ದೇಶ ಒಗ್ಗೂಡಿಸುವಲ್ಲಿ ಪಟೇಲರ ಕಾರ್ಯ ಅನನ್ಯ

| Published : Nov 01 2025, 03:15 AM IST

ಸಾರಾಂಶ

ಅನೇಕ ಪ್ರಾಂತ್ಯಗಳು ಭಾರತದ ಒಕ್ಕೂಟ ಸೇರುವ ನಿಟ್ಟಿನಲ್ಲಿ ಪಟೇಲರು ವಹಿಸಿದ ಕಾರ್ಯ ಅನನ್ಯ

ಕನನಡಪ್ರಭ ವಾರ್ತೆ ವಿಜಯಪುರ

ಸರ್ದಾರ್‌ ವಲ್ಲಭಭಾಯಿ ಪಟೇಲ್ ಉಕ್ಕಿನ ಮನುಷ್ಯರೆಂದೆ ಖ್ಯಾತಿ. ದೇಶದ ಸ್ವಾತಂತ್ರ್ಯಕ್ಕಾಗಿ ಮಹೋನ್ನತ ಕೊಡುಗೆ ನೀಡಿದ ಮಹಾನ್ ಚೇತನ. ಹೈದರಾಬಾದ್ ವಿಮೋಚನೆಗಾಗಿ ದಿಟ್ಟವಾದ ಸೈನ್ಯ ಕಾರ್ಯಾಚರಣೆ ನಡೆಸಿ ಅದನ್ನು ದೇಶದ ಭಾಗವಾಗಿಸಿದರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.

ಭಾರತೀಯ ಜನತಾ ಪಕ್ಷದ ವತಿಯಿಂದ ಸರ್ದಾರ್‌ ವಲ್ಲಭಭಾಯಿ ಪಟೇಲ್ ಜಯಂತ್ಯುತ್ಸವ ಆಚರಿಸಲಾಯಿತು. ನಗರದ ಸರ್ದಾರ್‌ ವಲ್ಲಭಾಯಿ ಪಟೇಲ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪುಷ್ಪಾಂಜಲಿ ಸಲ್ಲಿಸುವ ಮೂಲಕ ನಮನ ಸಲ್ಲಿಸಿ ಅವರು ಮಾತನಾಡಿದರು. ಅನೇಕ ಪ್ರಾಂತ್ಯಗಳು ಭಾರತದ ಒಕ್ಕೂಟ ಸೇರುವ ನಿಟ್ಟಿನಲ್ಲಿ ಪಟೇಲರು ವಹಿಸಿದ ಕಾರ್ಯ ಅನನ್ಯ. ಅವರೊಬ್ಬರ ಧೀಮಂತ ಜನನಾಯಕ, ಈ ಕಾರಣಕ್ಕಾಗಿಯೇ ಅವರ ಬೃಹತ್ ಪ್ರತಿಮೆಯನ್ನು ಬಿಜೆಪಿ ಸರ್ಕಾರ ಅವಧಿಯಲ್ಲಿ ಸ್ಥಾಪಿಸಲಾಗಿದೆ, ಅವರ ಆದರ್ಶಗಳು ನಮಗೆ ಮಾರ್ಗದರ್ಶಿ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ, ಡಾ.ಸುರೇಶ ಬಿರಾದಾರ, ಶಿವರುದ್ರ ಬಾಗಲಕೋಟೆ, ಶಂಕರಗೌಡ ಪಾಟೀಲ, ಶ್ರೀಧರ ಬಿಜ್ಜರಗಿ, ಬಸವರಾಜ ಬೈಚಬಾಳ, ಕೃಷ್ಣಾ ಗುನ್ನಾಳಕರ, ರಮೇಶ ಬಿದನೂರ, ಸಂದೀಪ ಪಾಟೀಲ, ಪಾಪುಸಿಂಗ ರಜಪೂತ, ಚಿನ್ನು ಚಿನ್ನಗೊಂಡ, ಡಾ.ಮಲ್ಲನಗೌಡ ಬಿರಾದಾರ, ಮಲ್ಲಿಕಾರ್ಜುನ ಕಲಾದಗಿ ಮೊದಲಾದವರು ಇದ್ದರು.