ಬ್ಯಾಡಗಿ ಮಾರುಕಟ್ಟೆಯಲ್ಲಿ ₹70 ಸಾವಿರ ಗಡಿ ತಲುಪಿದ ಕಡ್ಡಿ ತಳಿ ಮೆಣಸು

| Published : Dec 22 2023, 01:30 AM IST

ಬ್ಯಾಡಗಿ ಮಾರುಕಟ್ಟೆಯಲ್ಲಿ ₹70 ಸಾವಿರ ಗಡಿ ತಲುಪಿದ ಕಡ್ಡಿ ತಳಿ ಮೆಣಸು
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಜಿಲ್ಲೆ ಬ್ಯಾಡಗಿ ಮಾರುಕಟ್ಟೆಯಲ್ಲಿ ಗುರುವಾರ ಕಡ್ಡಿ ತಳಿ ಮೆಣಸಿನಕಾಯಿ ದರದಲ್ಲಿ ದಿಢೀರ್ ಏರಿಕೆ ಕಂಡು ಬಂದಿದ್ದು, ಪ್ರತಿ ಕ್ವಿಂಟಲ್‌ ಮೆಣಸು ₹70 ಸಾವಿರಕ್ಕೆ ಮಾರಾಟವಾಗಿದೆ.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ಕಡ್ಡಿ ತಳಿ ಮೆಣಸಿನಕಾಯಿ ದರದಲ್ಲಿ ದಿಢೀರ್ ಏರಿಕೆ ಕಂಡು ಬಂದಿದ್ದು, ಪ್ರತಿ ಕ್ವಿಂಟಲ್‌ ಮೆಣಸು ₹70 ಸಾವಿರಕ್ಕೆ ಮಾರಾಟವಾಗಿದೆ. ಆದರೆ ಗುಂಟೂರು ಮತ್ತು ಡಬ್ಬಿ ತಳಿಗಳ ದರ ಸ್ಥಿರತೆ ಕಾಯ್ದುಕೊಂಡಿವೆ. ಸೋಮವಾರ ಕಡ್ಡಿ ತಳಿ ಪ್ರತಿ ಕ್ವಿಂಟಲ್‌ಗೆ ಸರಾಸರಿ ₹42,500 ಗೆ ಮಾರಾಟವಾಗಿದ್ದು, ಗುರುವಾರ ಮಾತ್ರ ₹44500 ಕ್ಕೇರಿತ್ತು. ಗುಣಮಟ್ಟದ ಕಡ್ಡಿತಳಿ ₹70 ಸಾವಿರ ವರೆಗೂ ಮಾರಾಟವಾಗಿದ್ದು ವಿಶೇಷವಾಗಿತ್ತು.

ಸೋಮವಾರಕ್ಕೆ ಹೋಲಿಸಿದರೆ ಆವಕ ಕೂಡ 50000 ಗಡಿ ದಾಟಿದ್ದು ಗುರುವಾರ ಒಟ್ಟು 53,669 ಚೀಲ ಮೆಣಸಿನಕಾಯಿ 251 ಕಮಿಷನ್‌ ಎಜೆಂಟ್‌ರ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿತ್ತು. ಒಟ್ಟು 292 ಖರೀದಿದಾರರು ಟೆಂಡರ್‌ನಲ್ಲಿ ಪಾಲ್ಗೊಂಡಿದ್ದಾಗಿ ಮಾರುಕಟ್ಟೆ ಮೂಲಗಳು ದೃಢಪಡಿಸಿವೆ.

ಗುರುವಾರ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ ₹3689, ಗರಿಷ್ಠ ₹70080, ಸರಾಸರಿ ₹44509, ಡಬ್ಬಿತಳಿ ಕನಿಷ್ಠ ₹3429, ಗರಿಷ್ಠ ₹62399, ಸರಾಸರಿ ₹43669, ಗುಂಟೂರು ಕನಿಷ್ಠ ₹16029, ಗರಿಷ್ಠ ₹19289, ಸರಾಸರಿ ₹16209 ಗೆ ಮಾರಾಟವಾಗಿದೆ.