ಪಿಂಚಣಿ ಅದಾಲತ್: ಜಿಲ್ಲೆಯಲ್ಲಿ 318 ಅರ್ಜಿಗಳ ವಿಲೇವಾರಿ

| Published : Feb 10 2024, 01:48 AM IST

ಪಿಂಚಣಿ ಅದಾಲತ್: ಜಿಲ್ಲೆಯಲ್ಲಿ 318 ಅರ್ಜಿಗಳ ವಿಲೇವಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ತುಮಕೂರು, ಚಿಕ್ಕನಾಯಕನಹಳ್ಳಿ, ಮಧುಗಿರಿ ಹಾಗೂ ತುರುವೇಕೆರೆ ತಾಲೂಕು ವ್ಯಾಪ್ತಿಯ ಹೋಬಳಿಗಳಲ್ಲಿ ಶುಕರ್ವಾರ್ ಏರ್ಪಡಿಸಿದ್ದ ಪಿಂಚಣಿ ಅದಾಲತ್‌ನಲ್ಲಿ ವಿವಿಧ ಪಿಂಚಣಿ ಯೋಜನೆಯಡಿ ಒಟ್ಟು 318 ಅರ್ಜಿಗಳನ್ನು ವಿಲೇವಾರಿ ಮಾಡಿ ಸ್ಥಳದಲ್ಲಿಯೇ ಮಂಜೂರಾತಿ ಆದೇಶವನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಯ ತುಮಕೂರು, ಚಿಕ್ಕನಾಯಕನಹಳ್ಳಿ, ಮಧುಗಿರಿ ಹಾಗೂ ತುರುವೇಕೆರೆ ತಾಲೂಕು ವ್ಯಾಪ್ತಿಯ ಹೋಬಳಿಗಳಲ್ಲಿ ಶುಕರ್ವಾರ್ ಏರ್ಪಡಿಸಿದ್ದ ಪಿಂಚಣಿ ಅದಾಲತ್‌ನಲ್ಲಿ ವಿವಿಧ ಪಿಂಚಣಿ ಯೋಜನೆಯಡಿ ಒಟ್ಟು 318 ಅರ್ಜಿಗಳನ್ನು ವಿಲೇವಾರಿ ಮಾಡಿ ಸ್ಥಳದಲ್ಲಿಯೇ ಮಂಜೂರಾತಿ ಆದೇಶವನ್ನು ವಿತರಿಸಲಾಯಿತು.

ತುಮಕೂರು: ತುಮಕೂರು ತಾಲೂಕಿನ ಕಸಬಾ ಹೋಬಳಿಯಲ್ಲಿ ಉಪತಹಸೀಲ್ದಾರ್‌ ನರಸಿಂಹರಾಜು ಅವರ ಅಧ್ಯಕ್ಷತೆ ನೀಲಮ್ಮ ಎಸ್.ಎಸ್.ವೈ ಶಿರಸ್ತೇದಾರ್‌ ಅವರ ಉಪಸ್ಥಿತಿಯಲ್ಲಿಂದು ನಡೆದ ಪಿಂಚಣಿ ಅದಾಲತ್‌ನಲ್ಲಿ ಒಟ್ಟು 131 ಅರ್ಜಿಗಳನ್ನು ಫಲಾನುಭವಿಗಳಿಂದ ಸ್ವೀಕರಿಸಿ ಸ್ಥಳದಲ್ಲಿಯೇ ಮಂಜೂರಾತಿ ಅದೇಶವನ್ನು ನೀಡಲಾಯಿತು.

ಚಿಕ್ಕನಾಯಕನಹಳ್ಳಿ: ತಾಲೂಕಿನ ಕಂದಿಕೆರೆ ಹೋಬಳಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗಧಾಮಯ್ಯ ಹಾಗೂ ಉಪತಹಸೀಲ್ದಾರ್‌ ಅವರ ಉಪಸ್ಥಿತಿಯಲ್ಲಿ ಶುಕ್ರವಾರ ಜರುಗಿದ ಪಿಂಚಣಿ ಅದಾಲತ್‌ನಲ್ಲಿ 14 ಅರ್ಜಿ, ಹಂದನಕೆರೆ ಹೋಬಳಿ ನಾಡ ಕಚೇರಿಯಲ್ಲಿ ಉಪತಹಸೀಲ್ದಾರ್‌ ಪ್ರಸನ್ನ ಕುಮಾರ್‌ ಅವರ ಅಧ್ಯಕ್ಷತೆಯಲ್ಲಿ 8 ಅರ್ಜಿ, ಶೆಟ್ಟಿಕೆರೆ ಹೋಬಳಿ ನಾಡಕಚೇರಿಯಲ್ಲಿ ಉಪತಹಸೀಲ್ದಾರ್‌ ವಿಜಯಕುಮಾರ್‌ ಅವರ ಅಧ್ಯಕ್ಷತೆಯಲ್ಲಿ 12 ಅರ್ಜಿ, ಹುಳಿಯಾರು ಹೋಬಳಿ ನಾಡಕಚೇರಿಯಲ್ಲಿ ಉಪ ತಹಸೀಲ್ದಾರ್‌ ಮಲ್ಲಿಕಾರ್ಜುನಪ್ಪ ಅವರ ಅಧ್ಯಕ್ಷತೆಯಲ್ಲಿ 20 ಅರ್ಜಿ, ಕಸಬಾ ಹೋಬಳಿಯ ನಾಡಕಚೇರಿಯಲ್ಲಿ 4 ಅರ್ಜಿ ಸೇರಿ ಒಟ್ಟು 58 ಫಲಾನುಭವಿಗಳಿಂದ ಸ್ವೀಕರಿಸಿದ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು.

