ಕಳೆದ ೨ವರ್ಷದಿಂದ ಸ್ವಚ್ಛತಾ ಕೆಲಸಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರನನ್ನ ಏಕಾಏಕಿ ಗ್ರಾಪಂ ಪಿಡಿಒ ಕೆಲಸದಿಂದ ತೆಗೆದು ಹಾಕಿದ್ದು, ಬಡ ನೌಕರನ ಕುಟುಂಬ ಬೀದಿಗೆ ಬಂದಿರುವ ಘಟನೆ ದೊಡ್ಡಸಾಗ್ಗೆರೆ ಗ್ರಾಪಂ ಬೆಳಕಿಗೆ ಬಂದಿದೆ.

ಎಚ್.ಎನ್.ನಾಗರಾಜು ಕನ್ನಡಪ್ರಭ ವಾರ್ತೆ ಕೊರಟಗೆರೆ

ಕಳೆದ ೨ವರ್ಷದಿಂದ ಸ್ವಚ್ಛತಾ ಕೆಲಸಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರನನ್ನ ಏಕಾಏಕಿ ಗ್ರಾಪಂ ಪಿಡಿಒ ಕೆಲಸದಿಂದ ತೆಗೆದು ಹಾಕಿದ್ದು, ಬಡ ನೌಕರನ ಕುಟುಂಬ ಬೀದಿಗೆ ಬಂದಿರುವ ಘಟನೆ ದೊಡ್ಡಸಾಗ್ಗೆರೆ ಗ್ರಾಪಂ ಬೆಳಕಿಗೆ ಬಂದಿದೆ.ತಾಲೂಕಿನ ದೊಡ್ಡಸಾಗ್ಗೆರೆ ಗ್ರಾಪಂನಲ್ಲಿ ಕಳೆದ ಎರಡು ವರ್ಷದಿಂದ ರಂಗನಾಥ್‌ ಎನ್ನುವ ದಲಿತ ವ್ಯಕ್ತಿ ಗ್ರಾಪಂಯಲ್ಲಿ ಸ್ವಚ್ಛತಾ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದು, ಗ್ರಾಪಂ ಪಿಡಿಒ ನಾಗರಾಜು ಅವರು ಯಾವುದೇ ನೋಟಿಸ್ ನೀಡದೆ ಹಾಗೂ ಸರಿಯಾದ ಕಾರಣ ತಿಳಿಸದೇ ಏಕಾಏಕಿ ಕೆಲಸದಿಂದ ವಜಾಗೊಳಿಸಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಕಳೆಡ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದ ರಂಗನಾಥ್ ಎನ್ನವ ಸ್ವಚ್ಚತಗಾರನ್ನ ತೆಗೆದು ಹಾಕಲಾಗಿದ್ದು ಈ ಬಗ್ಗೆ ಪಿಡಿಒ ಅವರನ್ನ ಕೇಳಿದಾಗ ನಮ್ಮ ಗ್ರಾಪಂಯಲ್ಲಿ ಹಣ ಕೊಟ್ಟು ಹೊರಗಡೆಯಿಂದ ಚರಂಡಿ ತೆಗೆಯಲು ಜನರನ್ನ ತರಲಾಗುವುದು, ಅದರಿಂದ ಇವರು ಬೇಡ ಎಂದು ಹೇಳುತ್ತಾರೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಮುನಿರಾಜು ಹೇಳಿದರು.

ಇನ್ನೂ ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಕೆಲಸ ಕಳೆದುಕೊಂಡು ಸ್ವಚ್ಛತಗಾರ ರಂಗನಾಥ್, ದೊಡ್ಡಸಾಗ್ಗೆರೆ ಗ್ರಾಪಂಯಲ್ಲಿ ಎರಡು ವರ್ಷದಿಂದ ಸ್ವಚ್ಛತಾಗಾರನಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಪ್ರತಿ ತಿಂಗಳು ೧೨ ಸಾವಿರ ಸಂಬಳವನ್ನ ಚೆಕ್ ಮೂಲಕ ನೀಡುತ್ತಿದ್ದರು. ಇನ್ನೂ ೩ ತಿಂಗಳ ಸಂಬಳ ಬಾಕಿ ಇದೆ. ಈಗ ಏಕಾಏಕಿ ಕೆಲಸ ಬರಬೇಡ ಎಂದು ಪಿಡಿಒ ಅವರು ತಿಳಿಸಿದ್ದಾರೆ. ಕೆಲಸ ಪರ್ಮೆಂಟ್ ಆಗುವ ಸಂದರ್ಭದಲ್ಲಿ ಕೆಲಸದಿಂದ ವಜಾಗೊಳಿಸಿರುವುದು ನೋವಿನ ಸಂಗತಿ. ಮನೆಯ ಸಂಸಾರ ಈ ಸಂಬಳದಿಂದ ನಡೆಯುತಿತ್ತು ಈಗ ಮನೆ ನಡೆಸುವುದು ಕಷ್ಟವಾಗಿದೆ.

-----------------------

ಕೋಟ್...ಎರಡು ವರ್ಷಗಳ ಹಿಂದೆ ತಾತ್ಕಾಲಿಕವಾಗಿ ರಂಗನಾಥ್ ಎನ್ನುವವರು, ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗಿತ್ತು. ಅವರು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ, ಚರಂಡಿಗಳನ್ನ ಕ್ಲೀನ್ ಮಾಡುತ್ತಿರಲಿಲ್ಲ. ಸುಮ್ಮನೆ ಕಚೇರಿಯಲ್ಲಿ ಕುಳಿತು ಹೋಗುತ್ತಿದ್ದರು. ಅವರು ಪರ್ಮೇಂಟ್ ಆಗಿಲ್ಲ. ಈ ಹಿಂದೆ ಇದ್ದ ಸರ್ವ ಸದಸ್ಯರು ಬೇಡ ಅಂತ ತಿಳಿಸಿದ್ದರು ಅದಕ್ಕೆ ತೆಗೆದು ಹಾಕಲಾಗಿದೆ.ನಾಗರಾಜು ಪಿಡಿಒ ದೊಡ್ಡಸಾಗ್ಗೆರೆ.