ಸಾರಾಂಶ
ಶಹಾಪುರ ನಗರ ಕುಂಬಾರಗೇರಿ ಹಿರೇಮಠದಲ್ಲಿ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅಮೀನ್ ರೆಡ್ಡಿ ಯಾಳಗಿ ಮಾತನಾಡಿ, ಸಂಗೀತ ಮನಸ್ಸಿಗೆ ಖುಷಿ ನೀಡುವ ಸಾಧನವಾಗಿದ್ದು, ಇದನ್ನು ಕೇಳುವದರಿಂದ ಮಾನಸಿಕ ನೆಮ್ಮದಿಗೆ ಸಿಗುತ್ತದೆ ಎಂದರು.
ಕನ್ನಡಪ್ರಭ ವಾರ್ತೆ ಶಹಾಪುರ
ನಿತ್ಯ ಉತ್ತಮ ಸಂಗೀತ ಕೇಳುವುದರಿಂದ ನಮ್ಮ ಮನಸ್ಸು ಹಗುರವಾಗುತ್ತದೆ. ಉತ್ತಮ ಭಾವನೆ, ಆಲೋಚನೆಗಳು ಮೂಡುತ್ತವೆ. ಆರೋಗ್ಯ ಸಮಸ್ಯೆ ಸಹ ನಿಯಂತ್ರಣಕ್ಕೆ ಬರುತ್ತವೆ. ಈ ಸರಳ ಪರಿಹಾರ ಮನುಷ್ಯನಿಗೆ ಮಾನಸಿಕ ಒತ್ತಡದಿಂದ ಮಾತ್ರವಲ್ಲ, ಅನಾರೋಗ್ಯ ಸಹ ಬಾಧಿಸದಂತೆ ಮಾಡುತ್ತದೆ. ಸಂಗೀತಕ್ಕೆ ಅಂಥದ್ದೊಂದು ಅದ್ಭುತ ಶಕ್ತಿ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ ಅಭಿಪ್ರಾಯಪಟ್ಟರು.ನಗರದ ಕುಂಬಾರಗೇರಿ ಹಿರೇಮಠದಲ್ಲಿ ಗೌರಿಶಂಕರ ಸಂಗೀತ ಸಾಂಸ್ಕೃತಿಕ ಕಲಾ ಸಂಸ್ಥೆ ಶಹಾಪುರ ವತಿಯಿಂದ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ನಡೆದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ನೂರು ಕೋಟಿ ರಾಮಭಕ್ತರ ನೂರಾರು ವರುಷಗಳ ಕನಸು ನನಸಾಗಿದೆ. ಹಿಂದೂಗಳ ಆರಾಧ್ಯದೈವ ಶ್ರೀರಾಮ ಅಯೋಧ್ಯೆಯ ರಾಮ ಮಂದಿರದಲ್ಲಿ ನೆಲೆಸಿದ್ದಾನೆ. ಇಂಥ ಶುಭ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಿರುವುದು ಅತ್ಯಂತ ಸೂಕ್ತ ಎಂದರು.ಬಿಜೆಪಿ ಹಿರಿಯ ಮುಖಂಡ ಡಾ.ಚಂದ್ರಶೇಖರ ಸುಬೇದಾರ ಮಾತನಾಡಿ, ಸಂಗೀತ ಮನಸ್ಸಿಗೆ ಖುಷಿ ನೀಡುವ ಸಾಧನವಾಗಿದೆ. ಇದರಿಂದ ಮಾನಸಿಕ ನೆಮ್ಮದಿ ಪ್ರಾಪ್ತವಾಗುತ್ತದೆ ಎಂದರು.
ಸೋಮಶೇಖರಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಗುರು ಕಾಮಾ, ಸೂಗಣ್ಣ ಚಟ್ರಕಿ, ಸಂಸ್ಥೆ ಅಧ್ಯಕ್ಷ ಬಸವರಾಜ ಹಯ್ಯಾಳ, ಬಸವರಾಜ ವಿಭೂತಿಹಳ್ಳಿ, ಅಡಿವೆಪ್ಪ ಜಾಕಾ, ಉಮೇಶ್ ಗುಡಗುಂಟಿ, ಭಾಗ್ಯಶ್ರೀ ಪಾಟೀಲ್, ರಾಜುಗೌಡ ಉಕ್ಕಿನಾಳ, ಚಂದ್ರಶೇಖರ ಯಾಳಗಿ ಇತರರಿದ್ದರು.ಮಲ್ಲಯ್ಯ ಹಿರೇಮಠ, ಬಸವರಾಜ ಹಯ್ಯಾಳ, ಕಲ್ಲಯ್ಯ ಸ್ವಾಮಿ, ನಿಂಗಣ್ಣಗೌಡ ತಳಿಬಿಡಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಚಿದಾನಂದ್ ಬಾಸುತ್ಕರ್ ಸ್ವಾಗತಿಸಿದರು. ಸಿದ್ದಣ್ಣ ಕುಂಬಾರ ನಿರೂಪಿಸಿದರು. ಬಸವರಾಜ ಹಯ್ಯಾಳ ವಂದಿಸಿದರು.