ಸಾರಾಂಶ
ಕನ್ನಡಪ್ರಭ ವಾರ್ತೆ ಆಲಮೇಲ: ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಮೈಕೊರೆಯುವ ಚಳಿ ಪ್ರಾರಂಭವಾಗಿದ್ದು, ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ತಾಪಮಾನ ಕುಸಿತದಿಂದ ತಾಲ್ಲೂಕಿನಲ್ಲಿ ಕನಿಷ್ಠ 12 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಚಳಿ ಹಾಗೂ ಶೀತಗಾಳಿಯಿಂದ ವಯೋವೃದ್ಧರು ಮನೆಯಿಂದ ಹೊರಬರದಂತಾಗಿದೆ. ವಯಸ್ಕರು ಉಣ್ಣೆ ಬಟ್ಟೆ ಧರಿಸಿದರೆ ಮಕ್ಕಳು ಕೂಡ ಸ್ವೇಟರ್ ಮೊರೆ ಹೋಗುತ್ತಿದ್ದಾರೆ. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಎಲ್ಲೆಂದರಲ್ಲಿ ಬೆಂಕಿ ಕಾಯಿಸಿಕೊಳ್ಳುವ ಮೂಲಕ ಚಳಿಯಿಂದ ಪಾರಾಗುತ್ತಿದ್ದಾರೆ. ಸಂಜೆ 6 ಗಂಟೆಯಿಂದ ಬೆಳಗಿನ 9 ಗಂಟೆಗೆ ತಾಪಮಾನ ಕ್ಷೀಣಿಸುತ್ತಿದೆ. ಹಗಲಿನಲ್ಲಿ ಸೂರ್ಯನ ಶಾಖ ಹಿತವೆನಿಸುತ್ತಿದ್ದು, ಸಂಜೆಯಾದರೆ ಸಾಕು ಚಳಿಯಿಂದ ಜನರು ತತ್ತರಿಸುವಂತಾಗಿದೆ.ಕೋಟ್ಹವಾಮಾನ ಇಲಾಖೆಯವರು ಎರಡು ದಿನ ರೆಡ್ ಆಲರ್ಟ್ ಘೋಷಣೆ ಮಾಡಿದ್ದು, ಚಳಿ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಪ್ರಿಡ್ಜ್ ನಲ್ಲಿ ಇಟ್ಟಿದ್ದ ಪದಾರ್ಥಗಳನ್ನು ಸೇವನೆ ಮಾಡಬಾರದು ಹಾಗೂ ಕಡ್ಡಾಯವಾಗಿ ವಯೋವೃದ್ಧರು, ಮಕ್ಕಳು ಸ್ವಿಟರ್ ಧರಿಸಬೇಕು ಮತ್ತು ವಿಶೇಷವಾಗಿ ಅಸ್ತಮಾ ರೋಗಿಗಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.ಡಾ.ಸಿ.ಎಸ್.ನಿಂಬಾಳ,