ನೆಮ್ಮದಿಯ ಬದುಕು ಕೊಟ್ಟಿರುವ ಗ್ಯಾರಂಟಿಗಳು: ಡಿಕೆಶಿ

| Published : Apr 25 2024, 01:06 AM IST

ಸಾರಾಂಶ

ಕನಕಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಳಿತ ವೈಫಲ್ಯದಿಂದ ದೇಶ ಹಾಗು ರಾಜ್ಯದ ಜನತೆ ನಿರುದ್ಯೋಗ ಬೆಲೆ ಏರಿಕೆಗಳಿಂದ ತತ್ತರಿಸಿ ಹೋಗಿದ್ದರು. ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳಿಂದ ಜನತೆ ನೆಮ್ಮದಿಯ ಬದುಕು ಸಾಗಿಸುತ್ತಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕನಕಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಳಿತ ವೈಫಲ್ಯದಿಂದ ದೇಶ ಹಾಗು ರಾಜ್ಯದ ಜನತೆ ನಿರುದ್ಯೋಗ ಬೆಲೆ ಏರಿಕೆಗಳಿಂದ ತತ್ತರಿಸಿ ಹೋಗಿದ್ದರು. ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳಿಂದ ಜನತೆ ನೆಮ್ಮದಿಯ ಬದುಕು ಸಾಗಿಸುತ್ತಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಸೇಬಿನ ಹಾರದ ಸ್ವಾಗತ ಸ್ವೀಕರಿಸಿ ನೆರೆದಿದ್ದ ಬೃಹತ್ ಕಾರ್ಯಕರ್ತರನ್ನು ಮಾತನಾಡಿ, ನಮ್ಮ ಸರ್ಕಾರ ನುಡಿದಂತೆ ನಡೆದಿದ್ದು, ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಜನತೆಗೆ ನೀಡಿದ್ದ ಐದು ಭರವಸೆ ಈಡೇರಿಸಿದ್ದೇವೆ. ಇದರಿಂದ ರಾಜ್ಯದ ಸಾವಿರಾರು ಕುಟುಂಬ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ. ಉಚಿತ ಬಸ್ ಪ್ರಯಾಣದಿಂದ ಹೆಣ್ಣು ಮಕ್ಕಳು ರಾಜ್ಯದ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಕುಟುಂಬದ ಒಳಿತಿನ ಜೊತೆಗೆ ರಾಜ್ಯ ಸರ್ಕಾರದ ಪರ ಪೂಜೆ ಮಾಡಿಸುತ್ತಿರುವುದನ್ನು ಸಹಿಸದ ಕುಮಾರಸ್ವಾಮಿ, ಗ್ಯಾರಂಟಿಗಳಿಂದ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿದ್ದು ಅವರು ಹೆಣ್ಣು ಮಕ್ಕಳ ಬಗ್ಗೆ ಹೊಂದಿರುವ ಭಾವನೆ ತೋರಿಸುತ್ತದೆ ಎಂದು ಹರಿಹಾಯ್ದರು.

ಡಿ.ಕೆ.ಸುರೇಶ್ ನಿಮ್ಮ ಮನೆಯ ಮಗ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ದುಡಿದಿದ್ದಾರೆ. ಅವರ ಶ್ರಮ ಗುರುತಿಸಿ ಅವರನ್ನು ಗೆಲ್ಲಿಸಬೇಕು. ಹೊರಗಿನಿಂದ ಬಂದ ಅಭ್ಯರ್ಥಿಗಳಿಂದ ಏನು ಸಾಧನೆ ಆಗದು ಏನಿದ್ದರೂ ಅವರು ನಮ್ಮೂರಿಗೆ ಬಂದು ಹೋಗುವ ನೆಂಟರಿದ್ದಂತೆ ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸುವವರು ನಾವು ಮಾತ್ರ ಎಂಬುದನ್ನು ಮರೆಯದಿರಿ, ರಾಜ್ಯದ ಮಂತ್ರಿಯಾಗಿ ನನ್ನ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಮೇಕೆದಾಟು ಯೋಜನೆ ಸೇರಿದಂತೆ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಚುನಾವಣೆ ನಂತರ ವಾರಕ್ಕೊಂದು ದಿನ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಿ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ನನ್ನ ಚುನಾವಣೆಯಲ್ಲಿ ನಾನು ನಿಮ್ಮ ಬಳಿ ಮತಯಾಚಿಸಲು ಬರದಿದ್ದರೂ ನನ್ನ ಮೇಲೆ ವಿಶ್ವಾಸವಿಟ್ಟು ಬಾರಿ ಬಹುಮತದಿಂದ ಆರಿಸಿ ಕಳುಹಿಸಿದ್ದೀರಿ. ಹಾಗೆಯೇ ಈ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರನ್ನು ಬಹುಮತದಿಂದ ಗೆಲ್ಲಿಸುವ ಮೂಲಕ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಅವಕಾಶ ಮಾಡಕೊಬೇಕೆಂದು ಮನವಿ ಮಾಡಿದರು.

ಕೆ ಕೆ ಪಿ ಸುದಿ 01:

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ಷೇತ್ರದಲ್ಲಿ ಸುರೇಶ್‌ ಪರ ಚುನಾವಣಾ ಪ್ರಚಾರ ಮಾಡಿದರು.