ಜನರಲ್ಲಿ ಕಡಿಮೆಯಾಗದ ಪಟಾಕಿ ವ್ಯಾಮೋಹ

| Published : Nov 01 2024, 12:03 AM IST

ಸಾರಾಂಶ

ಈ ಸಲ ಪಟಾಕಿ ಅಂಗಡಿಗೆ ಪರವಾನಗಿ ನೀಡಲು ಸರ್ಕಾರ ಹಲವಾರು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಪಟಾಕಿ ಅಂಗಡಿಗಳ ಸಂಖ್ಯೆ ಕಡಿಮೆಯಾಗಿವೆ, ಇದರಿಂದ ತಪ್ಪಿಸಿಕೊಳ್ಳಲು ವರ್ತಕರು ನೆರೆಯ ತಮಿಳುನಾಡಿನ ಹೊಸೂರಿಗೆ ವಲಸೆ ಹೋಗಿದ್ದಾರೆ, ರಾಜ್ಯದ ಗಡಿ ಬಾಗದ ತಮಿಳುನಾಡಿನಲ್ಲಿ ನೂರಾರು ಪಟಾಕಿ ಅಂಗಡಿ ತಲೆ ಎತ್ತಿವೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ದೇಶದಲ್ಲಿ ಆಗಾಗ ಪಟಾಕಿ ಅವಘಡಗಳು ಸಂಭವಿಸುತ್ತಿದ್ದರೂ ಸಾರ್ವಜನಿಕರಲ್ಲಿ ಪಟಾಕಿ ವ್ಯಾಮೋಹ ಕಡಿಮೆಯಾಗಿಲ್ಲ. ದೀಪಾವಳಿ ಹಬ್ಬಕ್ಕಾಗಿ ಪಟಾಕಿ ಮಳಿಗೆಗಳಲ್ಲಿ ವ್ಯಾಪಾರ ಬಿರುಸಿನಿಂದ ಸಾಗಿದೆ.ಜಿಲ್ಲೆಯಲ್ಲಿ ಬಹುತೇಕ ಪಟಾಕಿ ಮಳಿಗೆಗಳಲ್ಲಿ ಪಟಾಕಿ ಖರೀದಿಸಲು ಅಂಗಡಿ ಮುಂಗ್ಗಟುಗಳ ಮುಂದೆ ಜನ ಜಂಗುಳ್ಳಿ ಕಂಡು ಬಂತು, ಆದರೂ ಪಟಾಕಿ ವ್ಯಾಪಾರಿಗಳು ಕಳೆದ ವರ್ಷ ಆನೇಕಲ್ ಬಳಿ ೧೬ ಮಂದಿ ಜೀವಂತವಾಗಿ ಸುಟ್ಟು ಹೋದ ಕರಾಳ ಘಟನೆ ಈ ಬಾರಿಯ ಪಟಾಕಿ ವಹಿವಾಟಿಗೆ ಹೊಡೆತ ನೀಡಿದೆ ಎನ್ನುತ್ತಾರೆ.ಈ ಸಲ ಪಟಾಕಿ ಅಂಗಡಿಗೆ ಪರವಾನಗಿ ನೀಡಲು ಸರ್ಕಾರ ಹಲವಾರು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಪಟಾಕಿ ಅಂಗಡಿಗಳ ಸಂಖ್ಯೆ ಕಡಿಮೆಯಾಗಿವೆ, ಇದರಿಂದ ತಪ್ಪಿಸಿಕೊಳ್ಳಲು ವರ್ತಕರು ನೆರೆಯ ತಮಿಳುನಾಡಿನ ಹೊಸೂರಿಗೆ ವಲಸೆ ಹೋಗಿದ್ದಾರೆ, ರಾಜ್ಯದ ಗಡಿ ಬಾಗದ ತಮಿಳುನಾಡಿನಲ್ಲಿ ನೂರಾರು ಪಟಾಕಿ ಅಂಗಡಿ ತಲೆ ಎತ್ತಿವೆ.ಹಸಿರು ಪಟಾಕಿಗೆ ಮಾತ್ರ ಅವಕಾಶ

ಅಂಗಡಿಗಳಲ್ಲಿ ಹಸಿರು ಪಟಾಕಿ ಮಾತ್ರ ಮಾರಾಟ ಮಾಡಬೇಕೆಂದು ಸರ್ಕಾರ ಷರತ್ತು ವಿಧಿಸಿದೆ. ಎಲ್ಲ ಪಟಾಕಿ ಅಂಗಡಿಗಳಲ್ಲಿ ಮಾರಟ ಮಾಡುವ ಪಟಾಕಿಗಳ ಬಾಕ್ಸ್ ಮೇಲೆ ಹಸಿರು ಪಟಾಕಿ ಎಂದು ನಮೂದು ಮಾಡಲಾಗಿದೆ. ಹಲವು ಪಟಾಕಿ ಅಂಗಡಿಗಳಲ್ಲಿ ಹಸಿರು ಪಟಾಕಿ ಹೆಸರಿನಲ್ಲಿ ಭಾರಿ ಶಬ್ದ ಬರುವ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದಾರೆಂದು ಗ್ರಾಹಕರಿಂದ ಆರೋಪ ಕೇಳಿಬಂದಿದೆ. ನಗರದಲ್ಲಿ ಪಟಾಕಿಗಳ ಶಬ್ದ ಜೋರುಒಂದಡೆ ಸರಕಾರ ಹಸಿರು ಪಟಾಕಿಗಳಿಗೆ ಮಾತ್ರ ಅನುಮತಿ ಎನ್ನುತ್ತಾರೆ, ಆದರೆ ನಗರದಲ್ಲಿ ಪಟಾಕಿ ಶಬ್ದಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ, ಹಸಿರು ಪಟಾಕಿಯಿಂದ ಇಷ್ಟೊಂದು ಶಬ್ದ ಬರುವುದಿಲ್ಲ, ನಗರದ ಹಲವು ಬಡಾವಣೆಗಳಲ್ಲಿ ಬಾಂಬ್ ಬ್ಲಾಸ್ಟ್‌ನಂತಹ ಪಟಾಕಿ ಸದ್ದು ಕೇಳಿ ಬರುತ್ತಿತ್ತು, ಈ ಶಬ್ದ ಮಾಲಿನಕ್ಕೆ ಜನರು ಬೆಸ್ತು ಬಿದ್ದಿದ್ದಾರೆ, ಸರಕಾರದ ಅದೇಶಗಳು ಬರೀ ಕಾಗದಕ್ಕೆ ಮಾತ್ರ ಸೀಮಿತ ಎಂದು ಸಾರ್ವಜನಿಕರು ಟೀಕಿಸಿದ್ದಾರೆ.

.