ಯೋಧರು, ಪೊಲೀಸ್ ಇಲಾಖೆಯಿಂದ ಪಥ ಸಂಚಲನ

| Published : Apr 15 2024, 01:15 AM IST

ಸಾರಾಂಶ

ಮೂಡಲಗಿ: ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತ್ತು ಮೇ.7ರಂದು ಜರುಗುವ ಲೋಕಸಭಾ ಚುನಾವಣೆ ಹಿನ್ನೆಲೆ ಅರಭಾವಿ ಮತಕ್ಷೇತ್ರದಲ್ಲಿ ಮತದಾರರು ಧೈರ್ಯದಿಂದ ಮತದಾನ ಮಾಡಿ ಸಂವಿಧಾನ ಹಕ್ಕು ಪಡೆಯಬೇಕು ಎಂದು ಕೇಂದ್ರಿಯ ಔದ್ಯೋಗಿಕ ಭದ್ರತಾ ಮೀಸಲು (ಸಿಐಎಸ್‌ಎಫ್) ಪಡೆಯ ಯೋಧರು ಹಾಗೂ ಪೊಲೀಸ್ ಇಲಾಖೆಯಿಂದ ಶನಿವಾರ ಮೂಡಲಗಿ ಪಟ್ಟಣದಲ್ಲಿ ಪಥ ಸಂಚಲನ ಕೈಗೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತ್ತು ಮೇ.7ರಂದು ಜರುಗುವ ಲೋಕಸಭಾ ಚುನಾವಣೆ ಹಿನ್ನೆಲೆ ಅರಭಾವಿ ಮತಕ್ಷೇತ್ರದಲ್ಲಿ ಮತದಾರರು ಧೈರ್ಯದಿಂದ ಮತದಾನ ಮಾಡಿ ಸಂವಿಧಾನ ಹಕ್ಕು ಪಡೆಯಬೇಕು ಎಂದು ಕೇಂದ್ರಿಯ ಔದ್ಯೋಗಿಕ ಭದ್ರತಾ ಮೀಸಲು (ಸಿಐಎಸ್‌ಎಫ್) ಪಡೆಯ ಯೋಧರು ಹಾಗೂ ಪೊಲೀಸ್ ಇಲಾಖೆಯಿಂದ ಶನಿವಾರ ಮೂಡಲಗಿ ಪಟ್ಟಣದಲ್ಲಿ ಪಥ ಸಂಚಲನ ಕೈಗೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಿದರು.

ಪಟ್ಟಣದ ವಿದ್ಯಾನಗರ, ಅಂಬೇಡ್ಕರ್ ನಗರ, ಕಲ್ಮೇಶ್ವರ ವೃತ್ತ, ಸಂಗಪ್ಪ ವೃತ್ತ, ಬಸವೇಶ್ವರ ವೃತ್ತ, ಕರೇಮ್ಮ ದೇವಿ ಸರ್ಕಲ್, ಚನ್ನಮ್ಮ ಸರ್ಕಲ್ ಮಾರ್ಗವಾಗಿ ಮುಖ್ಯ ರಸ್ತೆಗಳಲ್ಲಿ ಸಿಐಎಸ್‌ಎಫ್ ಪಡೆಯ ಸುಮಾರು 100 ಯೋಧರು ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಪಥ ಸಂಚಲನ ಮಾಡಿದರು.

ಈ ಸಂದರ್ಭದಲ್ಲಿ ಅರಬಾವಿ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಪ್ರಭಾವತಿ ಫಕೀರಪೂರ, ಮೂಡಲಗಿ ತಹಸೀಲ್ದಾರ್‌ ಬಿ.ಎಸ್.ಕಡಕಬಾವಿ, ಗೋಕಾಕ ಡಿವೈಎಸ್ಪಿ ದೂದಪೀರ್ ಎಚ್.ಮುಲ್ಲಾ, ಮೂಡಲಗಿ ಸಿಪಿಐ ಅಬ್ದುಲ್‌ವಾಜೀದ್ ಪಟೇಲ್, ಮೂಡಲಗಿ ಪಿಎಸೈಗಳಾದ ಚಂದ್ರಶೇಖರ ಹೆರಕಲ್, ಬಿ.ಎಚ್.ಕುಂಬಾರ, ಕುಲಗೋಡ ಠಾಣೆಯ ಪಿಎಸೈಗಳಾದ ಆನಂದ ಸಿ, ನರಹಿಂಹರಾಜು.ಡಿ ಹಾಗೂ ಯೋಧರ ಪಡೆಯ ಮುಖ್ಯಸ್ಥರಾದ ಈರಾಲಾ ಭಾರತಿಯ, ಎ.ಎನ್.ಯಾದವಾದ ಹಾಗೂ ಯೋಧರು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಪಥ ಸಂಚಲದಲ್ಲಿ ಭಾಗವಹಿಸಿದ್ದರು.

ಮೊದಲಿಗೆ ಪೊಲೀಸ್ ಠಾಣೆಯ ಆವರಣದಲ್ಲಿ ಯೋಧರನ್ನು ಪುರಸಭೆ ಸದ್ಯರು ಮತ್ತಿತರು ಹೂ-ಮಾಲೆ ಹಾಕಿ ಸ್ವಾಗತಿಸಿಕೊಂಡರು.