ಸಾರಾಂಶ
ರಾಮನಗರ: ಭಾರತದ ಪ್ರಥಮ ಗೃಹಮಂತ್ರಿಯಾಗಿ ಸರ್ದಾರ್ ಪಟೇಲ್ ಅವರು ದೇಶವನ್ನು ಏಕೀಕೃತವಾಗಿಸಿದ ಮಹತ್ವದ ಕೆಲಸ ಮಾಡಿದರು. ಅವರ ದೃಢನಿಶ್ಚಯ, ದೂರದೃಷ್ಟಿ ಮತ್ತು ದೇಶಪ್ರೇಮದಿಂದಲೇ ಇಂದಿನ ಭಾರತ ಒಂದು ಬಲಶಾಲಿ ರಾಷ್ಟ್ರವಾಗಿ ರೂಪುಗೊಂಡಿದೆ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.
ನಗರದ ರಾಯರದೊಡ್ಡಿಯಲ್ಲಿರುವ ಆರ್‌ವಿಪಿಎಸ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಮೈ ಭಾರತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಏಕತಾ ದಿನ ಸರ್ದಾರ್ @ 150 ಕಾರ್ಯಕ್ರಮದಲ್ಲಿ ಮಾತನಾಡಿದರು.ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಂತೆ ದೇಶಭಕ್ತಿಯ ಮಹತ್ವವನ್ನು ಅರ್ಥಮಾಡಿಕೊಳ್ಳಬಹುದು. ಸ್ವಾತಂತ್ರ್ಯದ ವೇಳೆಯಲ್ಲಿ ದೇಶದಲ್ಲಿದ್ದ 500ಕ್ಕಿಂತ ಹೆಚ್ಚು ಸಂಸ್ಥಾನಗಳನ್ನು ಒಗ್ಗೂಡಿಸುವುದು ಸುಲಭದ ಕೆಲಸವಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಏಕತೆ ಮೂಡಿದಾಗ ಮಾತ್ರ ದೇಶ ಬಲಶಾಲಿಯಾಯಿತು ಎಂದರು.
ರಾಷ್ಟ್ರ ಬಲವಾಗಿರಲು ಭದ್ರತೆ ಮತ್ತು ವ್ಯವಸ್ಥಿತ ಆಡಳಿತ ಅಗತ್ಯ. ಇಂದಿನ ಯುವಜನತೆಯೇ ಭಾರತದ ಶಕ್ತಿ. 142 ಕೋಟಿ ಜನಸಂಖ್ಯೆಯಲ್ಲಿ ಶೇ.40 ಕ್ಕಿಂತ ಹೆಚ್ಚು ಯುವ ಜನರಿದ್ದಾರೆ. ಇದೊಂದು ನಮ್ಮ ದೇಶದ ದೊಡ್ಡ ಸಂಪತ್ತು. ಆದ್ದರಿಂದ, ನಾವು ಭಾರತವನ್ನು ಗೌರವಿಸಬೇಕು, ಪ್ರೀತಿಸಬೇಕು, ರಕ್ಷಿಸಬೇಕು ಇದೇ ನಮ್ಮ ಕರ್ತವ್ಯ ಎಂದು ಹೇಳಿದರು.ಇಂದು ಭಾರತವು ಕೇವಲ ಆರ್ಥಿಕ ಶಕ್ತಿಯಾಗಿರದೆ ರಕ್ಷಣಾ ಕ್ಷೇತ್ರದಲ್ಲಿಯೂ ಶಕ್ತಿಶಾಲಿ ರಾಷ್ಟçವಾಗಿ ಹೊರಹೊಮ್ಮಿದೆ. ಇತ್ತೀಚೆಗೆ ನಡೆದ ''''''''ಆಪರೇಷನ್ ಸಿಂಧೂರ್'''''''' ಸೇರಿದಂತೆ ಹಲವು ಕಾರ್ಯಾಚರಣೆಗಳಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ವಿಶ್ವದ ಮುಂದೆ ತೋರಿಸಿದೆ ಎಂದು ತಿಳಿಸಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕನಸಿನಂತೆ ಭಾರತವು ಜಗತ್ತಿನ ಅತಿ ದೊಡ್ಡ ಮತ್ತು ಸದೃಢ ರಾಷ್ಟ್ರವಾಗಿ ರೂಪುಗೊಳ್ಳುತ್ತಿದೆ. ಶಿಕ್ಷಣವೇ ಪ್ರಗತಿಯ ಚಾವಿ; ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ವಿದ್ಯಾರ್ಥಿಗಳೇ ನಾಳೆಯ ಭಾರತದ ನಿಜವಾದ ಶಕ್ತಿ ಎಂದರು.ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿ ಜಿಲ್ಲಾ ಮಟ್ಟದ ಸರ್ದಾರ್ @150 ಏಕತಾ ಪಾದಯಾತ್ರೆಗೆ ಸಂಸದರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ಮೋಲ್ ಜೈನ್, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಉಪವಿಭಾಗಾಧಿಕಾರಿ ಬಿನೋಯ್, ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸತೀಶ್, ಮೈಭಾರತ್ ಜಿಲ್ಲಾ ಅಧಿಕಾರಿ ಶ್ರೀವಾಣಿ ಉಪಸ್ಥಿತರಿದ್ದರು.18ಕೆಆರ್ ಎಂಎನ್ 5.ಜೆಪಿಜಿ
ರಾಮನಗರದ ರಾಯರದೊಡ್ಡಿಯಲ್ಲಿರುವ ಆರ್.ವಿ.ಸಿ.ಎಸ್ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಏಕತಾ ದಿನ ಸರ್ದಾರ್ @ 150 ಕಾರ್ಯಕ್ರಮದಲ್ಲಿ ಸರ್ದಾರ್ ಪಟೇಲ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.)
)
;Resize=(128,128))
;Resize=(128,128))
;Resize=(128,128))
;Resize=(128,128))