- ಓಂಕಾರ ಮಠದಲ್ಲಿ ಧನ್ಯತಾ ಸಮರ್ಪಣಾ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ ಹರೀಶ್
- - -ಕನ್ನಡಪ್ರಭ ವಾರ್ತೆ ಹರಿಹರ
ಸನಾತನ ಸಿಂಧು ಸಮಿತಿಯವರು ಧಾರ್ಮಿಕ, ರಾಷ್ಟ್ರೀಯ, ದೇಶ ಅಭಿಮಾನದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಲಿ. ಇದಕ್ಕೆ ನನ್ನ ಸಂಪೂರ್ಣ ಸಹಕಾರ ಯಾವತ್ತೂ ಇರುತ್ತದೆ ಎಂದು ಶಾಸಕ ಬಿ.ಪಿ ಹರೀಶ್ ಹೇಳಿದರು.ನಗರದ ಓಂಕಾರ ಮಠದಲ್ಲಿ ಶನಿವಾರ ಸಂಜೆ ಹರಿಹರದ ಸನಾತನ ಸಿಂಧು ಸಮಿತಿಯಿಂದ ಆಯೋಜಿಸಿದ್ದ, ಧನ್ಯತಾ ಸಮರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಹರಿಹರದಲ್ಲಿ ನಡೆಯುವ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹೆಚ್ಚು ಪ್ರಮುಖ ಪಾತ್ರ ವಹಿಸುತ್ತಿರುವುದು ಕಂಡುಬರುತ್ತಿದೆ. ಅದೇ ರೀತಿ 168 ಮಹಿಳೆಯರು ಒಂದೇ ಮಾತರಂ ಗೀತೆಯನ್ನು ಏಕಕಂಠದಲ್ಲಿ ಹೇಳುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಕಾರಣರಾಗಿದ್ದಾರೆ ಎಂದರು.
ಮುಂದಿನ ವರ್ಷ ಮಹಾರಾಷ್ಟ್ರದಲ್ಲಿ ನಡೆಯಲಿರುವ ತರಳುಬಾಳು ಹುಣ್ಣಿಮೆಯ ಕಾರ್ಯಕ್ರಮದಲ್ಲಿ ಹರಿಹರದ 168 ಮಹಿಳೆಯರನ್ನು ಕರೆದುಕೊಂಡು ಹೋಗಿ ‘ವಂದೇ ಮಾತರಂ’ ಗೀತೆಯನ್ನು ಹೇಳಿಸಬೇಕೆಂಬ ಅಭಿಲಾಷೆಯಿದೆ. ಹರಿಹರೇಶ್ವರನ ಕೃಪೆಯಿಂದ ನೆರವೇರಲಿ ಎಂದರು.
ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಮಹಾನ್ ಬರಹಗಾರ ಮತ್ತು ಚಿಂತಕ ಬಂಕಿಮಚಂದ್ರ ಚಟರ್ಜಿ ಅವರಿಂದ 1870ರಲ್ಲಿ ರಚನೆಯಾದ ‘ವಂದೇ ಮಾತರಂ’ ಗೀತೆಯು ಸ್ವಾತಂತ್ರ್ಯ ಹೋರಾಟದ ಮೂಲಮಂತ್ರವಾಯಿತು. ಈ ಹಿಂದೆ ಗೀತೆಯನ್ನು ನಾವುಗಳು ದೂರದರ್ಶನ, ರೇಡಿಯೋಗಳಲ್ಲಿ ನಿತ್ಯ ಬೆಳಗ್ಗೆ ಕೇಳುತ್ತಿದ್ದ ನೆನಪು ಮಾಸಿಲ್ಲ ಎಂದರು.
ಇಂದು ಭಾರತ ಸರ್ಕಾರ ಈ ಗೀತೆಯನ್ನು ರಾಷ್ಟ್ರಗೀತೆಯಾಗಿ ಘೋಷಣೆ ಮಾಡಿರುವುದು ಹರಿಹರದ ಕಾರ್ಯಕ್ರಮವು ಸ್ಫೂರ್ತಿ ಎಂದರೂ ತಪ್ಪಾಗಲಾರದು. ಈ ಗೀತೆಗೆ ಯಾವುದೇ ಜಾತಿ. ಧರ್ಮವಿಲ್ಲ ನಾವೆಲ್ಲರೂ ಒಂದೇ ಎಂಬ ಭಾವನೆಯ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಲು ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಸ್ಫೂರ್ತಿಯಾಯಿತು ಎಂದರು.ಹರಿಹರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಆತ್ಮ ದೀಪಾನಂದ ಮಹಾರಾಜ್ ಸಾನಿಧ್ಯ ವಹಿಸಿ ಮಾತನಾಡಿ, ಹರಿಹರದ ಸನಾತನ ಸಿಂಧು ಸಮಿತಿಯವರು ‘ವಂದೇ ಮಾತರಂ’ ಗೀತಯ150ನೇ ವಾರ್ಷಿಕೋತ್ಸವವನ್ನು ಆಯೋಜಿಸಿರುವುದು ಒಳ್ಳೆಯ ಆಲೋಚನೆ, ಅದ್ಭುತ ಕಾರ್ಯಕ್ರಮ ಎಂದು ಹೇಳಿದರು.
