ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯವನ್ನು ವೀಕ್ಷಣೆ ಮಾಡಲು ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಬಿಗ್ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿತ್ತು.ಪಂದ್ಯ ಆರಂಭಕ್ಕೂ ಮುನ್ನವೇ ನೆಹರೂ ಮೈದಾನಕ್ಕೆ ಆಗಮಿಸಿದ ಜನರು ಬಿಗ್ ಸ್ಕ್ರೀನ್‌ನಲ್ಲಿ ಮ್ಯಾಚ್ ನೋಡಲು ಉತ್ಸಕರಾಗಿದ್ದರು. ಎರಡು ತಂಡಗಳ ನಾಯಕರು ಟಾಸ್‌ಗಾಗಿ ಪಿಚ್‌ಗೆ ಇಳಿದಾಗ ಟೀಂ ಇಂಡಿಯಾ ಪರ ಘೋಷಣೆ ಮೊಳಗಿಸಿದರು. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಸೋತಿದ್ದರಿಂದ ಸ್ವಲ್ಪ ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು ಶರ್ಮ ಹಾಗೂ ಶುಭ್ಮನ್ ಗಿಲ್ ಬ್ಯಾಟ್ ಹಿಡಿದು ಕ್ರೀಸ್‌ಗೆ ಇಳಿಯುತ್ತಿದ್ದಂತೆ ಹರ್ಷೋದ್ಗಾರ ತೋರ್ಪಡಿಸಿದರು.
ನೆಹರು ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಣೆಗೆ ದೊಡ್ಡ ಸ್ಕ್ರೀನ್ ಅಳವಡಿಸಲಾಗಿದೆ. 10X30 ಅಡಿಯ ದೊಡ್ಡ ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗಿತ್ತು. ಸ್ಕ್ರೀನ್ ಮುಂದೆ ಜನ ಕುಳಿತುಕೊಳ್ಳಲು ಟೆಂಟ್ ನಿರ್ಮಿಸಲಾಗಿತ್ತು. ಪಂದ್ಯ ಆರಂಭ ಆಗುತ್ತಿದ್ದಂತೆ ಕ್ರೀಡಾಂಗಣದತ್ತ ಜನ ಜಮಾಯಿಸಿದರು. ಬಿಗ್ ಸ್ಕ್ರೀನ್‌ನಲ್ಲಿ ಬಿಗ್ ಮ್ಯಾಚ್‌ನ್ನು ಒಟ್ಟಿಗೆ ಕೂತು ನೋಡಿ ಸಂಭ್ರಮಿಸಿದರು.ನಗರದ ದುರ್ಗಿಗುಡಿ ಬಿ.ಎಸ್.ಆರ್. ಸೈಕಲ್ ಶಾಪ್ ಸ್ನೇಹಿತರ ಬಳಗದಿಂದ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬಿಗ್ ಸ್ಕ್ರೀನ್‌ನಲ್ಲಿ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯವನ್ನು ಚಿಣ್ಣರು, ಸಾರ್ವಜನಿಕರು ವೀಕ್ಷಣೆ ಮಾಡಿ ಎಂಜಾಯ್ ಮಾಡಿದರು.
ಈ ಬಾರಿ ವಿಶ್ವಕಪ್ ನಮ್ಮದೇ-ಸಂಸದ:ವಿಶ್ವಕಪ್ ಫೈನಲ್ ಹಿನ್ನೆಲೆ ಶಿವಮೊಗ್ಗದಲ್ಲಿ ಭಾನುವಾರ ಟೀಂ ಇಂಡಿಯಾಗೆ ಶುಭ ಕೋರಿದ ಸಂಸದ ಬಿ.ವೈ.ರಾಘವೇಂದ್ರ ಈ ಬಾರಿ ವಿಶ್ವಕಪ್ ನಮ್ಮದೇ ಎಂದರು.
