ಗ್ರಾಮೀಣದಲ್ಲಿ ಪಿಡಿಒಗಳು ನೀರಿನ ಕೊರತೆಯಾಗದಂತೆ ನಿಗಾವಹಿಸಿ-ಶಾಸಕ ಸಿ.ಸಿ. ಪಾಟೀಲ

| Published : Apr 18 2025, 12:42 AM IST

ಗ್ರಾಮೀಣದಲ್ಲಿ ಪಿಡಿಒಗಳು ನೀರಿನ ಕೊರತೆಯಾಗದಂತೆ ನಿಗಾವಹಿಸಿ-ಶಾಸಕ ಸಿ.ಸಿ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ವರ್ಷ ನರಗುಂದ ವಿಧಾನಸಭಾ ಮತಕ್ಷೇತ್ರದ ಕೆಲವು ಗ್ರಾಮೀಣ ಭಾಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದ ಹಾಗೆ ಗ್ರಾಪಂ ಪಿಡಿಒ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ನರಗುಂದ:ಪ್ರಸಕ್ತ ವರ್ಷ ನರಗುಂದ ವಿಧಾನಸಭಾ ಮತಕ್ಷೇತ್ರದ ಕೆಲವು ಗ್ರಾಮೀಣ ಭಾಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದ ಹಾಗೆ ಗ್ರಾಪಂ ಪಿಡಿಒ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಅವರು ಗುರುವಾರ ಪಟ್ಟಣದ ತಾಪಂ ಸಭಾ ಭವನದಲ್ಲಿ ನರಗುಂದ ವಿಧಾನ ಸಭಾ ಮತಕ್ಷೇತ್ರದ 34 ಗ್ರಾಪಂ ಪಿಡಿಓಗಳ ಸಭೆಯಲ್ಲಿ ಮಾತನಾಡಿ, ಈ ಮತಕ್ಷೇತ್ರಕ್ಕೆ ನರಗುಂದ, ರೋಣ, ಗದಗ ತಾಲೂಕು ಸುಮಾರು 34 ಗ್ರಾಪಂಗಳ ವ್ಯಾಪ್ತಿಯ 91 ಹಳ್ಳಿಗಳಲ್ಲಿ ಅಧಿಕಾರಿಗಳು ಕುಡಿಯುವ ನೀರಿನ ಕೊರತೆಯಾಗದ ಹಾಗೆ ಬೇಸಗಿಯಲ್ಲಿ ನೋಡಿಕೊಳ್ಳಬೇಕು. ಅಧಿಕಾರಿಗಳು ಕೇವಲ ಸಿಬ್ಬಂದಿಗಳ ಮೇಲೆ ನೀರು ಪೂರೈಕೆ ಜವಾಬ್ದಾರಿ ವಹಿಸಿದರೆ ಸಾಲದು, ಖುದ್ದು ಗ್ರಾಪಂ ಪಿಡಿಓಗಳು ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಯಾವ ಗ್ರಾಮಕ್ಕೆ ನಲ್ಲಿಗಳ ಮೂಲಕ ಕುಡಿಯುವ ನೀರಿನ ಪೂರೈಕೆ ಕೊರತೆಯಾಗುತ್ತದೆ ಎನ್ನುವದನ್ನು ತಿಳಿದುಕೊಳ್ಳಬೇಕು, ಕೆಲವು ಗ್ರಾಮಗಳಿಗೆ ಜಲಾಶಯದಿಂದ ಪೂರೈಕೆಯಾಗುವ ನೀರಿನ ಕೊರತೆಯಾದರೆ ಸ್ಥಳೀಯ ಬೋರವೆಲ್‌ ಬಾಡಿಗೆ ಪಡೆದು ನೀರು ಪೂರೈಕೆ ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು.

ಸದ್ಯ ಈ ಮತ ಕ್ಷೇತ್ರದಲ್ಲಿ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಎನ್‌ಆರ್‌ಜಿ ಯೋಜನೆಯಲ್ಲಿ ಉದ್ಯೋಗ ಖಾತರಿ ಯೋಜನೆ ಮೂಲಕ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಪ್ರಾರಂಭವಾಗಿದೆ. ಹಾಗಾಗಿ ಉದ್ಯೋಗಕ್ಕೆ ಬರುವ ಕೂಲಿ ಕಾರ್ಮಿಕರಗಿ ಶುದ್ಧ ನೀರು ಕೊಡಬೇಕು, ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದು ಕಾರ್ಮಿಕರಿಗೆ ಎನು ಸಮಸ್ಯೆದಾಗದ ಹಾಗೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ನಮ್ಮ ಮತಕ್ಷೇತ್ರದ ತಾಪಂ ಅಧಿಕಾರಿಗಳು ಮಲಪ್ರಭಾ ಜಲಾಶಯದಿಂದ ಕಾಲುವೆ ಮತ್ತು ಮಲಪ್ರಭ ನದಿಗೆ ನೀರು ಬಿಡಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಿ. ನಾನು ಕೂಡ ಪತ್ರ ಬರೆದು ಜಲಾಶಯದಿಂದ ನೀರು ಬಿಡಲು ತಿಳಿಸುತ್ತೇನೆಂದು ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಶ್ರೀಶೈಲ ತಳವಾರ, ತಾಪಂ ಅಧಿಕಾರಿ ಎಸ್.ಕೆ. ಇನಾಮದಾರ, ತಾಲೂಕು ಆರೋಗ್ಯ ಅಧಿಕಾರಿ ಡಾ.ರೇಣುಕಾ ಕೊರವನವರ, ರೋಣ ತಹಸೀಲ್ದಾರ್ ನಾಗರಾಜ ಕೆ., ಗದಗ ತಹಸೀಲ್ದಾರ್ ಶ್ರೀನಿವಾಸ ಕುಲಕರ್ಣಿ, ಡಾ. ನಾಗರಾಜ, ಚಂದ್ರಶೇಖರ ಕುಂದಕೂರ, ಮಲ್ಲಯ್ಯ, ಸಂತೋಷಕುಮಾರ ಪಾಟೀಲ, ಹಾದಿಮನಿ, ಪುರಸಭೆ ಮುಖ್ಯಧಿಕಾರಿ ಸಂತೋಷ ಬ್ಯಾಳಿ, ಎಲ್ಲಾ ಗ್ರಾಪಂ ಪಿಡಿಓ, ತೋಟಗಾರಿಕೆ, ಪಶು ಸಂಗೋಪನ, ಹೆಸ್ಕಾಂ, ಇಲಾಖೆ ಅಧಿಕಾರಿಗಳು ಇದ್ದರು.