ಕೃಷಿ ರಂಗದಲ್ಲಿನ ಪಾಟೀಲರ ಸಂಶೋಧನೆ ತುಂಬ ದೊಡ್ಡದು: ಸೇಡಂ

| Published : Jul 17 2024, 12:49 AM IST

ಕೃಷಿ ರಂಗದಲ್ಲಿನ ಪಾಟೀಲರ ಸಂಶೋಧನೆ ತುಂಬ ದೊಡ್ಡದು: ಸೇಡಂ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡದ ಕೃಷಿ ವಿವಿ ಕುಲಪತಿಗಳಾಗಿದ್ದ, ಐಎಆರ್‌ಐ ನಿರ್ದೇಶಕರಾಗಿ ಸಾದನೆ ಮಾಡಿದ್ದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ ಗ್ರಾಮದವರಾದ ಖ್ಯಾತ ವಿಜ್ಞಾನಿ ಎಸ್‌.ಎ. ಪಾಟೀಲರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಧಾರವಾಡದ ಕೃಷಿ ವಿವಿ ಕುಲಪತಿಗಳಾಗಿದ್ದ, ಐಎಆರ್‌ಐ ನಿರ್ದೇಶಕರಾಗಿ ಸಾದನೆ ಮಾಡಿದ್ದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ ಗ್ರಾಮದವರಾದ ಖ್ಯಾತ ವಿಜ್ಞಾನಿ ಎಸ್‌.ಎ. ಪಾಟೀಲರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.

ಕಲಬುರಗಿ ವಿಕಾಸ ಅಕ್ಯಾಡೆಮಿ ಅಧ್ಯಕ್ಷರು, ಮಾಜಿ ಸಂಸದರಾಗಿರುವ ಬಸವರಾಜ ಪಾಟಲ್‌ ಸೇಡಂ ಹೇಳಿಕೆ ನೀಡಿದ್ದು, ಪಾಟೀಲರು ದೇಶದ ಹೆಮ್ಮೆಯ ಕೃಷಿ ವಿಜ್ಞಾನಿಯಾಗಿದ್ದವರು. ಅವರು ಕಲಬುರಗಿಯವರು ಅನ್ನೋದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಅವರಿಂದು ನಮ್ಮೊಂದಿಗಿಲ್ಲ ಅನ್ನೋದು ದುಖದ ಸಂಗತಿ ಎಂದು ವಿಷಾದಿಸಿದ್ದಾರೆ. ಕೃಷಿ ಸಂಶೋಧನೆಯಲ್ಲಿ ಜಾಗತಿಕವಾಗಿ ಹೆಸರು ಮಾಡಿದ್ದ ಪಾಟೀಲರು ಇಲ್ಲ ಅನ್ನದು ನಂಬಲಾಗುತ್ತಿಲ್ಲ. ಅವರ ನೊಂದ ಪರಿವಾರಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ಕರುಣಿಸಲಿ, ಅವರ ಶಿಷ್ಯ ವೃಂದಕ್ಕೂ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಪಾಟೀಲರು ಹೇಳಿಕೆಯಲ್ಲಿ ಕಂಬನಿ ಮಿಡಿದ್ದಾರೆ.

ಅಜಯ್ ಸಿಂಗ್‌ ಕಂಬನಿ: ಖ್ಯಾತ ವಿಜ್ಞಾನಿ ಪಾಟೀಲರ ನಿಧನಕ್ಕೆ ಕೆಕೆಆರ್‌ಡಿಬಿ ಅಧ್ಯಕ್ಷರು., ಜೇವರ್ಗಿ ಶಾಸಕರಾದ ಡಾ. ಅಜಯ್‌ ಧರ್ಮಸಿಂಗ್‌ ಸಂತಾಪ ಸೂಚಿಸಿದ್ದಾರೆ. ಜೇವರ್ಗಿ ಕ್ಷೇತ್ರದವರಾಗಿದ್ದ ಪಾಟೀಲರು ಮುಖ್ಯವಾಗಿ ತಮ್ಮ ಹಾಗೂ ದಿ. ತಂದೆಯವರಾದ ಧರ್ಮಸಿಂಗ್‌ ಅವರಿಗೆ ತುಂಬ ಆಪ್ತರಾಗಿದ್ದರು. ಅವರ ಅಗಲಿಕೆ ತುಂಬ ನೋವು ತಂದಿದೆ. ಅವರ ನಿಧನ ಕೃಷಿ ವಲಯಕ್ಕೆ ತುಂಬ ನಷ್ಟ ಉಂಟು ಮಾಡಿದೆ ಎಂದಿದ್ದಾರೆ.

