ವಿಕಲಚೇತನರು ದೃಢ ಮನಸ್ಸು, ಛಲದೊಂದಿಗೆ ಸಾಧನೆ ಮಾಡಬೇಕು: ಡಾ.ಟಿ.ನರಸಿಂಹರಾಜು

| Published : Nov 28 2024, 12:33 AM IST

ವಿಕಲಚೇತನರು ದೃಢ ಮನಸ್ಸು, ಛಲದೊಂದಿಗೆ ಸಾಧನೆ ಮಾಡಬೇಕು: ಡಾ.ಟಿ.ನರಸಿಂಹರಾಜು
Share this Article
  • FB
  • TW
  • Linkdin
  • Email

ಸಾರಾಂಶ

ವಿಕಲಚೇತನರಿಗೂ ವಿಶೇಷ ಶಿಕ್ಷಣ, ಸಾಕಷ್ಟು ಉದ್ಯೋಗಾವಕಾಶಗಳಿವೆ. ಸ್ವತಂತ್ರ, ಸ್ವಾವಲಂಬಿ ಬದುಕನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಹೊಸ ತಾಂತ್ರಿಕ ಆವಿಷ್ಕಾರಗಳು ಅಗತ್ಯ ನೆರವು ನೀಡಿ ಮುನ್ನಡೆಸಲಿವೆ. ವಿಕಲಚೇತನರು ಅಸಹಾಯಕರಲ್ಲ ಅವರು ಕೂಡ ಸಮಾಜದಲ್ಲಿ ಸಮಾನರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ವಿಕಲಚೇತನರು ತಾವು ಅಸಹಾಯಕರು ಎಂದು ತಿಳಿಯದೆ ದೃಢವಾದ ಮನಸ್ಸು ಮತ್ತು ಛಲದೊಂದಿಗೆ ಸಾಧನೆ ಮಾಡಬೇಕು ಎಂದು ತಾಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಡಾ.ಟಿ.ನರಸಿಂಹರಾಜು ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿವಿದೋದ್ದೇಶ ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರು ಮತ್ತು ವಿಕಲಚೇತನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ನಡೆದ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.

ವಿಕಲಚೇತನರಿಗೂ ವಿಶೇಷ ಶಿಕ್ಷಣ, ಸಾಕಷ್ಟು ಉದ್ಯೋಗಾವಕಾಶಗಳಿವೆ. ಸ್ವತಂತ್ರ, ಸ್ವಾವಲಂಬಿ ಬದುಕನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಹೊಸ ತಾಂತ್ರಿಕ ಆವಿಷ್ಕಾರಗಳು ಅಗತ್ಯ ನೆರವು ನೀಡಿ ಮುನ್ನಡೆಸಲಿವೆ. ವಿಕಲಚೇತನರು ಅಸಹಾಯಕರಲ್ಲ ಅವರು ಕೂಡ ಸಮಾಜದಲ್ಲಿ ಸಮಾನರು. ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಮುನ್ನಲೆಗೆ ಬರಬೇಕು ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಅರುಣ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ರಾಜಶೇಖರ್, ಗಂಜಿಗೆರೆ ವಿಶೇಷ ಶಾಲೆ ಶಿಕ್ಷಕಿ ಪ್ರೀತಿ, ರಮಣ ಮಹಿರ್ಷಿ ಅಂಧರ ಪರಿಷತ್ತಿನ ಪ್ರತಾಪ್, ತಾಲೂಕಿನ ಎಲ್ಲಾ ಗ್ರಾಪಂ ಗ್ರಾಮೀಣ ಮತ್ತು ನಗರ ಪುನರ್ ವಸತಿ ಕಾರ್ಯಕರ್ತರಾದ ಪುರಸಭೆಯ ಹರ್ಷ ಹೆಚ್.ವಿ, ನಾಗರಾಜು ಚೌಡೇನಹಳ್ಳಿ ಸಿ.ಪಿ.ರಘು ಸೇರಿದಂತೆ ಹಲವರಿದ್ದರು.

ಇಂದು ದೇವರ ಹೆಣ ನಾಟಕ ಪ್ರದರ್ಶನ

ನಾಗಮಂಗಲ:

ಪಟ್ಟಣದ ಕನ್ನಡ ಸಂಘವು ಸರ್ಕಾರಿ ಪದವಿ ಪೂರ್ವಕಾಲೇಜು ಆವರಣದಲ್ಲಿ ಆಯೋಜಿಸಿರುವ 16ನೇ ನಾಗರಂಗ ನಾಟಕೋತ್ಸವದ ನಾಲ್ಕನೇ ದಿನವಾದ ನ.28ರಂದು ಸಂಜೆ 7 ಗಂಟೆಗೆ ಧಾರವಾಡದ ಸಮುದಾಯ ತಂಡ ಪ್ರಸ್ತುತ ಪಡಿಸುವ ವಾಸುದೇವ ಗಂಗೇರ ನಿರ್ದೇಶನದ ದೇವರ ಹೆಣ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

ನಾಟಕದ ಸಾರಾಂಶ: ಈ ನಾಡಿನಲ್ಲಿ ಕೆಳವರ್ಗದ ಜನರ ಸಾಮಾಜಿಕ ಜೀವನದ ಹಸಿವು, ಸಂಕಟ, ನೋವು ಅಧಿಕಾರಶಾಹಿ ವರ್ಗದವರ ಶೋಷಣೆ, ಪೊಲೀಸರ ದೌರ್ಜನ್ಯ ನ್ಯಾಯ ಹಾಗೂ ಶಿಕ್ಷಣದಿಂದ ವಂಚಿತರಾಗಿ ಅನುಭವಿಸುವ ಧಾರುಣ ಬದುಕಿನ ಸುತ್ತ ಹೆಣೆಯಲಾಗಿರುವ ಪ್ರಸಿದ್ಧ ಕಥೆಗಾರ ಶ್ರೀ ಕುಂ.ವೀರಭದ್ರಪ್ಪ ಅವರ ಕಥೆಯನ್ನಾಧರಿಸಿದ ನಾಟಕವಿದು.