ಶಾಂತಿಯುತ ನೈಋತ್ಯ ಶಿಕ್ಷಕರ-ಪದವೀಧರರ ಚುನಾವಣೆ

| Published : Jun 04 2024, 12:30 AM IST

ಶಾಂತಿಯುತ ನೈಋತ್ಯ ಶಿಕ್ಷಕರ-ಪದವೀಧರರ ಚುನಾವಣೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರಿನ ಬೇಲೂರು ರಸ್ತೆಯಲ್ಲಿರುವ ಸರ್ಕಾರಿ ಜ್ಯೂನಿಯರ್‌ ಕಾಲೇಜಿನ ಮತಗಟ್ಟೆಯಲ್ಲಿ ಮತದಾನಕ್ಕೆ ನಿಂತಿರುವ ಮತದಾರರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವಿಧಾನ ಪರಿಷತ್‌ ಚುನಾವಣೆ ನೈಋತ್ಯ ಕ್ಷೇತ್ರಕ್ಕೆ ಒಳಪಡುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಮವಾರ ಶಾಂತಿಯುತ ಮತದಾನ ನಡೆಯಿತು.ಬೆಳಗ್ಗೆ 8 ಗಂಟೆಗೆ ಮತದಾನ ಆರಂಭಗೊಂಡು ಸಂಜೆ 4 ಗಂಟೆಗೆ ಮುಕ್ತಾಯಗೊಂಡಿತ್ತು, ಬೆಳಗ್ಗೆಯಿಂದಲೇ ಮತದಾನ ಚುರುಕುಗೊಂಡಿದ್ದು, ಶಿಕ್ಷಕರು ಹಾಗೂ ಪದವೀಧರರು ಮತದಾನದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಶಿಕ್ಷಕರ ಕ್ಷೇತ್ರಕ್ಕೆ ಜಿಲ್ಲೆಯಲ್ಲಿ ಶೇ.89.11ರಷ್ಟು ಮತದಾನವಾಗಿದ್ದರೆ, ಪದವೀಧರರ ಕ್ಷೇತ್ರಕ್ಕೆ ಶೇ.81.20 ಮತದಾನವಾಗಿದೆ.

ಜಿಲ್ಲೆಯಲ್ಲಿ 10,206 ಪದವೀಧರ ಮತದಾರರು ಇದ್ದು, ಈ ಪೈಕಿ 8,287 ಮತದಾರರು ಮತ ಚಲಾವಣೆ ಮಾಡಿದ್ದಾರೆ. ಮಹಿಳೆಯರಿಗೆ ಹೋಲಿಕೆ ಮಾಡಿದರೆ ಪುರುಷರೇ ಹೆಚ್ಚು ಮತ ಚಲಾವಣೆ ಮಾಡಿದ್ದಾರೆ. 4,224 ಶಿಕ್ಷಕ ಮತದಾರರಲ್ಲಿ 3,764 ಮತದಾನ ಮಾಡಿದ್ದು, ಇಲ್ಲೂ ಕೂಡ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ.

ಚಿಕ್ಕಮಗಳೂರು ಸೇರಿದಂತೆ ರಾಜ್ಯದ 6 ಜಿಲ್ಲೆಗಳಲ್ಲಿ ಸೋಮವಾರ ನೈಋತ್ಯ ಪದವೀಧರರ ಕ್ಷೇತ್ರಕ್ಕೆ ಚುನಾವಣೆ ನಡೆದಿದ್ದು, ಶಿಕ್ಷಕರ ಕ್ಷೇತ್ರದಲ್ಲಿ 8 ಅಭ್ಯರ್ಥಿಗಳು ಕಣದಲ್ಲಿದ್ದರೆ, ಪದವೀಧರರ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳಿದ್ದಾರೆ.

ನೈರುತ್ಯ ಶಿಕ್ಷಕರ ಕ್ಷೇತ್ರದ ವಿವರತಾಲೂಕ.

ಒಟ್ಟು ಮತದಾರರು ಚಲಾವಣೆಯಾದ ಮತಗಳು

ಎನ್‌.ಆರ್‌.ಪು.

156.

141

ತರೀಕೆರೆ.

292.

270

ಕೊಪ್ಪ.

283.

245

ಕಡೂರ.

112.

993

ಶೃಂಗೇರ.

17.

159

ಚಿಕ್ಕಮಗಳೂರ.

153.

1367

ಮೂಡಿಗೆರ.

39.

347

ಅಜ್ಜಂಪು.

21.

200

ಕಳಸ.

48.

42

ನೈಋತ್ಯ ಪದವೀಧರರ ಕ್ಷೇತ್ರದ ವಿವರತಾಲೂಕ.

ಒಟ್ಟು ಮತದಾರರ.

ಚಲಾವಣೆಯಾದ ಮತಗಳು

ಎನ್‌.ಆರ್‌.ಪು.

507.

431

ತರೀಕೆರೆ.

1,39.

1,239

ಕೊಪ್ಪ.

807.

687

ಕಡೂರು.

2,262.

1,829

ಶೃಂಗೇರ.

46.

414

ಚಿಕ್ಕಮಗಳೂರ.

301.

2218

ಮೂಡಿಗೆರೆ.

780.

622

ಅಜ್ಜಂಪುರ.

894.

772

ಕಳಸ.

89.

75