ಸನಾತನ ಸಿಂಧು ಸಮಿತಿ ಅಧ್ಯಕ್ಷ ಡಾ. ಆರ್ ಖಮಿತ್ಕರ್ ಮಾತನಾಡಿದರು. ಹರಿಹರ ಸನಾತನ ಸಿಂಧು ಸಮಿತಿ ರಚನೆಯಾದ ನಂತರ ಮೊದಲನೆಯ ಕಾರ್ಯಕ್ರಮವನ್ನು ನಿತ್ಯ ಶ್ಲೋಕಗಳು ಎಂಬ ಕಿರು ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು. ವಂದೇ ಮಾತರಂ ಗೀತೆಗೆ 150 ವರ್ಷ ಸಂದ ಹಿನ್ನೆಲೆ ನಗರದ ಗಾಂಧಿ ಮೈದಾನದಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರಿಂದ ವಂದೇ ಮಾತರಂ ಗೀತೆಯ ಮಹತ್ವದ ಬಗ್ಗೆ ನಮ್ಮ ನಗರದ ಜನತೆಗೆ ತಿಳಿಸುವ ಕಾರ್ಯವನ್ನು ಮಾಡಲಾಯಿತು.‘ವಂದೇ ಮಾತರಂ’ ಗೀತೆಯನ್ನು ಹೇಳಿದ 168 ಮಹಿಳೆಯರು ಮತ್ತು ಪುರುಷರಿಗೆ ಸಂಸ್ಥೆಯಿಂದ ಪ್ರಮಾಣ ಪತ್ರವನ್ನು ನೀಡಲಾಯಿತು. ಮುಖಂಡರಾದ ಶಂಕರ್ ಖಟಾವಕರ್, ಎಂ.ವೀರೇಶ್ ಹನಗವಾಡಿ, ಚಂದ್ರಶೇಖರ ಪೂಜಾರ್, ಎಚ್.ಪಿ. ಬಾಬಣ್ಣ, ವೀರಣ್ಣ ಯಾದವಾಡ, ಪ್ರಕಾಶ ಕೋಳೂರು, ಆರ್.ಆರ್. ಕಾಂತರಾಜ್, ಶಿವಪ್ರಕಾಶ್ ಶಾಸ್ತ್ರಿ, ಶ್ರೀಧರ್ ಶೆಟ್ಟಿ, ಜಿ.ಕೆ. ಮಲ್ಲಿಕಾರ್ಜುನ್, ಎಂ.ಆರ್. ಸತ್ಯನಾರಾಯಣ ರಾವ್, ಜಿ.ನಂಜಪ್ಪ, ಬಾಡಿ ನಾಗರಾಜ, ಅಜಿತ್ ಸಾವಂತ್, ಆದಿತ್ಯ ಮೆಹರ್ವಾಡೆ, ಸುಂದರೇಶ, ಪ್ರಶಾಂತ್, ರವಿ ಸಿಂಗ್, ನಾಗರಾಜ್ ನಲ್ಲೂರು, ನಾಗಮಣಿ ಶಾಸ್ತ್ರಿ, ಸುಮನ್ ಖಮಿತ್ಕರ್, ಪ್ರಮೀಳಾ ನಲ್ಲೂರು, ಸಾಕ್ಷಿ ಶಿಂಧೆ, ರೂಪಾ ಕಾಟ್ಟೆ, ರೂಪಾ ಶಶಿಕಾಂತ್, ಶಾರದಾಶಾಸ್ತ್ರಿ, ರೇಷ್ಮಾ ಮೆಹರ್ವಾಡೆ ಹಾಗೂ ಇತರರಿದ್ದರು.
- - --18ಎಚ್‌ಆರ್‌ಆರ್01:
ಹರಿಹರದ ಓಂಕಾರ ಮಠದಲ್ಲಿ ಹರಿಹರದ ಸನಾತನ ಸಿಂಧು ಸಮಿತಿ ವತಿಯಿಂದ ಧನ್ಯತಾ ಸಮರ್ಪಣಾ ಕಾರ್ಯ ನಡೆಯಿತು.