ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಉಪಲೋಕಾಯುಕ್ತ-1 ನ್ಯಾಯಮೂರ್ತಿ ಕೆ.ಎನ್. ಪಣೇಂದ್ರ ಹಾಗೂ ಉಪಲೋಕಾಯುಕ್ತ-2 ನ್ಯಾಯಮೂರ್ತಿ ಬಿ.ವೀರಪ್ಪ ಅವರು ಸೋಂಪುರ, ನರಸಪ್ಪನಹಳ್ಳಿ, ಕಗ್ಗದಾಸಪುರ ಕೆರೆಗಳು ಹಾಗೂ ಕೆರೆಯ ಸುತ್ತಮುತ್ತಲ ಪ್ರದೇಶಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಕೆಲವೊಂದು ನ್ಯೂನ್ಯತೆಗಳು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಉಪಲೋಕಾಯುಕ್ತ-1 ನ್ಯಾಯಮೂರ್ತಿ ಕೆ.ಎನ್. ಪಣೇಂದ್ರ ಹಾಗೂ ಉಪಲೋಕಾಯುಕ್ತ-2 ನ್ಯಾಯಮೂರ್ತಿ ಬಿ.ವೀರಪ್ಪ ಅವರು ಸೋಂಪುರ, ನರಸಪ್ಪನಹಳ್ಳಿ, ಕಗ್ಗದಾಸಪುರ ಕೆರೆಗಳು ಹಾಗೂ ಕೆರೆಯ ಸುತ್ತಮುತ್ತಲ ಪ್ರದೇಶಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಕೆಲವೊಂದು ನ್ಯೂನ್ಯತೆಗಳು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.ಸೋಂಪುರ ಕೆರೆ:
ಬಿ.ಎಸ್.ಪಾಟೀಲ್ ಅವರು, ಬನಶಂಕರಿ 6ನೇ ಹಂತದಲ್ಲಿರುವ ಸೋಂಪುರ ಕೆರೆ ಹಾಗೂ ಕೆರೆಯ ಪಕ್ಕದಲ್ಲಿರುವ ಅಂಗಧೀರನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.* ಕೆರೆಗೆ ಯಾವುದೇ ಕಲುಷಿತ ನೀರು ಹರಿಯದಂತೆ ಮತ್ತು ಲೋಪವಾಗದಂತೆ ಕ್ರಮವಹಿಸಬೇಕು ಹಾಗೂ ಈ ಬಗ್ಗೆ ಕಾಲಕಾಲಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
* ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದ್ದು, ಕಾರ್ಯಾದೇಶದ ಪ್ರಕಾರ ಅಭಿವೃದ್ಧಿ ಕಾರ್ಯ ಕೈಗೊಂಡ ಕ್ರಮದ ಬಗ್ಗೆ ಕಾಲಕಾಲಕ್ಕೆ ವರದಿ ಸಲ್ಲಿಸುವಂತೆ ತಿಳಿಸಿದರು.* ಕೆರೆಯ ಒಳ ಭಾಗಕ್ಕೆ ಫೆನ್ಸಿಂಗ್ ಮಾಡುವಂತೆ ಸಂಬಂಧಿಸಿದ ಜಿ.ಬಿ.ಎ. ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಸ್ಥಳದಲ್ಲಿ ಹಾಜರಿದ್ದ ದೂರುದಾರರು, ಲೋಕಾಯುಕ್ತರಿಗೆ ಕೋರಿದ್ದು, ಲೋಕಾಯುಕ್ತರು ಸ್ಥಳದಲ್ಲಿ ಹಾಜರಿದ್ದ ಮುಖ್ಯ ಇಂಜಿನಿಯರ್‌ಗೆ ಈ ಬಗ್ಗೆ ಕ್ರಮ ವಹಿಸಿ, ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
* ಬನಶಂಕರಿ 6ನೇ ಹಂತದಲ್ಲಿರುವ ಲಿಂಗಧೀರನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಘಟಕದಲ್ಲಿ ದುರ್ವಾಸನೆ, ನೊಣಗಳ ಕಾಟ, ಲಿಚಿಟ್ ಸಮಸ್ಯೆಯನ್ನು ಕಂಡು ಲೋಕಾಯುಕ್ತರು ಬಿ.ಎಸ್.ಡಬ್ಲ್ಯೂ.ಎಂ.ಎಲ್.ನ ಹಾಗೂ ಜಿ.ಬಿ.ಎ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಎಲ್ಲಾ ಸಮಸ್ಯೆಯನ್ನು ಪರಿಹರಿಸಿ, ವರದಿ ಸಲ್ಲಿಸುವಂತೆ ತಿಳಿಸಿದ್ದರು.* ರಸ್ತೆ ಬದಿಗಳಲ್ಲಿ ಕಸವನ್ನು ಬಿಸಾಡಿವುದನ್ನು ಗಮನಿಸಿದ ಲೋಕಾಯುಕ್ತರು ಜಿ.ಬಿ.ಎ ಅಧಿಕಾರಿಗಳಿಗೆ ಕಸವನ್ನು ತೆರವುಗೊಳಿಸಿ, ಈ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ವರದಿಯನ್ನು ಮೂರು ದಿವಸಗಳೊಳಗೆ ಸಲ್ಲಿಸುವಂತೆ ಸೂಚಿಸಿದರು.
