ಶೃಂಗೇರಿ ತಾಲೂಕಿನಲ್ಲಿ ಶಾಂತಿಯುತ ಮತದಾನ

| Published : Apr 27 2024, 01:00 AM IST

ಸಾರಾಂಶ

ಶೃಂಗೇರಿ, ಲೋಕಸಭೆ ಚುನಾವಣೆಗೆ ಶುಕ್ರವಾರ ಮತದಾನ ತಾಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ನಡೆಯಿತು. ಮರ್ಕಲ್ ಪಂಚಾಯಿತಿ ಕೂತಗೋಡು, ತೆಕ್ಕೂರು ಮತಗಟ್ಟೆಯಲ್ಲಿ ಬೆಳಗ್ಗೆ ಸ್ವಲ್ಪ ತಡವಾಗಿ ಮತದಾನ ಆರಂಭಗೊಂಡಿದ್ದು ಹೊರತು ಪಡಿಸಿದರೆ ಉಳಿದೆಲ್ಲಾ ಮತಗಟ್ಟೆಗಳಲ್ಲಿ ನಿಗದಿತ ಸಮಯದಲ್ಲಿ ಮತದಾನ ಪ್ರತಿಯೆ ಆರಂಭಗೊಂಡಿತು.

ಕೋಗಿನಬೈಲು, ತೆಕ್ಕೂರು ಮತಗಟ್ಟೆಗಳಲ್ಲಿ ಇವಿಎಂ ಸಮಸ್ಯೆ । ಹಸಮಣೆ ಏರುವ ಮೊದಲು ಹಕ್ಕು ಚಲಾಯಿಸಿದ ವಧು

ಕನ್ನಡಪ್ರಭ ವಾರ್ತೆ, ಶೃಂಗೇರಿ

ಲೋಕಸಭೆ ಚುನಾವಣೆಗೆ ಶುಕ್ರವಾರ ಮತದಾನ ತಾಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ನಡೆಯಿತು. ಮರ್ಕಲ್ ಪಂಚಾಯಿತಿ ಕೂತಗೋಡು, ತೆಕ್ಕೂರು ಮತಗಟ್ಟೆಯಲ್ಲಿ ಬೆಳಗ್ಗೆ ಸ್ವಲ್ಪ ತಡವಾಗಿ ಮತದಾನ ಆರಂಭಗೊಂಡಿದ್ದು ಹೊರತು ಪಡಿಸಿದರೆ ಉಳಿದೆಲ್ಲಾ ಮತಗಟ್ಟೆಗಳಲ್ಲಿ ನಿಗದಿತ ಸಮಯದಲ್ಲಿ ಮತದಾನ ಪ್ರತಿಯೆ ಆರಂಭಗೊಂಡಿತು.

ಕೋಗಿನಬೈಲು, ತೆಕ್ಕೂರು ಮತಗಟ್ಟೆಗಳಲ್ಲಿ ಇವಿಎಂ ಸಮಸ್ಯೆ ಉಂಟಾಗಿದ್ದರಿಂದ ಮತದಾನ ಆರಂಭಕ್ಕೆ ವಿಳಂಬ ವಾಯಿತು. ಉಳಿದಂತೆ ಎಲ್ಲಾ ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಮತದಾರರು ಬಂದು ಸಾಲುಗಟ್ಟಿ ನಿಂತು ಮತಚಲಾಯಿಸಿದರು. ಹಾಗಾಗಿ ಬೆಳಿಗ್ಗೆಯಿದಲೇ ಕ್ಷೇತ್ರದಲ್ಲಿ ಮತದಾನ ಬಿರುಸಿನಿಂದ ನಡೆಯಿತು. ಮಧ್ಯಾಹ್ನದ ವೇ‍ಳೆಯಲ್ಲಿ ಹೆಚ್ಚಿನ ಮತದಾನ ನಡೆದಿದ್ದು. ಸಂಜೆಯ ವೇಳೆಗೆ ಬಹುತೇಕ ಮತದಾನ ಮುಗಿದಿತ್ತು.

ಸುತ್ತ ಮುತ್ತಲ ಗ್ರಾಮೀಣ ಪ್ರದೇಶಗಳಿಂದ ಜನರು ಬೆಳಿಗ್ಗೆಯೇ ಬಂದು ಮತದಾನ ಮಾಡುತ್ತಿದ್ದರು. ತಾಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ಮತದಾನ ನಡೆಯಯಿತು. ಬಿಗಿ ಪೊಲೀಸ್‌ ಬಂದೋಬಸ್ತ್ ಆಯೋಜಿಸಲಾಗಿತ್ತು. ಸುಡು ಬಿಸಿಲನ್ನು ಲೆಕ್ಕಿಸದೇ ಜನರು ಉತ್ಸಾಹದಿಂದ ಬಂದು ಮತ ಚಲಾಯಿಸಿದರು.

-- ಬಾಕ್ಸ್‌--

ಹಸಮಣೆ ಏರುವ ಮೊದಲು ವಧು ಮತದಾನ

ಶೃಂಗೇರಿ ಕ್ಷೇತ್ರದ ಕೂತಗೋಡು ಮತಗಟ್ಟೆಯಲ್ಲಿ ಹಸಮಣೆ ಏರುವ ಮೊದಲು ವಧು ಸ್ಪಂದನಾ ಮತದಾನ ಮತಗಟ್ಟೆಗೆ ಬಂದು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು.

26 ಶ್ರೀ ಚಿತ್ರ 1-

ಶೃಂಗೇರಿ ತಾಲೂಕಿನ ಕೂತಗೋಡು ಮತಗಟ್ಟೆಯಲ್ಲಿ ಹಸಮಣೆ ಏರುವ ಮೋದಲು ವಧು ಸ್ಪಂದನಾ ಮತಚಲಾಯಿಸಿ ಹೊರಬರುತ್ತಿರುವುದು.