ಉಡುಪಿ ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುತ್ತಿರುವ ಭೀಕರ ಕ್ರೌರ್ಯದ ಸರಣಿ ಕಂಡು ತೀವ್ರ ಆಘಾತವಾಗುತ್ತಿದೆ, ಆದ್ದರಿಂದ ಕಿಂಚಿತ್ತೂ ತಡಮಾಡದೇ ಈ ಸಂಬಂಧ ಕಾರ್ಯಪ್ರವೃತ್ತರಾಗಿ ಈ ಭೀಭಿತ್ಸ ಕೃತ್ಯಗಳನ್ನು ನಿಲ್ಲಿಸಲು ಕ್ರಮ ವಹಿಸಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಉಡುಪಿ ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುತ್ತಿರುವ ಭೀಕರ ಕ್ರೌರ್ಯದ ಸರಣಿ ಕಂಡು ತೀವ್ರ ಆಘಾತವಾಗುತ್ತಿದೆ, ಆದ್ದರಿಂದ ಕಿಂಚಿತ್ತೂ ತಡಮಾಡದೇ ಈ ಸಂಬಂಧ ಕಾರ್ಯಪ್ರವೃತ್ತರಾಗಿ ಈ ಭೀಭಿತ್ಸ ಕೃತ್ಯಗಳನ್ನು ನಿಲ್ಲಿಸಲು ಕ್ರಮ ವಹಿಸಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಈ ಸಂಬಂಧ ಶ್ರೀಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಶ್ರೀಗಳು ಪತ್ರ ಬರೆದಿದ್ದಾರೆ. ಪತ್ರದಲ್ಲಿ ಜಗತ್ತಿನ ಸಮಸ್ತರ ಒಳಿತಿಗಾಗಿ ಹಿಂದು ಸಮಾಜ ನಿರಂತರ ಸ್ಪಂದಿಸಿದೆ. ತಾನೇ ತಾನಾಗಿ ಇನ್ನೊಬ್ಬರ ಮೇಲೆ ಪಾರಮ್ಯ ಸಾಧಿಸಲು ಹಿಂಸೆಯನ್ನು ಹಿಂದು ಸಮಾಜ ಯಾವತ್ತೂ ಅಸ್ತ್ರವಾಗಿ ಮಾಡಿಕೊಂಡದ್ದೇ ಇಲ್ಲ. ಶಾಂತಿ ಸಹಬಾಳ್ವೆಯ ತತ್ವಗಳನ್ನು ನಮ್ಮ ಎಲ್ಲೆ ಮೀರಿ ಅನುಷ್ಠಾನಿಸಿದ್ದೇವೆ ಆದರೆ ನಮ್ಮದೇ ನೆರೆಯ ದೇಶವೊಂದರಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಪೈಶಾಚಿಕ ಹಾಗೂ ಅಮಾನವೀಯ ಧಾಳಿಗಳು ಹಿಂಸೆ , ಕೊಲೆ ಅತ್ಯಾಚಾರಗಳನ್ನು ಕಂಡು ಭಾರತದ ಹಿಂದುಗಳು ತೀವ್ರ ದುಃಖಿತರಾಗಿದ್ದಾರೆ ಎಂದವರು ಹೇಳಿದ್ದಾರೆ.ಒಂದು ಕಡೆ ಅಲ್ಲಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದ ದೇಶ ಬಿಟ್ಟು ಓಡಿ ಬಂದ ಮಾಜಿ ಪ್ರಧಾನಿ ಶೇಖ್ ಹಸೀನಾರಿಗೆ ಎಳ್ಳಷ್ಟೂ ಹಾನಿಯಾಗದಂತೆ ರಾಜಾಶ್ರಯ ಕೊಟ್ಟು ಭಾರತ ರಕ್ಷಣೆ ಕೊಟ್ಟಿದೆ. ಇದು ನಮ್ಮ ದೇಶದ ಔದಾರ್ಯವೇ ಆಗಿದೆ. ಆದರೆ ಆ ನಂತರದ ವಿದ್ಯಮಾನಗಳಲ್ಲಿ ಅಲ್ಲಿನ ಹಿಂದುಗಳು ಅನುಭವಿಸುತ್ತಿರುವ ನೋವು ಸಂಕಟಗಳು ಮಾತ್ರ ತೀರಾ ವಿಷಾದನೀಯ. ಆದ್ದರಿಂದ ಕೇಂದ್ರ ಸರ್ಕಾರ ತಕ್ಷಣ ಸಾಧ್ಯವಿರುವ ಎಲ್ಲ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡು ಬಾಂಗ್ಲಾದಲ್ಲಿ ಹಿಂದುಗಳ ರಕ್ಷಣೆಗೆ, ನೆಮ್ಮದಿಗೆ ಸೂಕ್ತ ವ್ಯವಸ್ಥೆಯಾಗುವಂತೆ ನೋಡಿಕೊಳ್ಳಬೇಕು ಎಂದು ವಿಶ್ವಹಿಂದು ಪರಿಷತ್ತಿನ ಕೇಂದ್ರೀಯ ಮಂಡಳಿ ಸದಸ್ಯರೂ ಆಗಿರುವ ಶ್ರೀಗಳು ಒತ್ತಾಯಿಸಿದ್ದಾರೆ. ಜ. 10 ಕ್ಕೆ ದೀಪ ಬೆಳಗಿಸಿ ಪ್ರಾರ್ಥಿಸಿ
ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ಮಾರಣಾಂತಿಕ ದೌರ್ಜನ್ಯಗಳ ಅಂತ್ಯ , ಘಟನೆಗಳಲ್ಲಿ ಮೃತರಾದವರಿಗೆ ಸದ್ಗತಿ ಹಾಗೂ ಸಂತ್ರಸ್ತ ಹಿಂದುಗಳಿಗೆ ಶೀಘ್ರ ರಕ್ಷಣೆ ಮತ್ತು ಇಡೀ ಜಗತ್ತಿನಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಪ್ರಾರ್ಥಿಸಿ ಇದೇ ಬರುವ ಜನವರಿ 10 ಶನಿವಾರದಂದು ದೇಶದ ಪ್ರತೀ ಹಿಂದುಗಳು ತಮ್ಮ ಮನೆ ಮಠ ಮಂದಿರಗಳಲ್ಲಿ ದೇವರಿಗೆ ನಿತ್ಯ ಬೆಳಗುವ ದೀಪದ ಜೊತೆಗೆ ಪ್ರತ್ಯೇಕ ದೀಪ ಒಂದನ್ನು ಬೆಳಗಿ ಪ್ರಾರ್ಥಿಸುವಂತೆ ಶ್ರೀಗಳು ಕರೆ ನೀಡಿದ್ದಾರೆ.