ಉಡುಪಿ: ರಾಜಸ್ಥಾನದ ಭಾರತೀಯ ಯುವ ಸಂಸತ್ತು ಮತ್ತು ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾನಿಲಯಗಳ ಜಂಟಿ ಆಶ್ರಯದಲ್ಲಿ ನಾಗ್ಪುರದ ಆರ್. ಎಸ್. ಎಸ್. ಪ್ರಧಾನ‌ ಕಚೇರಿಯ ಸಭಾಂಗಣದಲ್ಲಿ ನಡೆಯುತ್ತಿರುವ 29ನೇ ಭಾರತೀಯ ಯುವ ಸಂಸತ್ ಮೂರು ದಿನಗಳ ಅಧಿವೇಶನದಲ್ಲಿ ಭಾನುವಾರ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪಾಲ್ಗೊಂಡರು.

ತೆಲಂಗಾಣ ರಾಜ್ಯಪಾಲ ಜಿಷ್ಣುದೇವ ವರ್ಮಾ, ಶ್ರೀರಾಮಾನುಜ ಪರಂಪರೆಯ ಶ್ರೀ ಚಿನ್ನಜೀಯರ್ ಸ್ವಾಮೀಜಿ, ಕೇಂದ್ರೀಯ ಸಂಸ್ಕೃತ ವಿವಿ ಉಪಕುಲಪತಿ ಡಾ. ಶ್ರೀನಿವಾಸ ವರಖೇಡಿ ಮೊದಲಾದವರು ಉಪಸ್ಥಿತರಿದ್ದರು. ಉಪರಾಷ್ಟ್ರಪತಿ ಅವರಿಂದ ಶನಿವಾರ ಉದ್ಘಾಟನೆಗೊಂಡ ಈ ಅಧಿವೇಶನದಲ್ಲಿ ಆರ್. ಎಸ್. ಎಸ್. ಸರಸಂಘಚಾಲಕ ಡಾ. ಮೋಹನ್ ಭಾಗವತ್, ಅನೇಕ ರಾಜ್ಯಗಳ ರಾಜ್ಯಪಾಲರು, ವಿಧಾನಸಭಾಧ್ಯಕ್ಷರು, ಅನೇಕ ವಿದ್ವಾಂಸರು , ರಾಜನೀತಿಜ್ಞರು ಹಾಗೂ ದೇಶಾದ್ಯಂತದಿಂದ ಬಂದ ನೂರಾರು ಯುವಕ ಯುವತಿಯರು ಭಾಗವಹಿಸುತ್ತಿದ್ದಾರೆ.‌