ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು ವೀರಶೈವ ಲಿಂಗಾಯತ ಸಮಾಜದ ಬಂಧುಗಳು ಶಾಂತ ಸ್ವಭಾವದವರು ಅವರನ್ನು ಕೆಣಕಿ ವೀರಭದ್ರೇಶ್ವರ ಅವತಾರ ತಾಳಲು ಬಿಡಬೇಡಿ ಎಂದು ಹಲ್ಲರೆ ಮಠದ ಬಸವಣ್ಣ ಸ್ವಾಮೀಜಿ ಎಚ್ಚರಿಕೆ ನೀಡಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಗುರುವಾರ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಕಾರ್ಯಕರ್ತರು ಬೀದರ್ ಜಿಲ್ಲೆಯ ದಾಡಗಿ ಗ್ರಾಮದಲ್ಲಿ ಬಸವೇಶ್ವರ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪ ಗೊಳಿಸುವುದನ್ನು ಖಂಡಿಸಿ ನಡೆಸಿದ ಪ್ರತಿಭಟನೆ ಸಭೆಯಲ್ಲಿ ಅವರು ಮಾತನಾಡಿದರು.ಈ ಹಿಂದೆ ಕಿಡಿಗೇಡಿಗಳು ಬೆಂಗಳೂರಿನಲ್ಲಿ ಸಿದ್ದಗಂಗಾ ಶ್ರೀಗಳ ಪ್ರತಿಮೆ ವಿರೂಪಗೊಳಿಸಿದ್ದರು, ಬೀದರ್ ಜಿಲ್ಲೆಯಲ್ಲಿ ಜಗಜ್ಯೋತಿ ಬಸವೇಶ್ವರರ ಪುತ್ತಳಿಯನ್ನು ವಿರೋಪಗಳಿಸಿದ ಕಿಡಿ ಗಡಿಗಳನ್ನು ಸರ್ಕಾರ ಕೂಡಲೇ ಬಂಧಿಸಬೇಕು, ಅವರಿಗೆ ಕಠಿಣವಾದ ಶಿಕ್ಷೆಯಾಗಲೆಬೇಕು. ಇಲ್ಲದಿದ್ದರೆ ಸಮಾಜದವರು ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದರು.ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಎಸ್.ಎಂ. ಕೆಂಪಣ್ಣ ಮಾತನಾಡಿ, ನಮ್ಮ ಸಮಾಜದ ಮೇಲೆ ನಿರಂತರ ದಬ್ಬಾಳಿಕೆಗಳು ನಡೆಯುತ್ತಿವೆ, ಬೆಳಗಾಂ ಅಧಿವೇಶನದ ಸಂದರ್ಭದಲ್ಲಿ ಪಂಚಮಸಾಲಿ 2 ಎ ಮೀಸಲಾತಿಗೆ ವಿಚಾರವಾಗಿ ನಡೆದ ಹೋರಾಟದಲ್ಲಿ ನಮ್ಮ ಸಮಾಜದ ಸ್ವಾಮೀಜಿಗಳ ಮೇಲೆ ಲಾಠಿಚಾರ್ಜ್ ನಡೆಸಲಾಯಿತು. ಬೀದರ್ ಜಿಲ್ಲೆಯಲ್ಲಿ ಬಸವೇಶ್ವರ ಪ್ರತಿಮೆ ವಿರೂಪಗೊಳಿಸಿರುವುದನ್ನು ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಖಂಡಿಸುತ್ತದೆ, ಸರ್ಕಾರ ತಕ್ಷಣವೆ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.ಚೆನ್ನಪ್ಪ. ಅನುಸೂಯ ಗಣೇಶ್, ಮಾದಪ್ಪ, ಅರ್ಜುನ್ ಪಾರ್ಥ, ಶಿವಪ್ಪ ದೇವರು, ನಟರಾಜು, ಶಿವಕುಮಾರ್, ರೇವಣ್ಣ, ನಂಜಮ್ಮಣಿ, ಮಹೇಶ್, ಮಂಜುನಾಥ್, ಮಂಜುನಾಥ್, ಕೋಮಲ, ನಂದಿನಿ, ಮಹೇಶ್, ಶಿವನಾಗಪ್ಪ, ಮಹದೇವಸ್ವಾಮಿ ಇದ್ದರು.