ಪ್ರಕೃತಿಗೆ ಹೊಂದಿಕೊಂಡಂತೆ ಮಕ್ಕಳನ್ನು ಬೆಳೆಸಲು ಮಕ್ಕಳ ತಜ್ಞ ಡಾ.ಎಸ್. ಗಿರೀಶ್ ಕರೆ

| Published : Dec 28 2024, 12:47 AM IST

ಪ್ರಕೃತಿಗೆ ಹೊಂದಿಕೊಂಡಂತೆ ಮಕ್ಕಳನ್ನು ಬೆಳೆಸಲು ಮಕ್ಕಳ ತಜ್ಞ ಡಾ.ಎಸ್. ಗಿರೀಶ್ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ದೇಶದ ಸಂಸ್ಕೃತಿ ಸಂಸ್ಕಾರ ಕಲಿಸಿ ಪ್ರಕೃತಿಗೆ ಹೊಂದಿಕೊಂಡಂತೆ ಮಕ್ಕಳನ್ನು ಬೆಳೆಸಬೇಕೆಂದು ಪಟ್ಟಣದ ಪೋದಾರ್ ಜುಂಬೋ ಕಿಡ್ಸ್ ಶಾಲೆ ಸಂಸ್ಥಾಪಕ, ಆಶೀರ್ವಾದ ನರ್ಸಿಂಗ್ ಹೋಂನ ಮಕ್ಕಳ ತಜ್ಞ ಡಾ.ಎಸ್.ಗಿರೀಶ್ ಹೇಳಿದ್ದಾರೆ.

ತರೀಕೆರೆಯಲ್ಲಿ ಪೋದಾರ್ ಜುಂಬೋ ಕಿಡ್ಸ್ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ದೇಶದ ಸಂಸ್ಕೃತಿ ಸಂಸ್ಕಾರ ಕಲಿಸಿ ಪ್ರಕೃತಿಗೆ ಹೊಂದಿಕೊಂಡಂತೆ ಮಕ್ಕಳನ್ನು ಬೆಳೆಸಬೇಕೆಂದು ಪಟ್ಟಣದ ಪೋದಾರ್ ಜುಂಬೋ ಕಿಡ್ಸ್ ಶಾಲೆ ಸಂಸ್ಥಾಪಕ, ಆಶೀರ್ವಾದ ನರ್ಸಿಂಗ್ ಹೋಂನ ಮಕ್ಕಳ ತಜ್ಞ ಡಾ.ಎಸ್.ಗಿರೀಶ್ ಹೇಳಿದ್ದಾರೆ.

ಪೋದಾರ್ ಜುಂಬೋ ಕಿಡ್ಸ್ ಶಾಲೆಯಿಂದ ನಡೆದ ಶಾಲೆ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಮಗು ತಾಯಿಯ ಭಾವನೆಗಳಿಗೆ ಸ್ಪಂದಿಸುತ್ತದೆ. ಮಗುವಿನ ಭಾವನೆಗಳಿಗೆ ತಂದೆ ತಾಯಿಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕು. ಕಷ್ಟಗಳನ್ನು ಸವಾಲಾಗಿ ಎದುರಿಸುವ ಹಾಗೆಬೆಳೆಸ ಬೇಕು. ಪ್ರೀತಿ ವಿಶ್ವಾಸಗಳಿಂದ ಮಕ್ಕಳನ್ನು ಬೆಳೆಸಬೇಕು. ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಂಡು ಉತ್ತಮಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಸದಾಶಯದೊಂದಿಗೆ ಪೋದಾರ್ ಜುಂಬೋ ಕಿಡ್ಸ್ ಶಾಲೆ ಸ್ಥಾಪಿಸಲಾಗಿದೆ. ಪೋದಾರ್ ಜುಂಬೋ ಕಿಡ್ಸ್ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಹಕರಿಸುತ್ತಿರುವ ಶಾಲೆ ಪ್ರಾಂಶುಪಾಲರಾದ ಡಾ.ರಶ್ಮಿ ಗಿರೀಶ್, ಆಡಳಿತ ಮಂಜಳಿ ನಿರ್ದೇಶಕ ರಾಜೇಶ್, ಶಿಕ್ಷಕ ವರ್ಗ, ಸಿಬ್ಬಂದಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಪೋದಾರ್ ಜುಂಬೋ ಕಿಡ್ಸ್ ಶಾಲೆ ಪ್ರಾಂಶುಪಾಲರಾದ ಡಾ.ರಶ್ಮಿ ಗಿರೀಶ್ ಮಾತನಾಡಿ ಶಿಕ್ಷಣ ಮಕ್ಕಳ ಮನಸ್ಸನ್ನು ಉಲ್ಲಾಸಿತ

