ಸಾರಾಂಶ
ಸಿರವಾರದಲ್ಲಿ ವಲಕಲ್ ಬೃಹನ್ಮಠದ ಲಿಂ.ಸೋಮಶೇಖರ ಶಿವಾಚಾರ್ಯರ 27 ಜಾತ್ರಾ ಮಹೋತ್ಸವ ಹಾಗೂ ಮಯೂರ ಶಿಲೆ ನಾಡೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಅಭಿನವಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಸಿರವಾರ
ಹಳ್ಳಿಗಳ ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ರೋಗ ಲಕ್ಷಣ ಕಂಡಬಂದು ತಕ್ಷಣ ಅಗತ್ಯ ಚಿಕಿತ್ಸೆ ಪಡೆಯಬೇಕು ಎಂದು ಅಭಿನವಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ನವಲಕಲ್ ಬೃಹನ್ಮಠದ ಲಿಂ.ಸೋಮಶೇಖರ ಶಿವಾಚಾರ್ಯರ 27 ಜಾತ್ರಾ ಮಹೋತ್ಸವ ಹಾಗೂ ಮಯೂರ ಶಿಲೆ ನಾಡೋತ್ಸವದ ಅಂಗವಾಗಿ ಕಬಡ್ಡಿ ಪಂದ್ಯಾವಳಿ ಮತ್ತು ಎತ್ತುಗಳಿಂದ ಕಲ್ಲಿನ ಭಾರ ಎಳೆಯುವ ಸ್ಪರ್ಧೆ ನಡೆದವು. ಈ ವೇಳೆ ಉಚಿತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಬಿರದಲ್ಲಿ 51 ಜನರು ರಕ್ತದಾನ ಮಾಡಿದರು. 480 ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಆಯುಷ್ ವೈದ್ಯ ಸುನೀಲ ಸರೋದೆ, ಮಾನ್ವಿ ವೈದ್ಯೆ ಅಂಬಿಕಾ ಮಧುಸೂಧನ ನಾಯಕ ನೇತೃತ್ವದಲ್ಲಿ ಖಾಸಗಿ ವೈದ್ಯರ ತಂಡ ಆರೋಗ್ಯ ತಪಾಸಣೆ ಶಿಬಿರ ನಡೆಸಿಕೊಟ್ಟರು.ಕಬ್ಬಡಿ ಪಂದ್ಯಾವಳಿಗೆ ಗಬ್ಬೂರಿನ ಬೂದಿಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಪಂದ್ಯಾವಳಿಯಲ್ಲಿ 25 ತಂಡಗಳು ಭಾಗವಹಿಸಿದ್ದವು. ಮೊದಲನೇ ಬಹುಮಾನ ಮುರ್ಕಿಗುಡ್ಡ ತಾಂಡಾದ ತಂಡ, ಎರಡನೇ ಬಹುಮಾನ ಸಿರವಾರ ಭಗತ್ ಸಿಂಗ್ ತಂಡ, ಮೂರನೆ ಬಹುಮಾನ ನವಲಕಲ್ಲು ವಾಲ್ಮೀಕಿ ಗೆಳೆಯರ ಬಳಗ ತಂಡ, ನಾಲ್ಕನೇ ಬಹುಮಾನ ನವಲಕಲ್ಲು ಸಿಂಧೂರ ಲಕ್ಷಣ ತಂಡ ಪಡೆದುಕೊಂಡರು.
ಶನಿವಾರ ಬೆಳಗ್ಗೆ ನಡೆದ ಎತ್ತುಗಳಿಂದ ಬಾರದ ಕಲ್ಲು ಎಳೆಯ ಸ್ಪರ್ಧೆಯನ್ನು ಬೂಪುರಿನ ಶಿವಮೂರ್ತಿ ಸ್ವಾಮೀಜಿ ಚಾಲನೆ ನೀಡಿದರು.