ಲಂಡನ್‌ನ ಬಸವೇಶ್ವರರಿಗೆ ಪಾಟೀಲ್‌, ಸುಧಾಕರ್‌ ಗೌರವ

| Published : Sep 09 2025, 01:00 AM IST

ಸಾರಾಂಶ

ಕರ್ನಾಟಕದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರು ಸೋಮವಾರ ಬ್ರಿಟನ್‌ನಲ್ಲಿನ ಲ್ಯಾಂಬೆತ್‌ ಬಸವೇಶ್ವರ ಪುತ್ಥಳಿಗೆ ಗೌರವ ಸಲ್ಲಿಸಿದರು.

ಲಂಡನ್‌: ಕರ್ನಾಟಕದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರು ಸೋಮವಾರ ಬ್ರಿಟನ್‌ನಲ್ಲಿನ ಲ್ಯಾಂಬೆತ್‌ ಬಸವೇಶ್ವರ ಪುತ್ಥಳಿಗೆ ಗೌರವ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಬಸವಣ್ಣನವರ ತತ್ವಾದರ್ಶಗಳು ಇಂದಿಗೂ ಆದರ್ಶವಾಗಿದೆ. ಅವರು ಹಾಕಿಕೊಟ್ಟ ಮಾರ್ಗಗಳ ನಾವು ನಡೆಯುತ್ತಿದ್ದೇವೆ ಎಂದರು.

ಲಂಡನ್‌ಗೆ ಆಗಮಸಿದ ಸಚಿವರನ್ನು ಲ್ಯಾಂಬೆತ್‌ನ ಮಾಜಿ ಮೇಯರ್‌ ಡಾ. ನೀರಜ್‌ ಪಟೇಲ್‌, ಬಸವ ಸಮಿತಿಯ ಉಪಾಧ್ಯಕ್ಷ ಅಭಿಜಿತ್‌ ಸಾಲಿಮಠ್‌, ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಉಪಾಧ್ಯಕ್ಷೆ ಗುರ್ಮಿತ್‌ ರಾಂಧವ ಮತ್ತು ಬ್ರಿಟನ್‌ ಕನ್ನಡ ಸಮುದಾಯದವರು ಆದರದಿಂದ ಸ್ವಾಗತಿಸಿದರು. ಸಚಿವರೊಂದಿಗೆ ವಿಧಾನಪರಿಷತ್‌ ಸದಸ್ಯ ಮಂಜುನಾಥ್‌ ಭಂಡಾರಿ, ಬೆಂಗಳೂರು ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಜಯಕರ ಎಸ್‌.ಎಂ, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಭಗವಾನ್‌ ಬಿ.ಸಿ ಸಹ ಇದ್ದರು.

ಈ ವೇಳೆ ಸಚಿವ ಶರಣಪ್ರಕಾಶ್‌ ಪಾಟೀಲ್‌ ಅವರು ನೀರಜ್ ಪಾಟೀಲ್‌ ಅವರೊಂದಿಗಿನ ಒಡನಾಟ, ಸ್ನೇಹವನ್ನು ಮೆಲುಕು ಹಾಕಿದರು.

ಸಿಎಂ, ಡಿಸಿಎಂಗೆ ಆಹ್ವಾನ:

ಮುಂದಿನ ವರ್ಷ ಏ.18ರಂದು ಲ್ಯಾಂಬೆತ್‌ ಬಸವೇಶ್ವರ ಪುತ್ಥಳಿ ಅನಾವರಣಗೊಂಡು 10 ವರ್ಷ ತುಂಬಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಬಸವ ಸಮಿತಿಯು ಆಹ್ವಾನ ನೀಡಿತು.