ಗೊಳಿಸ ಬೇಕು. ಮಕ್ಕಳು ತಂದೆ ತಾಯಿಯನ್ನು ಪೋಷಕರನ್ನು ಅನುಸರಿಸುತ್ತಾರೆ ಎಂದು ತಿಳಿಸಿದ ಅವರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹೇಳಿದರು.

ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕ ರಾಜೇಶ್ ಮಾತನಾಡಿ ಮಕ್ಕಳು ಚಟುವಟಿಕೆಗಳನ್ನು ನೋಡುತ್ತಾ ಕಲಿಯುತ್ತಾರೆ. ಪೋದಾರ್ ಜುಂಬೋ ಕಿಡ್ಸ್ ಶಾಲೆ ಇಂತಹ ಒಂದು ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.ಪತ್ರಕರ್ತ ಅನಂತ ನಾಡಿಗ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಪೋದಾರ್ ಜುಂಬೋ ಕಿಡ್ಸ್ ಶಾಲೆ ಮಕ್ಕಳ ಮನಸ್ಸನ್ನು ಶಿಕ್ಷಣದ ಕಡೆಗೆ ಆಕರ್ಷಿಸುವಂತಹ ಉತ್ತಮ ಪರಿಸರ ಹಾಗೂ ಕಲಿಕೋಪಕರಣಗಳನ್ನು ಹೊಂದಿದೆ. ಶಾಲೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ಹೇಳಿದರು.

ಆಶೀರ್ವಾದ್ ನರ್ಸಿಂಗ್ ಹೋಂನ ಹಿರಿಯ ವೈದ್ಯ ಡಾ.ಶ್ರೀನಿವಾಸ್, ಸಪ್ತಗಿರಿ ಕನ್.ವೆನ್ಷನ್ ಹಾಲ್.ನ ಸಿದ್ದಮ್ಮ ನಾರಾಯಣಪ್ಪ, ಟಿ.ಎನ್. ವೆಂಕಟೇಶ್, ಪೋದಾರ್ ಜುಂಬೋ ಕಿಡ್ಸ್ನ ವ್ಯವಸ್ಥಾಪಕ ಫೀಬಾ ಪೌಲ್‌, ಶಿಕ್ಷಕಿಯರು, ಸಿಬ್ಬಂದಿ ಭಾಗವಹಿಸಿದ್ದರು. -

27ಕೆಟಿಆರ್.ಕೆ.06ಃ

ತರೀಕೆರೆಯಲ್ಲಿ ಪೋದಾರ್ ಜುಂಬೋ ಕಿಡ್ಸ್ ಶಾಲೆಯಿಂದ ನಡೆದ ಶಾಲೆ ವಾರ್ಷಿಕೋತ್ಸವದಲ್ಲಿ ಸಂಸ್ಥಾಪಕ ಡಾ.ಎಸ್. ಗಿರೀಶ್, ಪ್ರಾಂಶುಪಾಲರಾದ ಡಾ.ರಶ್ಮಿ ಗಿರೀಶ್, ಶಾಲೆ ಆಡಳಿತ ಮಂಡಳಿ ನಿರ್ದೇಶಕ ರಾಜೇಶ್ ಮತ್ತಿತರರು ಇದ್ದರು.