ಈಗಾಗಲೇ ಎರಡು ಬಾರಿ ವಿಶ್ವಕಪ್ ಗೆದ್ದಿರುವ ಭಾರತ ಮೂರನೇ ಬಾರಿ ಕೂಡ ಗೆಲುವು ಸಾಧಿಸಲಿದೆ. ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಕ್ರೀಡಾಭಿಮಾನಿಗಳು ಸಹಿ ಸಂಗ್ರಹ ಅಭಿಯಾನ ಮಾಡಿದ್ದಾರೆ. ನಾನು ಕೂಡ ಮಧ್ಯಾಹ್ನ 2 ಗಂಟೆ ನಂತರ ರಾಜಕೀಯ ಚಟುವಟಿಕೆಗಳಿಗೆ ರಜಾ ನೀಡಿ, ಕುಟುಂಬ ಸಮೇತ ಫೈನಲ್ ಪಂದ್ಯವನ್ನು ವೀಕ್ಷಣೆ ಮಾಡುತ್ತೇನೆ ಎಂದರು.ಟೀಂ ಇಂಡಿಯಾ ಗೆಲುವಿಗೆ ಚಂಡಿಕಾ ಹೋಮ:
2023ರ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಗೆಲುವಿಗೆ ಪ್ರಾರ್ಥಿಸಿ, ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಹೋಮ ಮತ್ತು ಪ್ರಾರ್ಥನೆ ಸಲ್ಲಿಸಲಾಯಿತು. ದೇಗುಲದ ಧರ್ಮದರ್ಶಿ ರಾಮಪ್ಪ ಮತ್ತು ಆಡಳಿತ ಮಂಡಳಿ ವತಿಯಿಂದ ಹೋಮ ಮತ್ತು ಪ್ರಾರ್ಥನೆ ಸಲ್ಲಿಸಲಾಗಿದೆ. ಶಿವಮೊಗ್ಗದಲ್ಲಿ ಕೋಟೆ ಯುವಕರ ಸಂಘದ ನೇತೃತ್ವದಲ್ಲಿ ಕ್ರೀಡಾಭಿಮಾನಿಗಳು ಭಾರತ ವಿಶ್ವಕಪ್ ಗೆಲ್ಲಲಿ ಎಂದು ಹಾರೈಸಿ, ಶಿವಮೊಗ್ಗದ ಕೋಟೆ ರಸ್ತೆಯ ಸೀತಾ ರಾಮಾಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಪೂಜೆಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಪಾಲ್ಗೊಂಡಿದ್ದರು.ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಸ್.ಎನ್.ಚನ್ನಬಸಪ್ಪ, 1975ರಲ್ಲಿ ಆರಂಭಗೊಂಡ ವಿಶ್ವಕಪ್ ಇದುವರೆಗೂ 12 ವಿಶ್ವ ಕಪ್ ಪಂದ್ಯಾವಳಿಗಳು ನಡೆದಿದೆ. ಈ 12 ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾರತ ಇದುವರೆಗೂ ಎರಡು ವಿಶ್ವಕಪ್ ಗೆದ್ದಿದ್ದು, ಈ ಬಾರಿ ಮೂರನೆಯ ಬಾರಿಗೆ ವಿಶ್ವಕಪ್ ಗೆಲ್ಲಲಿದೆ. ಭಾರತ ವಿಶ್ವಕಪ್ ಗೆಲ್ಲಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಪೂಜೆ ಮಾಡಿದ್ದೇವೆ. ಈ ಬಾರಿ ಭಾರತ ತಂಡವೇ ವಿಶ್ವಕಪ್ ಖಚಿತವಾಗಿ ಗೆಲ್ಲಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಸ್ಲಿಂ ಸಮುದಾಯ ಪ್ರಾರ್ಥನೆ:ವರ್ಲ್ಡ್ ಕಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾ ಗೆದ್ದು ಬರಲಿ ಎಂದು ಪ್ರಾರ್ಥಿಸಿ ಸಾಗರದಲ್ಲಿ ಎಸ್.ಎನ್. ನಗರದ 4ನೇ ತಿರುವಿನ ನೂರಾನಿ ಮಸ್ಜಿದ್‌ನಲ್ಲಿ ಮುಸ್ಲಿಂ ಸಮುದಾಯದವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಧ್ಯಾಹ್ನದ ನಮಾಜಿನ ನಂತರ ಅಧ್ಯಕ್ಷ ಸಾಧಿಕ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.
- - - -19ಎಸ್‌ಎಂಜಿಕೆಪಿ05: ಶಿವಮೊಗ್ಗ ನಗರದ ನೆಹರೂ ಕ್ರೀಡಾಂಗಣದಲ್ಲಿ ಅಳವಡಿಸಿದ್ದ ಬಿಗ್ ಸ್ಕ್ರೀನ್‌ನಲ್ಲಿ ಜನರು ವಿಶ್ವಕಪ್ ಫೈನಲ್ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಿದರು.-19ಎಸ್‌ಎಂಜಿಕೆಪಿ01: ವಿಶ್ವಕಪ್ ಫೈನಲ್ ಪಂದ್ಯ ಹಿನ್ನೆಲೆ ಶಿವಮೊಗ್ಗ ನಗರದ ದುರ್ಗಿಗುಡಿ ಬಿ.ಎಸ್.ಆರ್. ಸೈಕಲ್ ಶಾಪ್ ಸ್ನೇಹಿತರ ಬಳಗದಿಂದ ಕ್ರಿಕೆಟ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. -19ಎಸ್‌ಎಂಜಿಕೆಪಿ02: ಶಿವಮೊಗ್ಗ ನಗರದ ನೆಹರೂ ಕ್ರೀಡಾಂಗಣದಲ್ಲಿ ಬಿಗ್ ಸ್ಕ್ರೀನ್‌ನಲ್ಲಿ ಜನರು ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಣೆ ಮಾಡಿದರು.