ಸಾರಾಂಶ
ದೇವನಹಳ್ಳಿ: ಕಾರ್ತೀಕಮಾಸದ ಕಡೆಯ ಸೋಮವಾರದಂದು ಪಟ್ಟಣದ ಹೊರವಲಯದ ಪುರಾಣ ಪ್ರಸಿದ್ಧ ಪಾರಿವಾಳ ಗುಟ್ಟದ ಶ್ರೀಆಂಜನೇಯಸ್ವಾಮಿ ದೇವಾಲಯದ ಬಳಿ ಕಡಲೇಕಾಯಿ ಪರಿಷೆ ಆಚರಿಸಲಾಯಿತು.
ದೇವನಹಳ್ಳಿ: ಕಾರ್ತೀಕಮಾಸದ ಕಡೆಯ ಸೋಮವಾರದಂದು ಪಟ್ಟಣದ ಹೊರವಲಯದ ಪುರಾಣ ಪ್ರಸಿದ್ಧ ಪಾರಿವಾಳ ಗುಟ್ಟದ ಶ್ರೀಆಂಜನೇಯಸ್ವಾಮಿ ದೇವಾಲಯದ ಬಳಿ ಕಡಲೇಕಾಯಿ ಪರಿಷೆ ಆಚರಿಸಲಾಯಿತು. ಪರಿಷೆಗೆ ಸಾವಿರಾರು ಜನ ಆಗಮಿಸಿ ದೇವರ ದರ್ಶನ ಪಡೆದು ಕಡಲೆಕಾಯಿ ಸವಿದರು. ಅನೇಕ ವರ್ಷಗಳಿಂದ ಕಡಲೇಕಾಯಿ ಪರಿಷೆಯಂದು ಆಂಜನೇಯಸ್ವಾಮಿ, ಗವಿ ವಿರಭದ್ರಸ್ವಾಮಿ ಮತ್ತು ಗವಿಬೀರಲಿಂಗೇಶ್ವರ ದೇವರಿಗೆ ವಿಶೇಷ ಅಲಂಕಾರ ಮಾಡಲಾಗುವುದು.
ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪರಿಷೆಗೆ ಆಗಮಿಸಿ ದೇವರ ದರ್ಶನ ಮಾಡಿ ಮನೆಗೆ ಕಡಲೆಕಾಯಿ ಖರೀದಿ ಮಾಡುವುದು ಇಲ್ಲಿಯ ವಿಶೇಷ. ಕಡಲೇ ಕಾಯಿ ಪರಿಷೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಉತ್ತಮ ರಾಸುಗಳಿಗೆ ಬಹುಮಾನ, ಗುಡ್ಡಗಾಡು ಓಟ, ಕಬಡ್ಡಿ, ಖೋಖೋ ಪಂದ್ಯಾವಳಿಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆ ಜೈ ಮಾರುತಿ ಭಕ್ತ ಮಂಡಳಿ ಸೇವಾ ಸಮಿತಿ ಅಧ್ಯಕ್ಷ ಸಿ. ಜಗನ್ನಾಥ್, ಗೌರವಾಧ್ಯಕ್ಷ ಡಾ.ಮುನಿರಾಜು, ಉಪಾಧ್ಯಕ್ಷ ಕೆ.ಮೋಟಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಮಂಜುನಾಥ್, ಖಜಾಂಚಿ ಪುಟ್ಟರಾಜು, ನಿರ್ದೇಶಕರಾದ ಎನ್.ರಘು, ಮಾವಳ್ಳಿ ಎನ್ ಮುನಿರಾಜು, ಡಿ.ಎಂ.ಮುನಿರಾಜಪ್ಪ, ಶ್ರೀನಿವಾಸಪ್ಪ, ಕೆ.ಮುನಿರಾಜು, ಎಸ್.ಆರ್.ಮುನಿರಾಜು, ಬಿಜಿ ಚನ್ನಪ್ಪ, ಮುನಿನಂಜಪ್ಪ, ವಿ ಗೋಪಾಲಕೃಷ್ಣ, ವಿ ದೇವರಾಜ್, ಅರ್ಚಕ ಡಿಎಸ್ ಗೋಪಾಲಕೃಷ್ಣ ಭಟ್ಟ ಇತರರಿದ್ದರು.೧೭ ದೇವನಹಳ್ಳಿ ಚಿತ್ರಸುದ್ದಿ: ೧
ದೇವನಹಳ್ಳಿ ಪಟ್ಟಣದ ಹೊರವಲಯದ ಪುರಾಣ ಪ್ರಸಿದ್ಧ ಪಾರಿವಾಳ ಗುಟ್ಟದ ಶ್ರೀಆಂಜನೇಯಸ್ವಾಮಿ ದೇವಾಲಯದ ಬಳಿ ಕಾರ್ತೀಕಮಾಸದ ಕಡೆಯ ಸೋಮವಾರದಂದು ಕಡಲೇಕಾಯಿ ಪರಿಷೆ ಆಚರಿಸಲಾಯಿತು. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪರಿಷೆಗೆ ಆಗಮಿಸಿ ದೇವರ ದರ್ಶನ ಮಾಡಿ ಮನೆಗೆ ಕಡಲೆಕಾಯಿ ಖರೀದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))