ರೋಗಿಗಳಿಗೆ ಸರಿಯಾಗಿ ರಕ್ತ ದೊರಕುತ್ತಿಲ್ಲ: ಜಿಲ್ಲಾಧಿಕಾರಿ ಡಾ.ಕುಮಾರ

| Published : Jul 24 2025, 12:49 AM IST

ರೋಗಿಗಳಿಗೆ ಸರಿಯಾಗಿ ರಕ್ತ ದೊರಕುತ್ತಿಲ್ಲ: ಜಿಲ್ಲಾಧಿಕಾರಿ ಡಾ.ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ರಕ್ತನಿಧಿ ಕೇಂದ್ರ ಸಾರ್ವಜನಿಕರು ವೈದ್ಯರಿಗೆ ದೇವರ ಸ್ಥಾನ ನೀಡುತ್ತಾರೆ. ವೈದ್ಯರು ಸ್ವ ಪ್ರತಿಷ್ಠೆಯಿಂದ ಮಿಮ್ಸ್ ನಲ್ಲಿರುವ ರಕ್ತ ಕೇಂದ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ರೋಗಿಗಳಿಗೆ ರಕ್ತ ದೊರಕುತ್ತಿಲ್ಲ, ರಕ್ತದಾನ ಶಿಬಿರಗಳು ಜಿಲ್ಲೆಯಲ್ಲಿ ನಡೆಯುತ್ತಿಲ್ಲ ಎಂದರೆ ತಲೆ ತಗ್ಗಿಸಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಕ್ತನಿಧಿ ಕೇಂದ್ರದ ಅಧಿಕಾರಿಗಳು ರೋಗಿಗಳಿಗೆ ಸ್ಪಂದಿಸಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಿಮ್ಸ್ ವೈದ್ಯರೊಂದಿಗೆ ಸಭೆ ನಡೆಸಿ ಮಾತನಾಡಿ, ರೋಗಿಗಳ ಜೀವ ಉಳಿಸಲು ತುರ್ತಾಗಿ ರಕ್ತ ಬೇಕಿದೆ. ಈ ವೇಳೆ ರಕ್ತನಿಧಿ ಕೇಂದ್ರ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ರೋಗಿಗಳು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಸಹ ಎದುರಿಸಬೇಕಾಗಬಹುದು ಎಂದರು.

ರಕ್ತನಿಧಿ ಕೇಂದ್ರ ಸಾರ್ವಜನಿಕರು ವೈದ್ಯರಿಗೆ ದೇವರ ಸ್ಥಾನ ನೀಡುತ್ತಾರೆ. ವೈದ್ಯರು ಸ್ವ ಪ್ರತಿಷ್ಠೆಯಿಂದ ಮಿಮ್ಸ್ ನಲ್ಲಿರುವ ರಕ್ತ ಕೇಂದ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ರೋಗಿಗಳಿಗೆ ರಕ್ತ ದೊರಕುತ್ತಿಲ್ಲ, ರಕ್ತದಾನ ಶಿಬಿರಗಳು ಜಿಲ್ಲೆಯಲ್ಲಿ ನಡೆಯುತ್ತಿಲ್ಲ ಎಂದರೆ ತಲೆ ತಗ್ಗಿಸಬೇಕಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಈ ಹಿಂದೆ ಹಲವು ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತ ಸಂಗ್ರಹಿಸಿ ಅವಶ್ಯಕವಿದ್ದಾಗ ಬೇರೆ ಜಿಲ್ಲೆಗೆ ನೀಡಲಾಗುತ್ತಿತ್ತು. ಇಂದು ಮಿಮ್ಸ್ ಗೆ ಬರುವ ರೋಗಿಗಳು ಖಾಸಗಿ ರಕ್ತ ನಿಧಿ ಕೇಂದ್ರದಿಂದ ರಕ್ತ ತರಬೇಕು ಎಂದರೆ ಬಡವರಿಗೆ ಕಷ್ಟಕರವಾಗುತ್ತದೆ ಎಂದರು.

ಮಿಮ್ಸ್ ಗೆ ಬರುವ ರೋಗಿಗಳು ಬಡವರು ಎಂಬುವುದನ್ನು ಮರೆಯಬೇಡಿ. ಮಾನವೀಯತೆ ಹಾಗೂ ಹೃದಯವಂತಿಕೆಯನ್ನು ರೂಢಿಸಿಕೊಂಡು ಕೆಲಸ ನಿರ್ವಹಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಮಿಮ್ಸ್ ನ ರಕ್ತ ನಿಧಿ ಕೇಂದ್ರ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ರಕ್ತಕ್ಕೆ ಕೃತಕ ಬೇಡಿಕೆ ಸೃಷ್ಠಿಯಾಗಿ ಹಲವು ತೊಂದರೆ ಉಂಟಾಗುತ್ತದೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮಿಮ್ಸ್ ನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಎಂದು ನಿರ್ದೇಶನ ನೀಡಿದರು.

ಮಿಮ್ಸ್ ನಲ್ಲಿ ರಕ್ತ ನಿಧಿ ಕೇಂದ್ರದಲ್ಲಿ ಉಂಟಾಗಿರುವ ತೊಂದರೆ ಕೂಡಲೇ ಸರಿಗೊಳಿಸಬೇಕು. ಈ ಹಿಂದೆ ರಕ್ತ ನಿಧಿ ಕೇಂದ್ರ ನಡೆಯುತ್ತಿದ್ದ ರೀತಿಯಲ್ಲಿ ನಡೆಯಬೇಕು. ಇದಕ್ಕೆ ಸಂಬಂಧಿಸಿದಂತೆ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸುವಂತೆ ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಅವರಿಗೆ ಸೂಚನೆ ನೀಡಿದರು.

ರಕ್ತ ನಿಧಿ ಕೇಂದ್ರದಲ್ಲಿ ರಕ್ತದ ಯುನಿಟ್ ಗಳನ್ನು ಹೆಚ್ಚಿಸಲು ರೆಡ್‌ಕ್ರಾಸ್ ಸಂಸ್ಥೆಯೊಂದಿಗೆ ಶಿಬಿರಗಳನ್ನು ಆಯೋಜಿಸಿ ಪ್ರತಿದಿನ ರಕ್ತ ನಿಧಿ ಕೇಂದ್ರದ ಕಾರ್ಯನಿರ್ವಹಣೆಯನ್ನು ನಿಯಮಿತವಾಗಿ ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ: ಶಿವಕುಮಾರ್ ಅವರು ಪರಿಶೀಲನೆ ನಡೆಸುವಂತೆ ತಿಳಿಸಿದರು.

ರಕ್ತ ನಿಧಿ ಕೇಂದ್ರಕ್ಕೆ ಸಂಬಂಧಿಸಿದಂತೆ ಪುನಃ ದೂರುಗಳು ಕೇಳಿಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ರೆಡ್ ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಿಮ್ಸ್ ಪೆಥಾಲಜಿ, ರಕ್ತ ನಿಧಿ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.