ಸಾರಾಂಶ
ಯಾದಗಿರಿ ನಗರದ ಪಿಎಲ್‌ಡಿ ಬ್ಯಾಂಕಿನಲ್ಲಿ ಮಂಗಳವಾರ ರೈತರಿಗೆ ಸಾಲ ಸೌಲಭ್ಯದ ಚೆಕ್ ಗಳನ್ನು ಶಾಸಕ ರಾಜಾ ವೇಣುಗೋಪಾಲ ನಾಯಕ ವಿತರಿಸಿದರು.
ಕನ್ನಡಪ್ರಭ ವಾರ್ತೆ ಸುರಪುರ
ಮತಕ್ಷೇತ್ರಕ್ಕೆ ಒಳಪಡುವ ಹುಣಸಗಿ ಮತ್ತು ಸುರಪುರ ತಾಲೂಕಿನ ರೈತರ ನೆರವಿಗಾಗಿ ನಮ್ಮ ತಾತನವರಾದ ಮಾಜಿ ಶಾಸಕ ರಾಜಕುಮಾರ್ ನಾಯಕ ಅವರು ಈ ಪಿಎಲ್‌ಡಿ ಬ್ಯಾಂಕ್ ಸ್ಥಾಪಿಸಿದ್ದಾರೆ. ಇಲ್ಲಿ ದೊರೆಯುವ ಸಾಲ ಸೌಲಭ್ಯ ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕೆಂದು ನೂತನ ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.ನಗರದ ಪಿಎಲ್‌ಡಿ ಬ್ಯಾಂಕಿನಲ್ಲಿ ಮಂಗಳವಾರ ರೈತರಿಗೆ ಸಾಲ ಸೌಲಭ್ಯದ ಚೆಕ್ ವಿತರಿಸಿದ ಅವರು, ಪಿಎಲ್ ಡಿ ಬ್ಯಾಂಕ್ ಆರಂಭವಾದಾಗಿನಿಂದ ಇಂದಿನವರೆಗೂ ರೈತರಿಗೆ ಸಾಲ ನೀಡುತ್ತಾ ಬರುತ್ತಿದೆ. ಅದರಂತೆ ರೈತರು ಸಹ ಪಡೆದ ಸಾಲ ಮರುಪಾವತಿಸಿ ಮತ್ತೊಬ್ಬ ರೈತರಿಗೆ ಅನುಕೂಲ ಕಲ್ಪಿಸಿ ಕೊಡಬೇಕು. ಈ ಬ್ಯಾಂಕಿಗೆ ಬೇಕಾದಂತಹ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ವೆಂಕೋಬ ಯಾದವ, ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಬಸನಗೌಡ ಪಾಟೀಲ್, ವಾಮನರಾವ ದೇಶಪಾಂಡೆ, ರಾಜಾ ಸುಭಾಷಚಂದ್ರ ನಾಯಕ, ನಂದನಗೌಡ ಪಾಟೀಲ್, ರಾಮಚಂದ್ರ ದೇವಿಕೆರಾ ಸೇರಿದಂತೆ ಇತರರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))