ಮಧುಗಿರಿ: ತಾಲೂಕಿನ ಪುರವರ ಹೋಬಳಿ ಪುರವರ ಗ್ರಾಮದಲ್ಲಿ ಸಹಕಾರಿ ಸಂಘಗಳ ಇಲಾಖೆ ಸಹಾಯಕ ನಿಬಂಧಕ ಮೂರ್ತಿ ಅವರ ಅಧ್ಯಕ್ಷತೆ ಮತ್ತು ಜೆ. ಜಯರಾಮಯ್ಯ ಉಪತಹಸೀಲ್ದಾರ್‌ ಅವರ ಉಪಸ್ಥಿತಿಯಲ್ಲಿ 25 ಅರ್ಜಿ, ಕೊಡಿಗೇನಹಳ್ಳಿ ಹೋಬಳಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಕಲ್ಯಾಣಾಧಿಕಾರಿ ರಮೇಶ್ ಹಾಗೂ ಉಪತಹಸೀಲ್ದಾರ್‌ ಆರ್‌. ರವೀಂದ್ರ ಅವರ ಉಪಸ್ಥಿತಿಯಲ್ಲಿ 38 ಅರ್ಜಿ, ದೊಡ್ಡೇರಿ ಹೋಬಳಿ ದೊಡ್ಡೇರಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಜಣ್ಣ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಮಾಲಿನ್ಯ ಅಧಿಕಾರಿ ಶಿವಮೂರ್ತಿ ಹಾಗೂ ಉಪತಹಸೀಲ್ದಾರ್‌ ಇನಾಯತ್ ಉಲ್ಲಾ ಅವರ ಉಪಸ್ಥಿತಿಯಲ್ಲಿ 43 ಅರ್ಜಿ ಸೇರಿದಂತೆ 106 ಅರ್ಜಿಗಳನ್ನು ವಿಲೇವಾರಿ ಮಾಡಿ ಅರ್ಹ ಫಲಾನುಭವಿಗಳಿಗೆ ವಿವಿಧ ಪಿಂಚಣಿ ಯೋಜನೆಯಡಿ ಸ್ಥಳದಲ್ಲಿಯೇ ಮಂಜೂರಾತಿ ಆದೇಶವನ್ನು ವಿತರಿಸಲಾಯಿತು.

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ಮುತ್ತುಗದಹಳ್ಳಿ ಪಿಡಿಒ ನರಸಿಂಹಮೂರ್ತಿ ಹಾಗೂ ಪಂಚಾಯಿತಿ ಅಧ್ಯಕ್ಷರಾದ ಪ್ರೇಮಲತಾ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರೇಡ್-2 ತಹಶೀಲ್ದಾರ್‌ ಅವರ ಅಧ್ಯಕ್ಷತೆಯಲ್ಲಿ ಒಟ್ಟು 7 ಅರ್ಜಿ, ದಂಡಿನಶಿವರ ಹೋಬಳಿಯಲ್ಲಿ ಉಪತಹಸೀಲ್ದಾರ್‌ ಲಿಂಗರಾಜು ಅವರ ಅಧ್ಯಕ್ಷತೆ ಒಟ್ಟು 16 ಅರ್ಜಿ ಸೇರಿದಂತೆ ಒಟ್ಟು 23 ಅರ್ಜಿಗಳನ್ನು ಫಲಾನುಭವಿಗಳಿಂದ ಸ್ವೀಕರಿಸಿ ಸ್ಥಳದಲ್ಲಿಯೇ ಮಂಜೂರಾತಿ ಅದೇಶವನ್ನು ನೀಡಲಾಯಿತು.