ಸಾರಾಂಶ
ಮೂಲ್ಕಿ : ಬ್ರಹ್ಮಶ್ರೀ ನಾರಾಯಣ ಗುರುಗಳು ಜನರ ಮನಸ್ಸಿನಲ್ಲಿ ಜ್ಞಾನದ ಬಿತ್ತನೆ ಮಾಡಿ ಮತಾಂತರ ನಿಲ್ಲಿಸಿ, ಶಿಕ್ಷಣ, ಕೈಗಾರಿಕೆ ವ್ಯವಸಾಯಗಳನ್ನು ಮುಂದಿಟ್ಟು ಆದರ್ಶ ವ್ಯಕ್ತಿಯಾಗಿ ಬದುಕಿದವರೆಂದು ಜಾನಪದ ವಿದ್ವಾಂಸ, ಡಾ.ವೈ.ಎನ್. ಶೆಟ್ಟಿ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಾಯನ ಪೀಠದ ಸಂಯೋಜನೆಯಲ್ಲಿ ನಿನಾದ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಪಾವಂಜೆ ಆಶ್ರಯದಲ್ಲಿ ಪಾವಂಜೆಯ ನಿನಾದ ಕೇಂದ್ರದಲ್ಲಿ ಜರುಗಿದ ಕೃಷಿ ನಿನಾದ ನೇಗಿಲ ಯೋಗ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಹಿಂದಿನಕಾಲದ ಸರಿ ಮುಗುಳಿ ಆದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯ ನಾರಾಯಣ ಅಧ್ಯಯನ ಪೀಠದ ನಿರ್ದೇಶಕ ಡಾ.ಜಯರಾಜ್ ಅಂಚನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ವಿದ್ಯಾರ್ಥಿಗಳಿಗೆ ನಾಟಿ ಗದ್ದೆಯಲ್ಲಿ ಕಳೆ ತೆಗೆಯುವ ಕಾರ್ಯವನ್ನು ಕಲಿಸಿಕೊಡಲಾಯಿತು.
ಈ ಸಂದರ್ಭ ಉದ್ಯಮಿ ಕಡಂಬೋಡಿ ಮಹಾಬಲ ಪೂಜಾರಿ, ಕಾಟಿಪಳ್ಳ ನಾರಾಯಣಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದಯಾಕರ್, ಯಾದವ ದೇವಾಡಿಗ, ಮೂಲ್ಕಿ ನಾರಾಯಣಗುರು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಾಲಚಂದ್ರ ಸನಿಲ್, ಮೆಸ್ಕಾಂನ ಯಶೋಧರ ಸಾಲಿಯಾನ್ ಹಳೆಯಂಗಡಿ, ವಸಂತಿ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಭವ ಸಂಕಮಾರ್ ನಿರೂಪಿಸಿದರು. ಜಯಂತಿ ಸಂಕಮಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))