ನರಸಪ್ಪನಹಳ್ಳಿ ಕೆರೆ:ನ್ಯಾಯಮೂರ್ತಿ ಕೆ.ಎನ್. ಪಣೀಂದ್ರ ದೊಡ್ಡ ಬಿದರಕಲ್ಲು, ಪೀಣ್ಯದಲ್ಲಿರುವ ನರಸಪ್ಪನಹಳ್ಳಿ ಕೆರೆ ಹಾಗೂ ಕೆರೆಯ ಆಸು ಪಾಸು ತಪಾಸಣೆ ನಡೆಸಿದರು.
ಕೆರೆಯ ಸುತ್ತಲೂ ಕಟ್ಟಡದ ಅವಶೇಷಗಳು ಹಾಗೂ ತ್ಯಾಜ್ಯವನ್ನು ಬಿಸಾಡಿರುವುದು, ಕೆರೆ ಹಾಗೂ ಕೆರೆಯ ಬಪರ್ ವಲಯವನ್ನು ಒತ್ತುವರಿ ಮಾಡಿಕೊಂಡಿರುವುದು ಕಂಡು ಬಂದಿತು. ಕೆರೆಯ ಪಕ್ಕದಲ್ಲಿರುವ ಮನೆ ಹಾಗೂ ಕಾರ್ಖಾನೆಗಳಿಂದ ಕೆರೆಗೆ ಕಲುಷಿತ ನೀರು ಹರಿಯುತ್ತಿರುವುದು ಕಂಡು ಬಂತು. ಸ್ಥಳದಲ್ಲಿದ್ದ ಬಿ.ಬಿ.ಎ. ಅಧಿಕಾರಿಗಳಿಗೆ ಕೂಡಲೇ ಇದನ್ನು ತಡೆಗಟ್ಟಲು ಕ್ರಮ ವಹಿಸುವಂತೆ ಸೂಚಿಸಿದರು. ಹಳೆಯ ವಾಹಗಳನ್ನು ಕೆರೆಯ ಅಂಗಳದಲ್ಲಿಯೇ ನಿಲ್ಲಿಸಿರುವುದು ಕಂಡು ಬಂತು. ಮಾಗಡಿ ರಸ್ತೆಯಲ್ಲಿ ಅನೇಕ ಕಡೆ ತ್ಯಾಜ್ಯವನ್ನು ಸುರಿಯಲಾಗಿತ್ತು. ಇದನ್ನು ಕೂಡಲೇ ತೆಗೆಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತಿಳಿಸಿದರು.ಕಗ್ಗದಾಸಪುರ ಕೆರೆ:
ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಸಿ.ವಿ. ರಾಮನ್ ನಗರದಲ್ಲಿರುವ ಕಗ್ಗದಾಸಪುರ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗ ಅಲ್ಲಿನ ಸ್ಥಿತಿಗತಿ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಸಿ.ವಿ.ರಾಮನಗರದ ಕಗ್ಗದಾನಸಪುರ ಕೆರೆ ಸುತ್ತಲೂ ಬಫರ್ ವಲಯ ಬಿಟ್ಟಿರಲಿಲ್ಲ. ಕೆರೆಯ ಆವರರಣದಲ್ಲಿ ಹೊಸದಾಗಿ ಎಸ್.ಟಿ.ಪಿ. ನಿರ್ಮಿಸುತ್ತಿದ್ದು, ಅದು ಸಹ ಬಫರ್ ವಲಯದಲ್ಲಿದೆ. ಕೆರೆಯಲ್ಲಿ ಹೂಳು ತೆಗೆಯಲು 3 ಕೋಟಿ ಮೊತ್ತ ವ್ಯಯಿಸಿದ್ದರೂ ಗಿಡಗಂಟಿಗಳು, ಪ್ಲಾಸ್ಟಿಕ್ ವಸ್ತುಗಳು ಇರುವುದು ಕಂಡು ಬಂತು. ಕೆರೆಯ ಆವರಣದಲ್ಲಿ ನಾಯಿಗಳ ಹಾವಳಿ ಹೆಚ್ಚಿದ್ದು, ವಾಯು ವಿಹಾರ ಮಾಡಲು ಬರುವ ಸಾರ್ವಜನಿಕರಿಗೆ ತೊಂದರೆ ಉಂಟಾಗಿರುವುದು ಕಂಡು ಬಂದಿದೆ.
ಮಲ್ಲೇಶ್ ಪಾಳ್, ತಿಪ್ಪಸಂದ್ರ ಪೋಸ್ಟ್‌ನ ಬಿಇಎಂಎಲ್, ಎಚ್‌ಎಎಲ್ ಆವರಣದ ಗೋಡೆಗಳ ಎರಡು ಬದಿ ಹಾಗೂ ಸಾವಿತ್ರಿ ಬಾಪುಲೆ ಕೌಸಲ್ಯ ಭವನದ ಎದುರು ರಸ್ತೆ ಸರಿಯಾಗಿ ಕಸ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಆಸ್ಟಿನ್ ಟೌನ್‌ನಲ್ಲಿರುವ ಕೆಎಸ್‌ಆರ್‌ಟಿಸಿ, ಪೊಲೀಸ್ ವಸತಿ ಗೃಹ ಬಳಿ ಇರುವ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಕಸವನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.