ಕನ್ನಡಪ್ರಭ ವಾರ್ತೆ ಮಸ್ಕಿಆರ್ ಎಸ್ ಎಸ್ ಸಂಸ್ಥಾಪನಾ ದಿನದ ನಿಮಿತ್ತ ಬುಧವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘಣವೇಷದಾರಿ ಸ್ವಯಂ ಸೇವಕರು ಆಕರ್ಷಕ ವಿಜಯ ದಶಮಿ ಪಥ ಸಂಚಲನವನ್ನು ಸಂಘದ ಘೋಷ್ ನೊಂದಿಗೆ ನಡೆಸಲಾಯಿತು.ಮಸ್ಕಿ ಪಟ್ಟಣದ ತೇರಿನ ಮನೆಯಿಂದ ಆರಂಭವಾದ ಪಥ ಸಂಚಲನವು ಉಪ್ಪಲದೊಡ್ಡಿ ಪೇಟಿ, ಹಳೆಯ ಪೊಲೀಸ್ ಠಾಣೆ, ಕಲ್ಗುಡಿ ಚೌಡೇಶ್ವರಿ ದೇವಸ್ಥಾನ, ಸಂತೆ ಬಜಾರ, ಅಶೋಕ ವೃತ್ತ, ಹಳೆಯ ಬಸ್ ನಿಲ್ದಾಣ, ಚೆನ್ನಮ್ಮ ವೃತ್ತ, ಶಾಸಕರ ಹಳೆಯ ಕಚೇರಿ ರಸ್ತೆ, ಡಾ. ಖಲೀಲ್ ವೃತ್ತ, ದೈವದಕಟ್ಟೆ, ತೇರು ಬೀದಿ ಮಾರ್ಗವಾಗಿ ನರಸನಗೌಡ ಸ್ಮಾರಕ ಆಂಗ್ಲ ಮಾಧ್ಯಮ ಶಾಲಾ ಆವರಣಕ್ಕೆ ಆಗಮಿಸಿತು.ಸಂಚಲನ ನಡೆಯುವ ದಾರಿಯುದ್ದಕ್ಕೂ ಸ್ಥಳೀಯರು ರಂಗೋಲಿ ಹಾಕಿ, ತಳಿರು ತೋರಣಗಳಿಂದ ರಸ್ತೆಗಳನ್ನು ಸಿಂಗಾರ ಮಾಡಿದ್ದರು. ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ರಾಷ್ಟ್ರಪುರುಷ ವೇಷಧಾರಿ ಮಕ್ಕಳು ನಿಂತು ಗಮನ ಸೆಳೆದರು. ಮುಖ್ಯ ಬಜಾರ್ ಸೇರಿದಂತೆ ವಿವಿದೆಡೆ ಕೇಸರಿ ಬಣ್ಣದ ಮಹಾದ್ವಾರಗಳನ್ನು ನಿರ್ಮಿಸಲಾಗಿತ್ತು.ಪಥ ಸಂಚಲನದ ಸ್ವಯಂ ಸೇವಕರಿಗೆ ಹಾಗೂ ಭಗವಧ್ವಜಕ್ಕೆ ಸಾರ್ವಜನಿಕರು ಪುಷ್ಪಾರ್ಪಣೆ ಮಾಡಿದರು. ಭಾರತ್ ಮಾತಾಕೀ ಜೈ ಎಂಬ ಘೋಷಣೆ ಹಾಕಿದರು.ದೈವದಕಟ್ಟೆ ಬಳಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಮುಖಂಡ ಅಪ್ಪಾಜಿಗೌಡ ಪಾಟೀಲ, ಶಿವಶಂಕ್ರಪ್ಪ ಹಳ್ಳಿ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಪ್ರಸನ್ನ ಪಾಟೀಲ, ರವಿಕುಮಾರ ಪಾಟೀಲ, ಶಿವಶಂಕ್ರಪ್ಪ ಹಳ್ಳಿ, ಪ್ರಕಾಶ ದಾರಿವಾಲ, ಉಪಾಧ್ಯಕ್ಷೆ ಸಂಘದ ಉತ್ತರ ಕರ್ನಾಟಕದ ಸಹ ಪ್ರಾಂತ ಪ್ರಚಾರಕ ಶ್ರೀ ನಿವಾಸನಾಯ್ಕ, ತಿರುಪತಿ ಮಡಿವಾಳ ಸೇರಿದಂತೆ ಹಲವಾರು ಮುಖಂಡರು ನಿಂತು ಪಥ ಸಂಚಲನ ವಿಕ್ಷಿಸಿದರು.ಡಿವೈಎಸ್ ಪಿ ದತ್ತಾತ್ರೇಯ ಕರ್ನಾಡ್, ಸಿಪಿಐ ಬಾಲಚಂದ್ರ ಡಿ. ಲಕ್ಕಂ, ಪಿಎಸ್ಐ ತಾರಾಭಾಯಿ ನೇತೃತ್ವದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಆರ್.ಎಸ್.ಎಸ್ ಗಣವೇಷಧಾರಿಗಳಿಂದ ಪಥ ಸಂಚಲನ
ಆರ್ ಎಸ್ ಎಸ್ ಸಂಸ್ಥಾಪನಾ ದಿನದ ನಿಮಿತ್ತ ಬುಧವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘಣವೇಷದಾರಿ ಸ್ವಯಂ ಸೇವಕರು ಆಕರ್ಷಕ ವಿಜಯ ದಶಮಿ ಪಥ ಸಂಚಲನವನ್ನು ಸಂಘದ ಘೋಷ್ ನೊಂದಿಗೆ ನಡೆಸಲಾಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.