ಸಾರಾಂಶ
ಪ್ರಶಾಂತ ಅವರ ಕಿರಿಯ ಸಹೋದರ ಚಂದ್ರು(೩೬) ಜಾರ್ಖಂಡ್‌ನ ರಾಂಚಿಯಲ್ಲಿ ರೈಲ್ವೆ ಉದ್ಯೋಗಿಯಾಗಿದ್ದು, ೬ ದಿನಗಳ ಹಿಂದೆ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಶನಿವಾರ ಶಿಗ್ಗಾಂವಿ ತಾಲೂಕಿನ ಗೊಟಗೋಡಿಯಲ್ಲಿ ಅವರ ಅಂತ್ಯಕ್ರಿಯೆ ಮಾಡಲಾಗಿತ್ತು. ಆ ನೋವಿನಿಂದ ಹೊರಬರುವ ಮೊದಲೇ ಅಣ್ಣನೂ ತಮ್ಮನ ದಾರಿ ಹಿಡಿದಿರುವುದು ವಿಧಿಯ ವಿಪರ್ಯಾಸ.
ಯಲ್ಲಾಪುರ: ಇಲ್ಲಿನ ಪಟ್ಟಣ ಪಂಚಾಯಿತಿ ಸದಸ್ಯ ಪ್ರಶಾಂತ ತಳವಾರ(೪೦) ಮೇ ೨೬ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಕಿರಿಯ ಸಹೋದರ ಮೃತರಾದ ಆರೇ ದಿನದಲ್ಲಿ ಇವರೂ ಕೊನೆಯುಸಿರೆಳೆದಿದ್ದು ಅವರ ಕುಟುಂಬಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ.
ಮೃತರಿಗೆ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಪ್ರಶಾಂತ ಅವರು ಇತ್ತೀಚೆಗೆ ತಮ್ಮ ಸ್ವಂತ ಊರಾದ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೊಟಗೋಡಿಗೆ ತೆರಳಿದ್ದರು. ಭಾನುವಾರ ಬೆಳಗ್ಗೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಚಿಕಿತ್ಸೆಗೆಂದು ಶಿಗ್ಗಾಂವಿಯ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ವೈದ್ಯರ ಸೂಚನೆಯಂತೆ ಹುಬ್ಬಳ್ಳಿಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾಗ೯ಮಧ್ಯೆ ನಿಧನರಾದರು.ಅವರ ತಾಯಿ ಯಲ್ಲಾಪುರದಲ್ಲೇ ಉದ್ಯೋಗ ನಿರ್ವಹಿಸುತ್ತಿದ್ದರು. ಅಲ್ಲದೇ, ಪ್ರಶಾಂತ ಕೂಡಾ ಸಣ್ಣಪುಟ್ಟ ಉದ್ಯೋಗ ಮಾಡಿಕೊಂಡು ಪಪಂ ಸದಸ್ಯರಾಗಿದ್ದರು.
ಸಹೋದರನೂ ನಿಧನ: ಪ್ರಶಾಂತ ಅವರ ಕಿರಿಯ ಸಹೋದರ ಚಂದ್ರು(೩೬) ಜಾರ್ಖಂಡ್‌ನ ರಾಂಚಿಯಲ್ಲಿ ರೈಲ್ವೆ ಉದ್ಯೋಗಿಯಾಗಿದ್ದು, ೬ ದಿನಗಳ ಹಿಂದೆ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಶನಿವಾರ ಶಿಗ್ಗಾಂವಿ ತಾಲೂಕಿನ ಗೊಟಗೋಡಿಯಲ್ಲಿ ಅವರ ಅಂತ್ಯಕ್ರಿಯೆ ಮಾಡಲಾಗಿತ್ತು. ಆ ನೋವಿನಿಂದ ಹೊರಬರುವ ಮೊದಲೇ ಅಣ್ಣನೂ ತಮ್ಮನ ದಾರಿ ಹಿಡಿದಿರುವುದು ವಿಧಿಯ ವಿಪರ್ಯಾಸ. ಮೃತರ ಅಂತ್ಯಕ್ರಿಯೆಯನ್ನು ಶಿಗ್ಗಾಂವಿ ತಾಲೂಕಿನ ಗೊಟಗೋಡಿಯಲ್ಲಿ ಮೇ ೨೬ರಂದು ಸಂಜೆ ನೆರವೇರಿಸಲಾಯಿತು. ಪ್ರಶಾಂತ ತಳವಾರ ನಿಧನಕ್ಕೆ ಶಾಸಕ ಶಿವರಾಮ ಹೆಬ್ಬಾರ ಸಂತಾಪ ಸೂಚಿಸಿದ್ದಾರೆ.ನಾಪತ್ತೆಯಾಗಿ 6 ತಿಂಗಳ ಬಳಿಕ ಮನೆಗೆ ಬಂದ ವ್ಯಕ್ತಿ
ಗೋಕರ್ಣ: ಕಳೆದ ಡಿಸೆಂಬರ್ತಿಂನಲ್ಲಿ ನಡೆದ ಹಲ್ಲೆ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಾಗಿ ನಂತರ ನಾಪತ್ತೆಯಾಗಿದ್ದ ತಲಗೇರಿ ನಿವಾಸಿ ಪೊಕ್ಕ ಗೌಡ ಅವರು ಆರು ತಿಂಗಳ ನಂತರ ಸೋಮವಾರ ಸಂಜೆ ಇಲ್ಲಿಗೆ ಆಗಮಿಸಿದ್ದಾರೆ.ಇವರ ಸಂಬಂಧಿಕರೇ ಆದ ಓರ್ವ ವ್ಯಕ್ತಿಯ ಜತೆ ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಇವರ ಮೇಲೆ ಹಲ್ಲೆ ಮಾಡಿದ್ದ. ಗಂಭೀರ ಗಾಯಗೊಂಡ ಇವರನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕಳುಸಲಾಗಿತ್ತು. ಅಲ್ಲಿ ದಾಖಲಾಗಿ ಒಂದೇ ದಿನಕ್ಕೆ ನಾಪತ್ತೆಯಾಗಿದ್ದ.
ಹಲ್ಲೆ ಸಂಬಂಧ ಪೊಲೀಸ್ ಪ್ರಕರಣ ದಾಖಲಾಗಿದ್ದ ಕಾರಣ ಪೊಲೀಸರಿಗೂ ಪತ್ತೆ ಹಚ್ಚುವುದು ಸವಾಲಾಗಿತ್ತು. ಆದರೆ ಆಸ್ಪತ್ರೆ ಆವರಣದಲ್ಲೆ ಸೋಮವಾರ ದಿಢೀರ್ ಪ್ರತ್ಯಕ್ಷವಾಗಿದ್ದ ಎನ್ನಲಾಗಿದ್ದು, ಅಲ್ಲಿನವರು ವಿಚಾರಿಸಿದಾಗ ಗೋಕರ್ಣ ಊರು ಎಂದ ತಕ್ಷಣ ಇಲ್ಲಿನ ಪರಿಚಯಸ್ಥರ ಸಂಪರ್ಕಿಸಿ ಸಂಜೆ ಅಲ್ಲಿಂದ ಹೊರಡುವ ನೇರ ಬಸ್ ಗೆ ಕಳುಹಿಸಿ ಕೊಟ್ಟಿದ್ದಾರೆ.