ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ಗಾಣದೇವತೆ ದೇವಸ್ಥಾನ ಉದ್ಘಾಟನೆ ಹಾಗೂ ಮುತ್ತೈದೆಯರ ಕುಂಭ ಮೆರವಣಿಗೆ ಮತ್ತು ಧರ್ಮಸಭೆ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಇಂಡಿ

ಗಾಣಿಗ ಸಮುದಾಯದ ಜನರು ಹೃದಯವಂತರು. ನಂಬಿಕೆ, ವಿಶ್ವಾಸಕ್ಕೆ ಅರ್ಹರು. ನಂಬಿದವರಿಗೆ ಕೈಬಿಡುವುದಿಲ್ಲ ಎಂದು ಮಾಜಿ ಶಾಸಕ ಬಿ.ಜಿ. ಪಾಟೀಲ ಹಂಲಸಂಗಿ ಹೇಳಿದರು.ತಾಲೂಕಿನ ಭತಗುಣಕಿ ಗ್ರಾಮದಲ್ಲಿ ಗಾಣದೇವತೆ ದೇವಸ್ಥಾನ ಉದ್ಘಾಟನೆ ಹಾಗೂ ಮುತ್ತೈದೆಯರ ಕುಂಭ ಮೆರವಣಿಗೆ ಮತ್ತು ಧರ್ಮಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಾಣದೇವತೆ ದೇವಸ್ಥಾನ ಲೋಕಾರ್ಪಣೆ ಮಾಡಿರುವುದು ಸಂತಸ ತಂದಿದೆ .ವೇದಿಕೆಯಲ್ಲಿ ಸರ್ವಜನಾಂಗದ ಜಾತ್ಯತೀತ ತತ್ವಕ್ಕೆ ಮನ್ನಣೆ ನೀಡಿರುವುದು ಗಾಣಿಗ ಸಮಾಜದ ದೊಡ್ಡ ಗುಣ. ಬೇರೆಯವರ ಸಂತೋಷದಲ್ಲಿ ಖುಷಿ ಪಡುವ ಜನಾಂಗ ಗಾಣಿಗ ಸಮುದಾಯ. ಯಾವುದೇ ರಾಜಕೀಯ ಅಧಿಕಾರ ಅಂತಸ್ತು ಒಂದೇ ಸಮಾಜದಿಂದ ಸಾಧ್ಯವಿಲ್ಲ. ಎಲ್ಲ ಸಮಾಜದ ಜನರೊಂದಿಗೆ ಸಾಮರಸ್ಯ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಗಾಣಿಗ ಸಮಾಜದ ಮುಖಂಡ ಮಲ್ಲು ಲೋಣಿ ಮಾತನಾಡಿ, ಭಗವಂತ ಸುಂದರ ಶರೀರ ಕೊಟ್ಟಿದ್ದಾನೆ. ಯಾರೂ ಯಾವ ಜಾತಿಯಲ್ಲಿ ಹುಟ್ಟುತ್ತೇವೆಂದು ಅರ್ಜಿ ಹಾಕಿಲ್ಲ. ಹುಟ್ಟು ಸಹಜ. ಇರುವ ದಿನಗಳಲ್ಲಿ ಪರೋಪಕಾರ ಮಾಡುವ ಮೂಲಕ ಪುಣ್ಯ ಕಟ್ಟಿಕೊಳ್ಳೋಣ. ಶಾಸಕ ಯಶವಂತರಾಯಗೌಡ ಪಾಟೀಲ ಅನುಪಸ್ಥಿತಿ ಇದ್ದರೂ ಕೂಡ ಈ ಗಾಣದೇವತೆ ದೇವಾಲಯಕ್ಕೆ ಕೇಳಿದಷ್ಟು ಅನುಧಾನ ನೀಡುವ ಭರವಸೆ ಕೊಟ್ಟಿದ್ದಾರೆ. ಇಂಡಿ ನಗರದಲ್ಲಿ ಶಾಸಕರ ನಿಧಿಯಲ್ಲಿ ಸಿದ್ದೇಶ್ವರ ಸ್ವಾಮಿಗಳ ಹೆಸರಿನಲ್ಲಿ ₹೫ ಕೋಟಿ ವೆಚ್ಚದಲ್ಲಿ ಸಿದ್ದೇಶ್ವರ ಭವನ ನಿರ್ಮಾಣವಾಗಲಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದು ತಿಳಿಸಿದರು.

ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಮಾತನಾಡಿ, ಗಾಣಿಗ ಸಮುದಾಯ ಎಲ್ಲರಿಗೂ ಒಳಿತನ್ನು ಬಯಸುವ ಜನರು. ನಾನು ಬಡವ, ನಿಮ್ಮ ಆರ್ಶೀವಾದ ನನ್ನ ಮೇಲಿರಲಿ. ಮುಂಬರುವ ದಿನಗಳಲ್ಲಿ ಉಪಕಾರ ಸ್ಮರಿಸುವಂತೆ ಕೆಲಸ ಮಾಡುತ್ತೇನೆ ಎಂದರು.

ಪ್ರೋ.ಸಿದ್ದಲಿಂಗ ಹಂಜಗಿ ,ಶೀಲವಂತ ಉಮರಾಣಿ ಮಾತನಾಡಿದರು. ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮೀಜಿ, ಕಾತ್ರಾಳ ಶ್ರೀಮಠ ಗಿರಿಶಾನಂದ ಸ್ವಾಮೀಜಿ, ಹಿರೇರೂಗಿ ಮುಕ್ತಿ ಮಂದಿರದ ಸುಗಲಮ್ಮತಾಯಿ ಸಾನ್ನಿಧ್ಯ ವಹಿಸಿ ಅರ್ಶೀವಚನ ನೀಡಿದರು.

ಸಿದ್ದಲಿಂಗ ಮಹಾರಾಜರು, ಶರಣಾನಂದ ಮಹಾರಾಜರು, ವಿವಿಧ ರಾಜ್ಯಗಳಿಂದ ನಾಗಾ ಸಾಧುಗಳು ಸಾನ್ನಿಧ್ಯ ವಹಿಸಿದರು.

ಅಣ್ಣಪ್ಪಸಾಹುಕಾರ ಖೈನೂರ, ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ಬಿ.ಬಿ ಪಾಸೋಡಿ, ಎ.ಎಸ್. ಗಾಣಿಗೇರ, ಹಣಮಂತರಾಯಗೌಡ ಪಾಟೀಲ, ರಾಘವೇಂದ್ರ ಕಾಪಸೆ, ಲಕ್ಮಣ ಕಾಡೆ, ಅಶೋಕ ತರಡಿ, ರವಿ ಲೋಣಿ, ಡಾ.ಸಂತೋಷ ಪಾಟೀಲ, ರಾಜಶೇಖರ ಕಾಡೆಗೋಳ, ಶಹಾಜೀ ಮಿಸಾಳೆ, ಸಿದ್ದು ನಿಚ್ಚಳ, ಮಲ್ಲು ಅಂಕಲಗಿ, ರುಕ್ಮುದ್ದಿನ್‌ ತದ್ದೇವಾಡಿ, ಪುಟ್ಟುಗೌಡ ಪಾಟೀಲ, ಭೀಮುಸಾಹುಕಾರ ಬಿರಾದಾರ, ಬಸಯ್ಯಾ ಹಿರೇಮಠ, ರಾಮಚಂದ್ರ ಯಂಕಂಚಿ, ಪ್ರದೀಪ ಉಟಗಿ ಗುತ್ತಿಗೆದಾರ ಈಶ್ವರ ಬೈರಶೆಟ್ಟಿ, ರವಿ ಕಲ್ಲೂರ,ಶಿವಪುತ್ರ ಜೇವರಗಿ, ಮಲ್ಲಿಕಾರ್ಜನ ಅಂಕಲಗಿ ವೇದಿಕೆಯಲ್ಲಿದ್ದರು.

ಇದೇ ವೇಳೆ ಗಾಣಿಗ ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಗಿರೀಶ ಹುಂಡೇಕಾರ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಸಂತೋಷ ಪಾಟೀಲ, ಪ್ರಶಾಂತ ಬೈರಶೆಟ್ಟಿ, ಗಿರೀಶ ಪಾಟೀಲ, ಬೆಂಗಳೂರು ಎಚ್.ಎ.ಎಲ್ ನ ರುರಾಜ ನಿಂಬಾಳ ಅವರನ್ನು ಸನ್ಮಾನಿಸಲಾಯಿತು.