ಇಂಡಿಯಾ ಕೌಶಲ್ಯ ಸ್ಪರ್ಧೆಯಲ್ಲಿ ಟಿಟಿಟಿಐ ವಿದ್ಯಾರ್ಥಿಗಳ ಸಾಧನೆ

| Published : Jun 03 2024, 12:30 AM IST

ಇಂಡಿಯಾ ಕೌಶಲ್ಯ ಸ್ಪರ್ಧೆಯಲ್ಲಿ ಟಿಟಿಟಿಐ ವಿದ್ಯಾರ್ಥಿಗಳ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ನವದೆಹಲಿಯ ಯಶೋ ಭೂಮಿ ದ್ವಾರಕಾದಲ್ಲಿ ಇತ್ತೀಚೆಗೆ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಭಾರತ ಕೌಶಲ್ಯ ಸ್ಪರ್ಧೆ - 2024ರಲ್ಲಿ ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆಯ(ಟಿಟಿಟಿಐ) ವಿದ್ಯಾರ್ಥಿಗಳು ಅದ್ಭುತ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.

ರಾಮನಗರ: ನವದೆಹಲಿಯ ಯಶೋ ಭೂಮಿ ದ್ವಾರಕಾದಲ್ಲಿ ಇತ್ತೀಚೆಗೆ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಭಾರತ ಕೌಶಲ್ಯ ಸ್ಪರ್ಧೆ - 2024ರಲ್ಲಿ ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆಯ(ಟಿಟಿಟಿಐ) ವಿದ್ಯಾರ್ಥಿಗಳು ಅದ್ಭುತ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.

ಸಂಯೋಜಿತ ಉತ್ಪಾದನೆ (ಎಡಿಟಿವ್ ಮ್ಯಾನುಫ್ಯಾಕ್ಚರಿಂಗ್) ವಿಭಾಗದ ವೈಯಕ್ತಿಕ ಪ್ರತಿಸ್ಪರ್ಧಿಯಾಗಿ ವಿ.ಪ್ರೇಮ್ ಚಿನ್ನದ ಪದಕ ಗಳಿಸಿದ್ದಾರೆ. ಮ್ಯಾನುಫ್ಯಾಕ್ಚರಿಂಗ್ ಟೀಮ್ ಚಾಲೆಂಜ್‌ನಲ್ಲಿ ಎಂ.ಯು.ಮೋಹಿತ್, ಆರ್.ಹರೀಶ್ ಮತ್ತು ವಿ.ನೆಲ್ಸನ್ ತಂಡ ಚಿನ್ನದ ಪದಕಗಳನ್ನು ಪಡೆದುಕೊಂಡಿದೆ. ಮೆಕಾಟ್ರಾನಿಕ್ಸ್ ವಿಭಾಗದಲ್ಲಿ ಸಿ.ಎಸ್.ದರ್ಶನ್ ಗೌಡ ಮತ್ತು ಎಸ್.ಎಂ.ಭಾನು ಪ್ರಸಾದ್ ತಂಡ ಚಿನ್ನದ ಪದಕ ಗಳಿಸಿದ್ದು, ಕೆ.ವೈ.ಹೇಮಂತ್ ಮತ್ತು ಬಿ. ಉದಯ್ ಕುಮಾರ್ ತಂಡ ಬೆಳ್ಳಿ ಪದಕ ಪಡೆದುಕೊಂಡಿದೆ. ಎ.ಎಸ್.ರೋಹನ್ ಬೆಳ್ಳಿ ಪದಕ ಮತ್ತು ಎಸ್.ಎಂ.ಸುದೀಪ್ ಅವರು ಕಾರ್ ಪೇಂಟಿಂಗ್‌ನಲ್ಲಿ ವೈಯಕ್ತಿಕ ಸ್ಪರ್ಧಿಯಾಗಿ ಮೆಡಲಿಯನ್ ಆಫ್ ಎಕ್ಸಲೆನ್ಸ್ ಪಡೆದಿದ್ದಾರೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಸ್ಪರ್ಧೆಯು ಯುವ ಪ್ರತಿಭೆಗಳಿಗೆ ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಎನ್‌ಎಸ್‌ಡಿಸಿಯ ಉನ್ನತ ಅಧಿಕಾರಿ ಮೋನಿಕಾ ನಂದಾ ಮಾತನಾಡಿ, ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024ರಲ್ಲಿ ಗಮನಾರ್ಹ ಸಾಧನೆ ಮಾಡಿದ ಟಿಟಿಟಿಐನ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ವಿಜೇತರು ತಮ್ಮ ಸಂಸ್ಥೆಗೆ ಗೌರವ ತರುವುದಲ್ಲದೆ, ಜಾಗತಿಕ ಮಟ್ಟದಲ್ಲಿ ಭಾರತೀಯ ಕೌಶಲ್ಯ ಅಭಿವೃದ್ಧಿಯ ಖ್ಯಾತಿಯನ್ನು ಹೆಚ್ಚಿಸುತ್ತಾರೆ. ವಿಶ್ವ ಕೌಶಲ್ಯ ಸ್ಪರ್ಧೆಗೆ ಆಯ್ಕೆಯಾದವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತಕ್ಕೆ ಕೀರ್ತಿ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟಿಕೆಎಂನ ಕಾರ್ಯಾನಿರ್ವಾಹಕ ಉಪಾಧ್ಯಕ್ಷ ಜಿ.ಶಂಕರ ಮಾತನಾಡಿ, ಇಂಡಿಯಾ ಸ್ಕಿಲ್ಸ್ ಕಾಂಪಿಟಿಷನ್ 2024ರಲ್ಲಿ ಟಿಟಿಟಿಐ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಇಲ್ಲಿನ ವಿಜೇತರು ಸೆಪ್ಟೆಂಬರ್‌ನಲ್ಲಿ ಫ್ರಾನ್ಸ್‌ನ ಲಿಯಾನ್‌ನಲ್ಲಿ ನಡೆಯಲಿರುವ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಟಿಟಿಟಿಐ ಮೂಲಕ ಗ್ರಾಮೀಣ ಯುವಕರನ್ನು ವಿಶ್ವದರ್ಜೆಯ ಸ್ಪರ್ಧಾತ್ಮಕ ತಂತ್ರಜ್ಞರನ್ನಾಗಿ ಪರಿವರ್ತಿಸಲು ಮತ್ತು ಸ್ಕಿಲ್ ಇಂಡಿಯಾ ಮತ್ತು ವಿಕಸಿತ ಭಾರತ್ 2047’ ನಂತಹ ಗುರಿಗಳನ್ನು ಮುಟ್ಟಲು ಕಠಿಣ ಪರಿಶ್ರಮವನ್ನು ಮುಂದುವರೆಸುತ್ತೇವೆ. ಟಿಟಿಟಿಐ ಸುಧಾರಿತ ತಾಂತ್ರಿಕ ಶಿಕ್ಷಣವನ್ನು ಒದಗಿಸಲು ಮತ್ತು ಗ್ರಾಮೀಣ ಯುವಕರಲ್ಲಿ ಒಟ್ಟಾರೆ ಅಭಿವೃದ್ಧಿಯನ್ನು ಉತ್ತೇಜಿಸಲು ಬದ್ಧವಾಗಿದೆ ಎಂದು ತಿಳಿಸಿದರು.2ಕೆಆರ್ ಎಂಎನ್ 1.ಜೆಪಿಜಿ

ಇಂಡಿಯಾ ಕೌಶಲ್ಯ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಟಿಟಿಟಿಐ ವಿದ್ಯಾರ್ಥಿಗಳು.