದಕಗಳು, ವಿವಿಧ ಹೂಗಳಿಂದ ಅಲಂಕರಿಸಿದರು.ಮಂಗಳವಾರ ನಸುಕು ೩ ಗಂಟೆಗೆ ಕೊಂಡೋತ್ಸವ ನಡೆಯಿತು.

ಕೊಂಡೋತ್ಸವದ ಬಳಿಕ ಬಾಯಿ-ಬೀಗ, ಕೊಂಡ ಮೀಯುವ ಮತ್ತು ಇತರೆ ಹರಕೆಗಳನ್ನು ಒಪ್ಪಿಸುವುದು. ಆನಂತರ ಎಡೆ ಪೂಜೆ, ಮಹಾ ಮಂಗಳಾರತಿ ಬಳಿಕ ಪ್ರಸಾದ ವಿನಿಯೋಗ ನಡೆಯಿತು. ಬಳಿಕ ಗ್ರಾಮಕ್ಕೆ ಗ್ರಾಮಸ್ಥರು ಮಂಗಳವಾರ ಬೆಳಗ್ಗೆ ಆಗಮಿಸಿದರು.

ಮಂಗಳವಾರ ಬೆಳಗ್ಗೆ ಆಲತ್ತೂರು ಗ್ರಾಮದಲ್ಲಿ ಅಲಂಕೃತ ಹೂವಿನ ಮಂಟಪದಲ್ಲಿ ಶ್ರೀ ಅಮ್ಮನ ಬಿಜಿಯ ಮಾಡಿಸಿದ ಬಳಿಕ ಎಲ್ಲಾ ಬೀದಿಗಳಲ್ಲಿ ಉತ್ಸವ ಮತ್ತು ಹರಕೆ ಉತ್ಸವಗಳಾದ ಬಳಿಕ ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು. ಡಿವೈಎಸ್ಪಿ ಲಕ್ಷ್ಮಯ್ಯ ನೇತೃತ್ವದಲ್ಲಿ ನಲವತ್ತಕ್ಕೂ ಹೆಚ್ಚು ಪೊಲೀಸರು ಉತ್ಸವದ ಸಮಯದಲ್ಲಿ ಬೀಡು ಬಿಟ್ಟಿದ್ದರು.