ಎಂಎಸ್‌ಪಿ ಕಂಬನಿ: ಜೇವರ್ಗಿಯಿ ಹಳ್ಳಿಯಾಗಿರುವ ಬಿರಾಳದಲ್ಲಿ ಹುಟ್ಟಿ ಜಗತ್ತಿಗೆ ಕೃಷಿ ರಂಗದಲ್ಲಿ ಅಪಾರ ಕೊಡುಗೆ ನೀಡಿರುವ ಎಸ್‌ ಎ ಪಾಟೀಲರು ನಮ್ಮವರು ಎಂಬುದೇ ನಮಗೆ ಹೆಮ್ಮೆಯ ಸಂಗತಿ ಎಂದು ವಿರಶೈವ ಲಿಂಗಾಯತ ಸಮಾಜದ ಯುವ ಮುಖಂಡ ಎಂಎಸ್‌ ಪಾಟೀಲ್‌ ನರಿಬೋಳ್‌ ಕಂಬನಿ ಮಿಡಿದಿದ್ದಾರೆ.

ಕೃಷಿ ಕ್ಷೇತ್ರಕ್ಕೆ ತನ್ನದೆ ಆದ ಕೋಡುಗೆ ನೀಡಿದ ಕರ್ನಾಟಕ ಕೃಷಿ ಮಿಷನ್ ಮಾಜಿ ಚೇರಮನ್, ನವದೆಹಲಿಯ ಅಗ್ರಿಕಲ್ಚರ್ ರಿಸರ್ಚ ಇನ್ಸ್ಟಿಟ್ಯೂಟ್ ನಿರ್ದೇಶಕ, ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ ವೈಸ್ ಚೇರಮನ್ ಆಗಿ ಸೇವೆ ಸಲ್ಲಿಸಿದ ಜೇವರ್ಗಿ ತಾಲೂಕಿನ ಬಿರಾಳ ಗೌಡರು ಎಂದೆ ಪ್ರಸಿದ್ದಿಯಾಗಿದ್ದ ಕೃಷಿ ವಿಜ್ಙಾನಿ ಡಾ.ಎಸ್.ಎ.ಪಾಟೀಲ ನಿದನ ಗ್ರಾಮಕ್ಕೆ ಅಷ್ಟೆ ಅಲ್ಲದೆ ರಾಜ್ಯಕ್ಕೂ ದೇಶಕ್ಕು ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬದವರಿಗೆ ದುಖಃ ಭರಿಸುವ ಶಕ್ತಿ ನೀಡಲಿ ಎಂದು ಹೋರಾಟಗಾರಎಂ ಎಸ್ ಪಾಟೀಲ ನರಿಬೋಳ ಪ್ರಾರ್ಥಿಸಿದ್ದಾರೆ.

ಶಾಸಕ ಅಲ್ಲಂಪ್ರಭು ಸಂತಾಪ: ಜೇವರ್ಗಿ ತಾಲೂಕಿನ ಬಿರಾಳದವರಾದ ಎಸ್‌ ಎ ಪಾಟೀಲರು ರೈತರಿಗಾಗಿ ಸದಾಕಾಲ ಮಿಡಿದವರು. ತಮ್ಮ ಇಡೀ ಬದುಕನ್ನೇ ರೈತರ ಏಳಿಗೆಗೆ ಮೀಸಲಿಟ್ಟವರು. ಇವರ ಹೆಚ್ಚು ಇಳುವರಿ ತಳಿಗಳ ಸಂಶೋಧನೆ ರೈತರಿಗೆ, ದೇಶಕ್ಕೆ ಆರ್ಥಿಕ ಬಲ ನೀಡಿದೆ. ಹತ್ತಿಯ ವರಲಕ್ಷ್ಮೀ, ಜಯಲಕ್ಷ್ಮೀ ತಳಿಗಳು, ಎಣ್ಣೆಕಾಳುಗಳಾದ ಸೂರ್ಯಕಾಂತಿ, ಔಡಲ ಸರಿದಂತೆ ಅನೇಕ ಬೀಜಗಳ ಹೈಬ್ರೀಡ್‌ ಹೆಚ್ಚು ಇಳುವರಿಯ ತಳಿಗಳನ್ನು ಶೋಧಿಸಿ ಇವರು ಕೃಷಿಕರಿಗೆ ಕೊಡುಗೆ ನೀಡಿದ್ದಾರೆ.